Get Mystery Box with random crypto!

ಕೊರೊನಾ ಮುಕ್ತ ಗ್ರಾಮ ಪಂಚಾಯತ್‌ಗೆ 5 ಲಕ್ಷ ರೂ. ಮಡಿಕೇರಿ, ಮೇ 22: ಮಡಿ | Kannada News Daily

ಕೊರೊನಾ ಮುಕ್ತ ಗ್ರಾಮ ಪಂಚಾಯತ್‌ಗೆ 5 ಲಕ್ಷ ರೂ.

ಮಡಿಕೇರಿ, ಮೇ 22: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ 'ಕೊರೊನಾ ಮುಕ್ತ ಗ್ರಾಮ' ಮಾಡುವ ಗ್ರಾ.ಪಂಗೆ ಶಾಸಕರ ನಿಧಿಯಡಿ 5 ಲಕ್ಷ ರೂ ನೀಡಲಾಗುವುದು ಎಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಪ್ರಕಟಿಸಿದ್ದಾರೆ. ಮಡಿಕೇರಿ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಕೋವಿಡ್- 19 ಸೋಂಕಿತರಿಗೆ ""ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದೆ, ಜೊತೆಗೆ ಸಾವಿನ ಪ್ರಮಾಣವು ಇಳಿಮುಖವಾಗುತ್ತಿದೆ. ಆದರೆ ಇಷ್ಟಕ್ಕೆ ಸಮಾಧಾನ ಪಡದೆ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಲಾಕ್‌ಡೌನ್‌ನ್ನು ಮುಂದುವರೆಸುವುದು ಒಳ್ಳೆಯದು'' ಎಂದು ಎಂ.ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲವು ಸುಧಾರಣೆ ಮತ್ತು ಬದಲಾವಣೆ ಮಾಡಲಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article