Get Mystery Box with random crypto!

​ಕೊರೋನ ಗಂಭೀರತೆ ಬಗ್ಗೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯರಿಂದ ಜಾಗೃತಿ ಮಂಗಳ | Kannada News Daily

​ಕೊರೋನ ಗಂಭೀರತೆ ಬಗ್ಗೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯರಿಂದ ಜಾಗೃತಿ

ಮಂಗಳೂರು, ಮೇ 22: ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯ ದೇವಾಡಿಗ ಅವರು ಕೋವಿಡ್‌ನಿಂದ ತನ್ನ ಕುಟುಂಬ ಸದಸ್ಯನನ್ನು ಕಳೆದುಕೊಂಡರೂ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿ ಯುವಜನರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಡೊಂಬಯ್ಯ ಅವರ ಅಣ್ಣನ ಮಗ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದು, ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷ್ಯ ಮಾಡಿದ ಪರಿಣಾಮ ಸೋಂಕು ಬಿಗಡಾಯಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರೋಗ ಉಲ್ಬಣಗೊಂಡು ಬಳಿಕ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾಖಲಾದ ಎರಡನೇ ದಿನದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಇತ್ತೀಚೆಗೆ ಮೃತಪಟ್ಟಿದ್ದರು. ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖ ಇನ್ನೂ ಡೊಂಬಯ್ಯ ಅವರಲ್ಲಿ ಮಡುಗಟ್ಟಿರುವುದು ಅವರ ಮಾತಿನಿಂದಲೇ ಸ್ಪಷ್ಟವಾಗುತ್ತಿತ್ತು.

View full article