Get Mystery Box with random crypto!

ಗೂಗಲ್ ಸರ್ಚ್ ಹಿಸ್ಟರಿಯನ್ನು ತ್ವರಿತವಾಗಿ ಡಿಲೀಟ್ ಮಾಡಲು ಹೊಸ ಫೀಚರ್: ಬಳ | Kannada News Daily

ಗೂಗಲ್ ಸರ್ಚ್ ಹಿಸ್ಟರಿಯನ್ನು ತ್ವರಿತವಾಗಿ ಡಿಲೀಟ್ ಮಾಡಲು ಹೊಸ ಫೀಚರ್: ಬಳಕೆ ಹೇಗೆ ?

ನವದೆಹಲಿ: ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ ಇದೀಗ ಹೊಸ ಫೀಚರ್ ಒಂದನ್ನು ಹೊರತಂದಿದೆ. ಆ ಮೂಲಕ ಬಳಕೆದಾರರು ಕಳೆದ 15 ನಿಮಿಷಗಳಲ್ಲಿ ಗೂಗಲ್ ನಲ್ಲಿ ಜಾಲಾಡಿದ ಮಾಹಿತಿಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಡಿಲೀಟ್ ಮಾಡಬಹುದು. ಈ ಆಯ್ಕೆಯನ್ನು "ಡಿಲೀಟ್ ಲಾಸ್ಟ್ 15 ಮಿನಿಟ್" ಎಂದೇ ಕರೆಯಲಾಗಿದೆ. ಗೂಗಲ್ ಸಂಸ್ಥೆ ಹೇಳುವಂತೆ "ಕಳೆದ ಹಲವು ವರ್ಷಗಳಿಂದ ಬಳಕೆದಾರರು ಈ ಫೀಚರ್ ಗೆ ಬೇಡಿಕೆಯಿರಿಸಿದ್ದರು. ಆದರೆ ಕ್ಲಿಯರ್ ಹಿಸ್ಟರಿ ಆಯ್ಕೆ ಮಾತ್ರ ಇಲ್ಲಿಯವರೆಗೂ ಚಾಲ್ತಿಯಲ್ಲಿತ್ತು. ಇನ್ನು ಮುಂದೆ " ಡಿಲೀಟ್ ಲಾಸ್ಟ್ 15 ಮಿನಿಟ್" ಆಯ್ಕೆಯೂ ಲಭ್ಯವಾಗಲಿದೆ" ಎಂದಿದೆ. ಹೊಸ ಆಯ್ಕೆಯ ಮೂಲಕ ಗೂಗಲ್ ಬಳಕೆದಾರರು ತಮ್ಮ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

View full article