Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 41

2021-05-23 13:18:29
ಎರಡು ದಿನದಲ್ಲಿ 80 ಕೋವಿಡ್ ಪ್ರಕರಣ: ಧಾರವಾಡದ ಸಿದ್ದೇಶ್ವರ ನಗರ ಸೀಲ್ ಡೌನ್

ಧಾರವಾಡ: ಇಲ್ಲಿನ ನಗರ ಲಕಮನಹಳ್ಳಿ ಗ್ರಾಮ ವ್ಯಾಪ್ತಿಯ ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸಿದ್ದೇಶ್ವರ ನಗರದಲ್ಲಿ ಕಳೆದ‌ ಎರಡು ದಿನಗಳಲ್ಲಿ 80 ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಾಲೋನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಕಟ್ಟಿಗೆ ಬಳಸಿ, ಬ್ಯಾರಿಕೇಡಿಂಗ್ ಮಾಡಲಾಗಿದೆ. ಇಂದು ಬೆಳಿಗ್ಗೆ ಸಿದ್ದೇಶ್ವರ ಕಾಲೋನಿಯನ್ನುಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಕಾಲೋನಿಯ ಕೆಲವರು ಕೋವಿಡ್ ಪಾಜಿಟಿವ್ ಬಂದರೂ ಕೋವಿಡ್ ಕಾಳಜಿ ಕೇಂದ್ರಗಳಿಗೆ ಹೋಗಲು ನಿರಾಕರಿಸಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಶೀಲ್ದಾರ ಸಂತೋಷ ಬಿರಾದಾರ ಹಾಗೂ ಸಹಾಯಕ ಪೋಲಿಸ್ ಆಯುಕ್ತೆ ಅನುಷಾ.ಜಿ. ಅವರು ಕಾಲೋನಿ ಪ್ರಮುಖರಿಗೆ ಹಾಗೂ ಸೋಂಕಿತರ ಕುಟುಂಬದ ಸದಸ್ಯರಿಗೆ ಮಾಹಿತಿ, ತಿಳುವಳಿಕೆ ನೀಡಿ, ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗುವಂತೆ ಜಾಗೃತಿ ಮೂಡಿಸಿದರು.

View full article
46 views10:18
ओपन / कमेंट
2021-05-23 13:18:09
ಚಾಮರಾಜನಗರ; ಕೊರೊನಾ ದೇವಿಯ ಪ್ರತಿಷ್ಠಾಪಿಸಿ ಪೂಜೆ!

ಚಾಮರಾಜನಗರ, ಮೇ 23; ಇವತ್ತು ನಾವು ಪೂಜಿಸುವ ಬಹಳಷ್ಟು ಮಾರಮ್ಮ ದೇಗುಲಗಳು ಹಿಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದಾಗ ಅವುಗಳ ನಿರ್ನಾಮಕ್ಕಾಗಿ ಜನರೇ ಪ್ರತಿಷ್ಠಾಪಿಸಿ ಪೂಜಿಸಿದ ದೇಗುಲಗಳಾಗಿವೆ. ಮಾರಮ್ಮ ದೇಗುಲಗಳಿಗೆ ಸಾಂಕ್ರಾಮಿಕ ರೋಗವನ್ನು ನಾಶ ಮಾಡುವ ಶಕ್ತಿಯಿದೆ ಎಂಬ ನಂಬಿಕೆ ಇವತ್ತಿಗೂ ಜನರಲ್ಲಿದೆ. ಹೀಗಾಗಿಯೇ ಪ್ರತಿವರ್ಷ ಮಾರಮ್ಮ ದೇಗುಲಗಳಲ್ಲಿ ವಿಶೇಷ ಪೂಜೆ ಜಾತ್ರೆಗಳನ್ನು ಮಾಡಲಾಗುತ್ತದೆ. ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ಬಹುಶಃ ಇವತ್ತಿನ ಕೊರೊನಾ ಮಹಾಮಾರಿ ಹಿಂದೆಂದೂ ಕಾಣದ ಮಹಾ ಸಾಂಕ್ರಾಮಿಕ ರೋಗವಾಗಿದ್ದು ಇಡೀ ಮನುಕುಲವೇ ನಡಗುವಂತಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
45 views10:18
ओपन / कमेंट
2021-05-23 10:18:18
ಆರೋಗ್ಯ ಎಮರ್ಜೆನ್ಸಿಯ ವೇಳೆ ರಾಜಕಾರಣಿಗಳು ದೇವೇಗೌಡರಿಂದ ಕಲಿಯಬೇಕಾದ ಪಾಠ

ರಾಜ್ಯ ರಾಜಕೀಯದಲ್ಲಿ ಒಂದು ಮಾತಿದೆ. ಎಲ್ಲಿ, ಯಾವಾಗ, ಹೇಗೆ ರಾಜಕೀಯ ಮಾಡಬೇಕು, ಸಮಯ ಸಂದರ್ಭದಲ್ಲಿ ಹೇಗೆ ಪಕ್ಷಾತೀತವಾಗಿ ದೇಶದ ಪರವಾಗಿ ನಿಲ್ಲಬೇಕು ಎನ್ನುವುದನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರಿಂದ ಕಲಿಯಬೇಕು ಎಂದು. ಕೇಂದ್ರದಲ್ಲಿ ಸತತವಾಗಿ ಎರಡು ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ, ಯಾವ ಸಂದರ್ಭದಲ್ಲಿ ಮೋದಿ ಸರಕಾರವನ್ನು ವಿರೋಧಿಸಬೇಕು, ಯಾವ ಸಂದರ್ಭದಲ್ಲಿ ತಮ್ಮ ಆಳವಾದ ಅನುಭವದ ಸಲಹೆಯನ್ನು ನೀಡಬೇಕು ಎನ್ನುವುದನ್ನು ಗೌಡ್ರಿಗಿಂತ ಚೆನ್ನಾಗಿ ಹಾಲೀ ರಾಜಕೀಯದಲ್ಲಿ ಇನ್ನೊಬ್ಬರಿಲ್ಲ ಎನ್ನಬಹುದು. 224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಒದಗಿಸಿದ ಪ್ರಾಣವಾಯು ಎಷ್ಟು? ಈಗಿನ ಕೊರೊನಾ ಎರಡನೇ ಅಲೆಯಂತಹ ಆರೋಗ್ಯ ತುರ್ತು ಪರಿಸ್ಥಿತಿಯ ವೇಳೆ ಜೆಡಿಎಸ್, ಅದರಲ್ಲೂ ಪ್ರಮುಖವಾಗಿ ದೇವೇಗೌಡ್ರು ತೋರುತ್ತಿರುವ ಮುತ್ಸದ್ದಿತನ ಪ್ರಶಂಸೆಗೊಳಗಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
11 views07:18
ओपन / कमेंट
2021-05-22 22:18:13
​ಕೊರೋನ ಗಂಭೀರತೆ ಬಗ್ಗೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯರಿಂದ ಜಾಗೃತಿ

ಮಂಗಳೂರು, ಮೇ 22: ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯ ದೇವಾಡಿಗ ಅವರು ಕೋವಿಡ್‌ನಿಂದ ತನ್ನ ಕುಟುಂಬ ಸದಸ್ಯನನ್ನು ಕಳೆದುಕೊಂಡರೂ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿ ಯುವಜನರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಡೊಂಬಯ್ಯ ಅವರ ಅಣ್ಣನ ಮಗ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದು, ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷ್ಯ ಮಾಡಿದ ಪರಿಣಾಮ ಸೋಂಕು ಬಿಗಡಾಯಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರೋಗ ಉಲ್ಬಣಗೊಂಡು ಬಳಿಕ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾಖಲಾದ ಎರಡನೇ ದಿನದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಇತ್ತೀಚೆಗೆ ಮೃತಪಟ್ಟಿದ್ದರು. ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖ ಇನ್ನೂ ಡೊಂಬಯ್ಯ ಅವರಲ್ಲಿ ಮಡುಗಟ್ಟಿರುವುದು ಅವರ ಮಾತಿನಿಂದಲೇ ಸ್ಪಷ್ಟವಾಗುತ್ತಿತ್ತು.

View full article
44 views19:18
ओपन / कमेंट
2021-05-22 22:18:07
ವಿಖಾಯ ಕರ್ನಾಟಕ ಯುಎಇ ವತಿಯಿಂದ ತಾಯಿನಾಡಿಗೆ ಆಕ್ಸಿಜನ್ ಸಿಲಿಂಡರ್, ಮೆಡಿಕಲ್ ಕಿಟ್ಟ್

ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ ತಾಯಿನಾಡಿನಲ್ಲಿ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಳುಹಿಸಿ ಕೊಡಲು DONATE OXYGEN & SAVE LIVES ಅಭಿಯಾನವನ್ನು ದುಬೈಯಲ್ಲಿ ಆನ್ಲೈನ್ ಮೂಲಕ ಆಯೋಜಿಸಿಲಾಗಿತ್ತು. ಅಭಿಯಾನವನ್ನು ಯಶಸ್ಸಿಗೊಳಿಸಲು ಅನಿವಾಸಿ ಉದ್ಯಮಿಗಳು, ಉದಾರಿ ದಾನಿಗಳು, ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು. ಶೆರೀಫ್ ಕಾವು ಮತ್ತು ರಫೀಕ್ ಸುರತ್ಕಲ್ ಅವರು ಅಭಿಯಾನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. SHIPWAVES DUBAI ಇದರ ಮಾಲಕರಾದ ಮುಹಮ್ಮದ್ ಹಾರಿಸ್ ಅವರು ದುಬೈ ಯಿಂದ ಮಂಗಳೂರಿಗೆ ಉಚಿತ ಕಾರ್ಗೊ ವ್ಯವಸ್ಥೆ ಏರ್ಪಡಿಸಿ ಸಹಕರಿಸಿದರು. ಇಂದು ಬೆಳಿಗ್ಗೆ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ನೇತೃತ್ವದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ ಅವರ ದುವಾದೊಂದಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿ ಕೊಡಲಾಯಿತು.

View full article
40 views19:18
ओपन / कमेंट
2021-05-22 10:18:10
ಚಿಕ್ಕಮಗಳೂರು: ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ತಡೆದ ಜನರ ಮೇಲೆ ಕೇಸ್!

ಚಿಕ್ಕಮಗಳೂರು: ಕೋವಿಡ್ ನಿಯಮಗಳ ನಡುವೆ ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ಗ್ರಾಮಸ್ಥರೇ ತಡೆದು ವಾಪಾಸ್ ಕಳುಹಿಸಿದ್ದ ಸುದ್ದಿಯನ್ನು ಶುಕ್ರವಾರ ಓದಿದ್ದೀರಿ. ಆದರೆ ಇದೀಗ ಅಧಿಕಾರಿಗಳನ್ನು ತಡೆದ ಜನರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ನಿಯಮಗಳ ನಡುವೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಹತ್ತಕ್ಕೂ ಹೆಚ್ಚು ಜೀಪು ಮತ್ತು ಕಾರಿನಲ್ಲಿ ಮೋಜು ಮಸ್ತಿಗೆಂದು ತೆರಳಿದ್ದರು. ಈ ವೇಳೆ ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದಿದ್ದರು. ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಊರಿಗೆ ಬರಬೇಡಿ ಎಂದು ಗ್ರಾಮಸ್ಥರು ತಡೆದಿದ್ದರು. ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಅಧಿಕಾರಿಗಳು ಅಲ್ಲಿಂದ ಹಿಂತುರುಗಿ ಕೆಮ್ಮಣ್ಣಗುಂಡಿಯತ್ತ ಪ್ರಯಾಣಿಸಿದ್ದರು.

View full article
33 views07:18
ओपन / कमेंट
2021-05-22 10:18:04
ಕೊರೊನಾ ಮುಕ್ತ ಗ್ರಾಮ ಪಂಚಾಯತ್‌ಗೆ 5 ಲಕ್ಷ ರೂ.

ಮಡಿಕೇರಿ, ಮೇ 22: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ 'ಕೊರೊನಾ ಮುಕ್ತ ಗ್ರಾಮ' ಮಾಡುವ ಗ್ರಾ.ಪಂಗೆ ಶಾಸಕರ ನಿಧಿಯಡಿ 5 ಲಕ್ಷ ರೂ ನೀಡಲಾಗುವುದು ಎಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಪ್ರಕಟಿಸಿದ್ದಾರೆ. ಮಡಿಕೇರಿ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಕೋವಿಡ್- 19 ಸೋಂಕಿತರಿಗೆ ""ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದೆ, ಜೊತೆಗೆ ಸಾವಿನ ಪ್ರಮಾಣವು ಇಳಿಮುಖವಾಗುತ್ತಿದೆ. ಆದರೆ ಇಷ್ಟಕ್ಕೆ ಸಮಾಧಾನ ಪಡದೆ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಲಾಕ್‌ಡೌನ್‌ನ್ನು ಮುಂದುವರೆಸುವುದು ಒಳ್ಳೆಯದು'' ಎಂದು ಎಂ.ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲವು ಸುಧಾರಣೆ ಮತ್ತು ಬದಲಾವಣೆ ಮಾಡಲಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
33 views07:18
ओपन / कमेंट
2021-05-22 07:18:10
ಭಯಪಡಬೇಡಿ, ವೈಟ್ ಫಂಗಸ್ ಎಂಬ ಸೋಂಕೇ ಇಲ್ಲ ಎಂದ ವೈದ್ಯರು

ನವದೆಹಲಿ, ಮೇ 22: ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಎರಡು ದಿನಗಳಿಂದೀಚೆಗೆ ವೈಟ್ ಫಂಗಸ್ ಪ್ರಕರಣಗಳು ಪತ್ತೆಯಾಗಿರುವುದು ಈಗಿರುವ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಬಿಳಿ ಶಿಲೀಂಧ್ರ ಎಂಬ ಈ ಸೋಂಕು ಬ್ಲ್ಯಾಕ್ ಫಂಗಸ್‌ಗಿಂತಲೂ ಅತಿ ಹೆಚ್ಚು ಅಪಾಯಕಾರಿ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಭೀತಿ ಇನ್ನಷ್ಟು ಹೆಚ್ಚಾಗಿತ್ತು. ಆದರೆ ಬಿಳಿ ಶಿಲೀಂಧ್ರ ಎಂಬ ಸೋಂಕೇ ಇಲ್ಲ. ಇದು ಕ್ಯಾಂಡಿಸಿಯಾಸಿಸ್ ಎಂಬ ಸಾಮಾನ್ಯ ಶಿಲೀಂಧ್ರ ಸೋಂಕು ಅಷ್ಟೆ. ಭಯ ಪಡುವ ಅಗತ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಮುಂದೆ ಓದಿ... ವೈಟ್ ಫಂಗಸ್ ಕುರಿತು ಚರ್ಚೆ ಗುರುವಾರ ಬಿಹಾರ, ಪಾಟ್ನಾದಲ್ಲಿ ವೈಟ್ ಫಂಗಸ್ ಪ್ರಕರಣ ಪತ್ತೆಯಾಗಿರುವುದಾಗಿ ವರದಿಯಾಗಿತ್ತು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
18 views04:18
ओपन / कमेंट
2021-05-22 07:18:05
ಗೂಗಲ್ ಸರ್ಚ್ ಹಿಸ್ಟರಿಯನ್ನು ತ್ವರಿತವಾಗಿ ಡಿಲೀಟ್ ಮಾಡಲು ಹೊಸ ಫೀಚರ್: ಬಳಕೆ ಹೇಗೆ ?

ನವದೆಹಲಿ: ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಹೊರತಂದಿದೆ. ಆ ಮೂಲಕ ಬಳಕೆದಾರರು ಕಳೆದ 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು "ಡಿಲೀಟ್ ಲಾಸ್ಟ್ 15 ಮಿನಿಟ್" ಎಂದೇ ಕರೆಯಲಾಗಿದೆ. ಗೂಗಲ್ ಸಂಸ್ಥೆ ಹೇಳುವಂತೆ "ಕಳೆದ ಹಲವು ವರ್ಷಗಳಿಂದ ಬಳಕೆದಾರರು ಈ ಫೀಚರ್ ಗೆ ಬೇಡಿಕೆಯಿರಿಸಿದ್ದರು. ಆದರೆ ಕ್ಲಿಯರ್ ಹಿಸ್ಟರಿ ಆಯ್ಕೆ ಮಾತ್ರ ಇಲ್ಲಿಯವರೆಗೂ ಚಾಲ್ತಿಯಲ್ಲಿತ್ತು. ಇನ್ನು ಮುಂದೆ " ಡಿಲೀಟ್ ಲಾಸ್ಟ್ 15 ಮಿನಿಟ್" ಆಯ್ಕೆಯೂ ಲಭ್ಯವಾಗಲಿದೆ" ಎಂದಿದೆ. ಹೊಸ ಆಯ್ಕೆಯ ಮೂಲಕ ಗೂಗಲ್ ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

View full article
17 views04:18
ओपन / कमेंट
2021-05-21 22:18:04
ನಿಮಗೆ ಅಷ್ಟು ಖುಷಿ ಇಲ್ಲ ಅಂದ್ರೆ ನಾನು ರಾಜೀನಾಮೆಗೆ ರೆಡಿ ಇದ್ದೀನಿ!

ಬೆಂಗಳೂರು, ಮೇ. 21: ಕೋವಿಡ್ ಕಷ್ಟದಲ್ಲಿರುವ ಶಿಕ್ಷಕರಿಗೆ ಸ್ಪಂದಿಸಿ ಅಂತ ಮನವಿ ಮಾಡಿದರೆ, ಕೊರೊನಾ ಬಂದ್ರೆ ನಾನೇನು ಮಾಡಲಿ. ಅಷ್ಟು ಇಷ್ಟ ಇಲ್ಲ ಅಂದ್ರೆ ನಾನು ಈಗಲೇ ರಾಜೀನಾಮೆ ನೀಡೋಕೆ ರೆಡಿ ಇದ್ದೀನಿ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಶಿಕ್ಷಣ ಸಂಸ್ಥೆಯ ಮಾಲೀಕರೊಬ್ಬರ ಜತೆ ನಡೆಸಿದ ಸಂಭಾಷಣೆಯಲ್ಲಿ ಈ ಸಂಗತಿ ಹೊರ ಬಿದ್ದಿದೆ. ಕೋವಿಡ್ 19 ನಿಂದ ರಾಜ್ಯದಲ್ಲಿ 3.5 ಲಕ್ಷ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಶಾಲಾ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಅಂತ ಪರಿಗಣಿಸಬೇಕು. ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯದ ಖಾಸಗಿ ಶಾಲಾ ಶಿಕ್ಷಕರು ಮತ್ತು ಖಾಸಗಿ ಶಾಲಾ ಸಂಸ್ಥೆ ಮಾಲೀಕರ 20 ಕ್ಕೂ ಹೆಚ್ಚು ಸಂಸ್ಥೆಗಳು ಶಿಕಷಣ ಸಚಿವರಿಗೆ ಮನವಿ ಮಾಡಿದ್ದವು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
40 views19:18
ओपन / कमेंट