Get Mystery Box with random crypto!

ಚಿಕ್ಕಮಗಳೂರು: ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ತಡೆದ ಜನರ | Kannada News Daily

ಚಿಕ್ಕಮಗಳೂರು: ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ತಡೆದ ಜನರ ಮೇಲೆ ಕೇಸ್!

ಚಿಕ್ಕಮಗಳೂರು: ಕೋವಿಡ್ ನಿಯಮಗಳ ನಡುವೆ ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ಗ್ರಾಮಸ್ಥರೇ ತಡೆದು ವಾಪಾಸ್ ಕಳುಹಿಸಿದ್ದ ಸುದ್ದಿಯನ್ನು ಶುಕ್ರವಾರ ಓದಿದ್ದೀರಿ. ಆದರೆ ಇದೀಗ ಅಧಿಕಾರಿಗಳನ್ನು ತಡೆದ ಜನರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ನಿಯಮಗಳ ನಡುವೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಹತ್ತಕ್ಕೂ ಹೆಚ್ಚು ಜೀಪು ಮತ್ತು ಕಾರಿನಲ್ಲಿ ಮೋಜು ಮಸ್ತಿಗೆಂದು ತೆರಳಿದ್ದರು. ಈ ವೇಳೆ ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದಿದ್ದರು. ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಊರಿಗೆ ಬರಬೇಡಿ ಎಂದು ಗ್ರಾಮಸ್ಥರು ತಡೆದಿದ್ದರು. ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಅಧಿಕಾರಿಗಳು ಅಲ್ಲಿಂದ ಹಿಂತುರುಗಿ ಕೆಮ್ಮಣ್ಣಗುಂಡಿಯತ್ತ ಪ್ರಯಾಣಿಸಿದ್ದರು.

View full article