Get Mystery Box with random crypto!

ಎರಡು ದಿನದಲ್ಲಿ 80 ಕೋವಿಡ್ ಪ್ರಕರಣ: ಧಾರವಾಡದ ಸಿದ್ದೇಶ್ವರ ನಗರ ಸೀಲ್ ಡೌ | Kannada News Daily

ಎರಡು ದಿನದಲ್ಲಿ 80 ಕೋವಿಡ್ ಪ್ರಕರಣ: ಧಾರವಾಡದ ಸಿದ್ದೇಶ್ವರ ನಗರ ಸೀಲ್ ಡೌನ್

ಧಾರವಾಡ: ಇಲ್ಲಿನ ನಗರ ಲಕಮನಹಳ್ಳಿ ಗ್ರಾಮ ವ್ಯಾಪ್ತಿಯ ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸಿದ್ದೇಶ್ವರ ನಗರದಲ್ಲಿ ಕಳೆದ‌ ಎರಡು ದಿನಗಳಲ್ಲಿ 80 ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಾಲೋನಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಕಟ್ಟಿಗೆ ಬಳಸಿ, ಬ್ಯಾರಿಕೇಡಿಂಗ್ ಮಾಡಲಾಗಿದೆ. ಇಂದು ಬೆಳಿಗ್ಗೆ ಸಿದ್ದೇಶ್ವರ ಕಾಲೋನಿಯನ್ನುಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಕಾಲೋನಿಯ ಕೆಲವರು ಕೋವಿಡ್ ಪಾಜಿಟಿವ್ ಬಂದರೂ ಕೋವಿಡ್ ಕಾಳಜಿ ಕೇಂದ್ರಗಳಿಗೆ ಹೋಗಲು ನಿರಾಕರಿಸಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಶೀಲ್ದಾರ ಸಂತೋಷ ಬಿರಾದಾರ ಹಾಗೂ ಸಹಾಯಕ ಪೋಲಿಸ್ ಆಯುಕ್ತೆ ಅನುಷಾ.ಜಿ. ಅವರು ಕಾಲೋನಿ ಪ್ರಮುಖರಿಗೆ ಹಾಗೂ ಸೋಂಕಿತರ ಕುಟುಂಬದ ಸದಸ್ಯರಿಗೆ ಮಾಹಿತಿ, ತಿಳುವಳಿಕೆ ನೀಡಿ, ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗುವಂತೆ ಜಾಗೃತಿ ಮೂಡಿಸಿದರು.

View full article