Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 43

2021-05-21 07:18:07
ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ಮೇ 21ರಂದು ಎಷ್ಟಿದೆ?

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಎರಡು ದಿನಗಳ ವಿರಾಮದ ಬಳಿಕ ತೈಲ ದರವನ್ನು ಮತ್ತೆ ಏರಿಕೆ ಮಾಡಿವೆ. ಈ ಮೂಲಕ ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ. ಜೈಪುರದಲ್ಲಿ ಈಗಾಗಲೇ ಅಧಿಕೃತವಾಗಿ ಪೆಟ್ರೋಲ್ ಲೀಟರ್‌ಗೆ 100 ರೂಪಾಯಿ ಗಡಿದಾಟಿದೆ. ನವದೆಹಲಿಯಲ್ಲಿ ಶುಕ್ರವಾರ (ಮೇ 21) ಪೆಟ್ರೋಲ್‌ ದರ ಲೀಟರ್‌ಗೆ 19 ಪೈಸೆ ಹೆಚ್ಚಾಗಿ 93.04 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 29 ಪೈಸೆ ಏರಿಕೆಗೊಂಡು 83.80 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

View full article
26 views04:18
ओपन / कमेंट
2021-05-20 19:18:10
ಭಾರತದಲ್ಲಿ ಟಿ20 ವಿಶ್ವಕಪ್​ ನಡೆಸುವುದು ಕಷ್ಟಕರ ಎಂದ ಆಸೀಸ್​ ಕ್ರಿಕೆಟಿಗ

ಸಿಡ್ನಿ: ಭಾರತದಲ್ಲಿ ಕೋವಿಡ್​-19 ಎಂಬ ಮಹಾಮಾರಿ ಅಬ್ಬರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಮುಂದಿನ ಅಕ್ಟೋಬರ್​-ನವೆಂಬರ್​ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್​ ಟೂರ್ನಿ ಆಯೋಜಿಸುವುದು ಕಷ್ಟಕರ ಎಂದು ಆಸ್ಟ್ರೆಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್​ ಹಸ್ಸೆ ಅಭಿಪ್ರಾಯಪಟ್ಟಿದ್ದಾರೆ. ಆಟಗಾರರು ಭಾರತಕ್ಕೆ ಹೋಗಲು ಹಿಂದೇಟು ಹಾಕಬಹುದು ಎಂದು ಎಂದು ಹೇಳಿದ್ದಾರೆ. ಐಪಿಎಲ್​ ಫ್ರಾಂಚೈಸಿ ಸಿಎಸ್​ಕೆ ತಂಡದ ಬ್ಯಾಟಿಂಗ್​ ಕೋಚ್​ ಆಗಿರುವ ಹಸ್ಸೆಗೂ ಲೀಗ್​ ವೇಳೆ ಪಾಸಿಟಿವ್​ ಕಾಣಿಸಿಕೊಂಡಿತ್ತು. ಆಸೀಸ್​ ಆಟಗಾರರೊಂದಿಗೆ ತವರಿಗೆ ತೆರಳದೆ ಹಸ್ಸೆ ಪ್ರತ್ಯೇಕವಾಗಿ ತವರಿಗೆ ತೆರಳಿದ್ದರು. ಅಹರ್ನಿಶಿ ಟೆಸ್ಟ್​ ಪಂದ್ಯವಾಡಲಿದೆ ಭಾರತ ಮಹಿಳಾ ತಂಡ, ಮೊದಲ ಎದುರಾಳಿ ಯಾರು ಗೊತ್ತ?, ನನ್ನ ಪ್ರಕಾರ ಭಾರತದಲ್ಲಿ ಟಿ20 ವಿಶ್ವಕಪ್​ ಆಯೋಜಿಸುವುದು ಸುಲಭವಲ್ಲ.

View full article
11 views16:18
ओपन / कमेंट
2021-05-20 16:18:09
ಕೊರೊನಾ ನಿಯಂತ್ರಣ; ಸಣ್ಣ ಎಚ್ಚರಿಕೆ ರವಾನಿಸಿದ ಪ್ರಧಾನಿ ಮೋದಿ

ನವದೆಹಲಿ, ಮೇ 20: ದೇಶದಲ್ಲಿ ಕೊರೊನಾ ಸೋಂಕು ಕಳೆದ ಎರಡು ಮೂರು ದಿನಗಳಿಂದ ಕೊಂಚ ಇಳಿಕೆ ಕಂಡಿದೆ. ಆದರೂ ಕೆಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕು ಹೆಚ್ಚು ದಾಖಲಾಗುತ್ತಿರುವ ಹತ್ತು ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಕೊರೊನಾ ನಿಯಂತ್ರಣ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಮೋದಿ ಮುಂದೆ ಎದುರಾಗಬಹುದಾದ ಅಪಾಯದ ಸಾಧ್ಯತೆಗಳ ಕುರಿತು ಸಣ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದೆ ಓದಿ... "ಹೊಸ ಸವಾಲಿಗೆ ಹೊಸ ಕಾರ್ಯತಂತ್ರ, ಪರಿಹಾರ" ದೇಶದಲ್ಲಿ ಕೊರೊನಾ ಸೋಂಕು ಕೊಂಚ ತಗ್ಗುತ್ತಿದೆ ಎಂದು ನಿಟ್ಟುಸಿರುಬಿಡುವಂತಿಲ್ಲ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
43 views13:18
ओपन / कमेंट
2021-05-20 16:18:07
ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

ನವದೆಹಲಿ, ಮೇ 20: ದಿನೇ ದಿನೇ ಹೊಸ ಸಮಸ್ಯೆಗಳನ್ನು ಹೊತ್ತು ತರುತ್ತಿರುವ ಕೊರೊನಾ ಸೋಂಕಿನ ನಿಗ್ರಹಕ್ಕೆ ಹೊಸ ಸಾಧ್ಯತೆಗಳ ಅನ್ವೇಷಣೆಗಳೂ ಮುಂದುವರೆಯುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು ಮತ್ತೊಂದು ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. "ಅನುಸರಿಸಲು ಅತಿ ಸರಳ" ಎಂದು ಈ ಮಾರ್ಗಸೂಚಿಯನ್ನು ಕರೆದಿದ್ದು, ಸೋಂಕಿನ ನಿಗ್ರಹದಲ್ಲಿ ಗಾಳಿಯ ಅವಶ್ಯಕತೆಯನ್ನು ಇದರಲ್ಲಿ ಎತ್ತಿಹಿಡಿಯಲಾಗಿದೆ. ಒಬ್ಬ ಸೋಂಕಿತನಿಂದ ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಡೆಯಲು ಸೋಂಕಿತನಿರುವ ಸ್ಥಳ ಹೇಗೆ ಮುಖ್ಯ ಪಾತ್ರ ವಹಿಸುತ್ತದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ. ಮನೆ ಅಥವಾ ಸೋಂಕಿತನಿರುವ ಪರಿಸರ ಹೇಗೆ ಸೋಂಕು ತಡೆಗಟ್ಟುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದರ ಕುರಿತು ವಿವರಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
39 views13:18
ओपन / कमेंट
2021-05-20 16:18:04
ಕೋವಿಡ್: ಒಬ್ಬೊಬ್ಬರು ಒಂದೊಂದು ರೀತಿ ಮಾಸ್ಕ್ ಧರಿಸ್ತಾರೆ.ಅಧ್ಯಯನ ವರದಿಯಲ್ಲೇನಿದೆ?

ನವದೆಹಲಿ: ದೇಶದಲ್ಲಿನ ಶೇ.50ರಷ್ಟು ಜನರು ಈವಾಗಲೂ ಮಾಸ್ಕ್ ಧರಿಸುತ್ತಿಲ್ಲ. ಆದರೆ ಶೇ.64ರಷ್ಟು ಮಂದಿ ಮಾಸ್ಕ್ ಧರಿಸುತ್ತಿರುವವರು ತಮ್ಮ ಮೂಗಿನ ಕೆಳಕ್ಕೆ ಇಳಿಸಿಕೊಂಡಿರುವುದಾಗಿ ಅಧ್ಯಯನ ವರದಿ ತಿಳಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಮೇ 20) ತಿಳಿಸಿದೆ. ನಮಗೆ ಸಭೆ ಮಾಡಲು ಅನುಮತಿ ಕೊಡಲ್ಲ, ಸರ್ಕಾರ ಏನ್ನನ್ನೋ ಮುಚ್ಚಿಡುತ್ತಿದೆ: ರಾಮಲಿಂಗಾರೆಡ್ಡಿ ಮಾಸ್ಕ್ ಧರಿಸುವ ಶೇ.64ರಷ್ಟು ಮಂದಿ ಮೂಗನ್ನು ಬಿಟ್ಟು, ಬಾಯಿಯನ್ನು ಮಾತ್ರ ಮುಚ್ಚಿಕೊಂಡಿರುತ್ತಾರೆ, ಶೇ.20ರಷ್ಟು ಮಂದಿ ಮಾಸ್ಕ್ ಅನ್ನು ಗಲ್ಲದ ಮೇಲೆ ಬಿಟ್ಟುಕೊಂಡಿರುತ್ತಾರೆ. ಶೇ,2ರಷ್ಟು ಮಂದಿ ಕುತ್ತಿಗೆಯಲ್ಲಿ ನೇತಾಡಿಸಿಕೊಂಡಿರುತ್ತಾರೆ. ಕೇವಲ ಶೇ.14ರಷ್ಟು ಮಂದಿ ಮಾತ್ರ ಮೂಗು, ಬಾಯಿ, ಗಲ್ಲವನ್ನು ಸಂಪೂರ್ಣವಾಗಿ ಮಾಸ್ಕ್ ನಿಂದ ಮುಚ್ಚಿಕೊಂಡಿರುತ್ತಾರೆ ಎಂದು ವಿವರಿಸಿದೆ.

View full article
36 views13:18
ओपन / कमेंट
2021-05-20 13:18:08
ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನ ವಿವಿಧೆಡೆ ಮಳೆ ಸಾಧ್ಯತೆ

ಬೆಂಗಳೂರು, ಮೇ 20: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿಂದ ಆಗಾಗ ಮಳೆಯಾಗುತ್ತಿದೆ, ತೌಕ್ತೆ ಚಂಡಮಾರುತದಿಂದಾಗಿ ಒಂದೆರೆಡು ದಿನ ಹೆಚ್ಚಿನ ಮಳೆಯೇ ಸುರಿದಿದೆ. ತೌಕ್ತೆ ದುರ್ಬಲ: ಮೇ 23ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಮಲೆನಾಡಿನಲ್ಲಿ ಕೂಡ ಮೋಡಕವಿದ ವಾತಾವರಣ ಮುಂದುವರೆಯಲಿದೆ, ಸಂಜೆ ವೇಳೆಗೆ ಮಳೆಯಾಗಬಹುದೆಂಬ ನಿರೀಕ್ಷೆ ಇದೆ.

View full article
52 views10:18
ओपन / कमेंट
2021-05-20 10:18:12
ಸಿಎಂ ಭೇಟಿ ಮಾಡಿದ ದ.ಕ ಶಾಸಕರ ನಿಯೋಗ; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಶಾಸಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ, ಹೆಚ್ಚುವರಿ ಆರೋಗ್ಯಮಿತ್ರ ಕಾರ್ಯನಿರ್ವಾಹಕರನ್ನು ನೇಮಕ, ಕೋವಿಡ್ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಲು ಕೆವಿಜಿ ಮೆಡಿಕಲ್ ಕಾಲೇಜಿಗೆ ಅನುಮತಿ, ದಕ್ಷಿಣ ಕನ್ನಡ ಜಿಲ್ಲೆಗೆ ಆಕ್ಸಿಜನ್ ಟ್ಯಾಂಕರ್, 50 ಮತ್ತು 1 ಲಕ್ಷ ಪ್ರಮಾಣದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸರಬರಾಜು ಮುಂತಾದ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಮಾತ್ರವಲ್ಲದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಂಡಮಾರುತದಿಂದ ಅಪಾರ ಹಾನಿ ಸಂಭವಿಸಿದ್ದು, ಪ್ರಕೃತಿ ವಿಕೋಪ ನಿಧಿಯಿಂದ ರೂ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
59 views07:18
ओपन / कमेंट
2021-05-20 10:18:10
ಮೇ 20ರಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆಯಿಲ್ಲ

ನವದೆಹಲಿ, ಮೇ 20: ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಗುರುವಾರ (ಮೇ 20)ದಂದು ಪರಿಷ್ಕರಣೆ ಮಾಡಿಲ್ಲ. ಈ ತಿಂಗಳಲ್ಲಿ ಒಟ್ಟಾರೆ 10ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಮೇ 18ರಂದು ಮತ್ತೆ ದೇಶದೆಲ್ಲೆಡೆ ಪೆಟ್ರೋಲ್ ಸರಾಸರಿ 27ಪೈಸೆ ಹಾಗೂ ಡೀಸೆಲ್ ಸರಾಸರಿ 29ಪೈಸೆ ಪ್ರತಿ ಲೀಟರ್‌ನಂತೆ ಏರಿಕೆಯಾಗಿತ್ತು. ಆದರೆ, ಸತತ ಎರಡು ದಿನಗಳಿಂದ ದರ ಪರಿಷ್ಕರಣೆ ಮಾಡಿಲ್ಲ. ಸುಮಾರು 18 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ನಾಲ್ಕನೇ ದಿನ ಪರಿಷ್ಕರಿಸಲಾಗಿತ್ತು.

View full article
55 views07:18
ओपन / कमेंट
2021-05-20 10:18:06
ಮೇ 20ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಎರಡು ದಿನಗಳ ಏರಿಕೆ ಬಳಿಕ ಪೆಟ್ರೋಲ್, ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಗುರುವಾರ (ಮೇ 20) ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 92.85 ರೂಪಾಯಿಗೆ ತಲುಪಿದ್ದು, ಡೀಸೆಲ್ ದರ ಲೀಟರ್‌ಗೆ 83.51 ರೂಪಾಯಿಗೆ ಮುಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

View full article
54 views07:18
ओपन / कमेंट
2021-05-20 07:18:05
ಚಿಕ್ಕಮಗಳೂರು: ಮೇ 24ರವರೆಗೆ ಕಂಪ್ಲೀಟ್ ಲಾಕ್; ಅಗತ್ಯ ವಸ್ತು ಕೊಳ್ಳಲು ಮುಗಿಬಿದ್ದ ಜನ

ಚಿಕ್ಕಮಗಳೂರು: ಕಾಫಿನಾಡಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದಿನಿಂದ( ಮೇ 20) ಮೇ 24ರವರೆಗೆ ಚಿಕ್ಕಮಗಳೂರು ಕಂಪ್ಲೀಟ್ ಬಂದ್ ಮಾಡಲಾಗಿದೆ. ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಅದರೆ ನಗರದ ಮಾರುಕಟ್ಟೆ ರಸ್ತೆಯಲ್ಲಿ ಜನಜಂಗುಳಿ ಕಂಡು ಬಂದಿದೆ. ತರಕಾರಿ, ಮೀನು-ಮಾಂಸ ಕೊಳ್ಳಲು ಮುಗಿಬಿದ್ದಿರುವ ಜನರು ಮುಗಿಬಿದ್ದಿದ್ದು, ಖರೀದಿ ಭರಾಟೆಯಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ರಾಜಸ್ಥಾನ್ ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಕೋವಿಡ್ ನಿಂದ ನಿಧನ ಜುಲೈ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ; 6-8 ತಿಂಗಳಲ್ಲಿ ಮೂರನೇ ಅಲೆ ರಾಜ್ಯದಲ್ಲಿ ಸತತ ಎರಡನೆ ದಿನವೂ ಹೊಸ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

View full article
59 views04:18
ओपन / कमेंट