Get Mystery Box with random crypto!

ವಿಖಾಯ ಕರ್ನಾಟಕ ಯುಎಇ ವತಿಯಿಂದ ತಾಯಿನಾಡಿಗೆ ಆಕ್ಸಿಜನ್ ಸಿಲಿಂಡರ್, ಮೆಡಿಕ | Kannada News Daily

ವಿಖಾಯ ಕರ್ನಾಟಕ ಯುಎಇ ವತಿಯಿಂದ ತಾಯಿನಾಡಿಗೆ ಆಕ್ಸಿಜನ್ ಸಿಲಿಂಡರ್, ಮೆಡಿಕಲ್ ಕಿಟ್ಟ್

ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ ತಾಯಿನಾಡಿನಲ್ಲಿ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಳುಹಿಸಿ ಕೊಡಲು DONATE OXYGEN & SAVE LIVES ಅಭಿಯಾನವನ್ನು ದುಬೈಯಲ್ಲಿ ಆನ್ಲೈನ್ ಮೂಲಕ ಆಯೋಜಿಸಿಲಾಗಿತ್ತು. ಅಭಿಯಾನವನ್ನು ಯಶಸ್ಸಿಗೊಳಿಸಲು ಅನಿವಾಸಿ ಉದ್ಯಮಿಗಳು, ಉದಾರಿ ದಾನಿಗಳು, ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು. ಶೆರೀಫ್ ಕಾವು ಮತ್ತು ರಫೀಕ್ ಸುರತ್ಕಲ್ ಅವರು ಅಭಿಯಾನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. SHIPWAVES DUBAI ಇದರ ಮಾಲಕರಾದ ಮುಹಮ್ಮದ್ ಹಾರಿಸ್ ಅವರು ದುಬೈ ಯಿಂದ ಮಂಗಳೂರಿಗೆ ಉಚಿತ ಕಾರ್ಗೊ ವ್ಯವಸ್ಥೆ ಏರ್ಪಡಿಸಿ ಸಹಕರಿಸಿದರು. ಇಂದು ಬೆಳಿಗ್ಗೆ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ನೇತೃತ್ವದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ ಅವರ ದುವಾದೊಂದಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿ ಕೊಡಲಾಯಿತು.

View full article