Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 45

2021-05-18 19:18:16
ರಾಮನಗರ: ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಕಿಟ್ ವಿತರಿಸಿದ ಡಿಸಿಎಂ

ರಾಮನಗರ, ಮೇ 18: ರಾಮನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕೊರೊನಾ ವಿರುದ್ಧ ರಕ್ಷಣಾ ಸಾಮಾಗ್ರಿಗಳನ್ನು ಸಂಕೇತಿಕವಾಗಿ ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ವಿತರಿಸಿದರು. ಡಿಸಿಎಂ ಇಂದು ಹೊಸ ಜಿಲ್ಲಾಸ್ಪತ್ರೆಯ ಕಾಮಗಾರಿಯ ಪರಿಶೀಲನೆ ವೇಳೆ ರಕ್ಷಣಾ ಸಾಮಗ್ರಿಗಳನ್ನು ವಿತರಿಸಿದರು. ರಾಮನಗರ ಜಿಲ್ಲೆಯಲ್ಲಿ 1543 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1301 ಮುಖ್ಯ ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಒಬ್ಬರು ಕಾರ್ಯಕರ್ತೆ ಮತ್ತು ಒಬ್ಬ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. 242 ಮಿನಿ ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.

View full article
18 views16:18
ओपन / कमेंट
2021-05-18 19:18:13
ರಾಜ್ಯದಲ್ಲಿ ಕೊರೋನಾ ಸಾವಿನ ಕೇಕೆ : ಇಂದು 525 ಮಂದಿ ಬಲಿ, 30309 ಹೊಸ ಕೇಸ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಮಹಾಮಾರಿಗೆ ಇಂದು ರಾಜ್ಯದಲ್ಲಿ ಸಾವಿನ ಕೇಕೆ ಹಾಕಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಾದ್ಯಂತ 525 ಜೀವಗಳು ಬಲಿಯಾಗಿದ್ದು, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 30309 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2272374 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 22838ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 8676 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 298 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1073072 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 10020 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

View full article
13 views16:18
ओपन / कमेंट
2021-05-18 19:18:05
BIGG NEWS : ಸಿಎಂ ಪುತ್ರನಿಂದ 'ಲಾಕ್ ಡೌನ್' ನಿಯಮ ಉಲ್ಲಂಘನೆ : ನಂಜನಗೂಡು ದೇವಾಲಯದಲ್ಲಿ ವಿಜಯೇಂದ್ರ ದಂಪತಿಯಿಂದ ಪೂಜೆ-ಹವನ

ಮೈಸೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾದ ಹಿನ್ನೆಲೆ ರಾಜ್ಯ ಸರ್ಕಾರ ಲಾಕ್ ಡೌನ್ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅಲ್ಲದೇ ಸರ್ಕಾರ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಿದೆ. ಆದರೆ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ,ವೈ ವಿಜಯೇಂದ್ರ ಅವರು ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
13 views16:18
ओपन / कमेंट
2021-05-18 13:18:11
ದಾವಣಗೆರೆಯಲ್ಲಿ 6 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ: ಡಿಸಿ ಮಾಹಿತಿ

ದಾವಣಗೆರೆ, ಮೇ 18: ದಾವಣಗೆರೆ ಜಿಲ್ಲೆಯಲ್ಲಿ ಆರು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ. ಸದ್ಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 1, ಎಸ್‍ಎಸ್ ಆಸ್ಪತ್ರೆಯಲ್ಲಿ 1 ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ 4 ರೋಗಿಗಳಿದ್ದು, ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸಾ ವಿಧಾನ ಹಾಗೂ ಔಷಧಿ ಸದ್ಯ ಜಿಲ್ಲೆಯಲ್ಲಿ ಲಭ್ಯವಿಲ್ಲ ಎಂದು ಸಿಎಂ ಜೊತೆ ನಡೆದ ವಿಡಿಯೋ ಸಂವಾದದ ವೇಳೆ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಅಲ್ಲದೆ ಅಧಿಕಾರಿಗಳು, ವೈದ್ಯರ ಪರಿಶ್ರಮದಿಂದ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ರೆಮ್‍ಡೆಸಿವರ್ ಔಷಧಿ ಸರ್ಕಾರಿ ಆಸ್ಪತ್ರೆಗಳಿಗಾಗಿ ಸಮರ್ಪಕವಾಗಿ ಜಿಲ್ಲೆಗೆ ಪೂರೈಕೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಿಂದ ಬೇಡಿಕೆ ಇದೆ ಎಂದರು.

View full article
28 views10:18
ओपन / कमेंट
2021-05-18 13:18:08
ಶಾಸಕ ಎಂ.ಪಿ ರೇಣುಕಾಚಾರ್ಯ ಸಮಯಪ್ರಜ್ಞೆ: ನಿಟ್ಟುಸಿರುಬಿಟ್ಟ 45 ಸೋಂಕಿತರು!

ದಾವಣಗೆರೆ, ಮೇ 18: ದಾವಣಗೆರೆ ಜಿಲ್ಲೆ ಹೊನ್ನಾಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಮತ್ತೆ ಮತ್ತೆ ಕಾಡಲಾರಂಭಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ರಾತ್ರೋರಾತ್ರಿ ಪ್ರಾಣವಾಯು ಖಾಲಿಯಾದ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಂದು(ಮಂಗಳವಾರ) ಸಹ ಮತ್ತೆ ಆಮ್ಲಜನಕ ಕೊರತೆ ಸಮಸ್ಯೆ ತಲೆದೋರಿತ್ತು. ಶಾಸಕ ಎಂ.ಪಿ ರೇಣುಕಾಚಾರ್ಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ. ತಾಲೂಕು ಪಂಚಾಯಿತಿಯಲ್ಲಿ ಹೊನ್ನಾಳಿಯ ಅಧಿಕಾರಿಗಳ ಸಭೆಗೆ ಶಾಸಕ ರೇಣುಕಾಚಾರ್ಯ ಅವರು ಆಗಮಿಸುತ್ತಿದ್ದಂತೆ, ಆಸ್ಪತ್ರೆಯಿಂದ ಆಮ್ಲಜನಕ ಖಾಲಿಯಾಗಿದೆ ಎಂಬ ಮಾಹಿತಿ ಬಂದಿದೆ. ಸಭೆ ಮೊಟಕು‌ ಮಾಡಿ ಕೂಡಲೇ ಹರಿಹರದ ದಿ ಸದರನ್ ಗ್ಯಾಸ್ ಸಂಸ್ಥೆಗೆ ಹೊರಟರು. 45 ಜನರು ಆಕ್ಸಿಜನ್ ಬೆಡ್ ನಲ್ಲಿದ್ದು, ಕೇವಲ ಒಂದೂವರೆ ಗಂಟೆಗೆ ಆಗುವಷ್ಟು ಮಾತ್ರ ಆಕ್ಸಿಜನ್ ಸಿಲಿಂಡರ್ ಇತ್ತು.

View full article
28 views10:18
ओपन / कमेंट
2021-05-18 13:18:05
ಎಚ್ಚರಿಕೆ: ನಾಲಗೆ ತುರಿಕೆ, ಬಾಯಿ ಒಣಗುವಿಕೆ ಕೂಡಾ ಕೊರೊನಾ ಲಕ್ಷಣ!

ನವದೆಹಲಿ, ಮೇ 18: ಕೊರೊನಾವೈರಸ್ ಸೋಂಕಿತರಲ್ಲಿ ಯಾವಾಗ ಯಾವ ರೀತಿ ಲಕ್ಷಣಗಳು ಗೋಚರಿಸುತ್ತವೆಯೋ ಎಂಬ ಸ್ಪಷ್ಟ ಚಿತ್ರಣ ಇಂದಿಗೂ ಸಿಗುತ್ತಿಲ್ಲ. ಕೆಮ್ಮು, ಜ್ವರ, ನೆಗಡಿ, ಹಾಗೂ ಶ್ವಾಸಕೋಶ ಸಂಬಂಧ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಇದರ ಜೊತೆಗೆ ಕೊವಿಡ್-19 ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಂಡು ಬಂದಿರುವುದನ್ನು ಬೆಂಗಳೂರಿನ ವೈದ್ಯರು ಪತ್ತೆ ಮಾಡಿದ್ದಾರೆ. ಬೆಂಗಳೂರಿನ 55 ವರ್ಷದ ವ್ಯಕ್ತಿಯಲ್ಲಿ ಬಾಯಿ ಒಣಗುವುದು ಹಾಗೂ ನಾಲಗೆ ತುರಿಕೆ ರೀತಿ ಸಮಸ್ಯೆ ಕಾಣಿಸಿಕೊಂಡಿತ್ತು. ಆ ವ್ಯಕ್ತಿಯ ದೇಹದಲ್ಲಿ ರಕ್ತದೊತ್ತದ ಪ್ರಮಾಣವು ಹೆಚ್ಚಾಗಿದ್ದು ಕಂಡು ಬಂದಿದ್ದು, ಅಂತಿಮವಾಗಿ ಆತನನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೊವಿಡ್-19 ಕಾರ್ಯಪಡೆ ಸದಸ್ಯರು ಆಗಿರುವ ಡಾ. ಜಿ ಬಿ ಸತ್ತೂರ್ ಹೇಳಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
29 views10:18
ओपन / कमेंट
2021-05-18 10:18:09
OMG...! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ..!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ ಕೂಡ ಅವರಲ್ಲಿ ಒಬ್ಬರು. ಅಮಾ ಕಳೆದ 65 ವರ್ಷಗಳಿಂದ ಸ್ನಾನ ಮಾಡಿಲ್ಲ. ಅಮೋ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ. ನೀರು ಕಂಡ್ರೆ ಹೆದರುವ ಅಮೋ, ಇದೇ ಕಾರಣಕ್ಕೆ ಸ್ನಾನ ಮಾಡ್ತಿಲ್ಲ. ಸ್ನಾನ ಮಾಡಿದ್ರೆ ಅನಾರೋಗ್ಯಕ್ಕೊಳಗಾಗ್ತೇನೆ ಎಂಬ ಕಾರಣಕ್ಕೆ ಅಮೋ ಸ್ನಾನ ಮಾಡ್ತಿಲ್ಲ. ಅಮೋ ಇರಾನಿನ ಮರಭೂಮಿಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ. ಆದ್ರೆ ಒಂಟಿತನ ಆತನಿಗೆ ಇಷ್ಟವಿಲ್ಲ. ಪಾಲುದಾರರನ್ನು ಅಮೊ ಹುಡುಕುತ್ತಿದ್ದಾನೆ. ಮರಭೂಮಿಯ ಹೊಂಡದಲ್ಲಿ ಈತ ವಾಸವಾಗಿದ್ದಾನೆ. ಅಮೊ ಇನ್ನೊಂದು ವಿಷ್ಯದಲ್ಲೂ ವಿಚಿತ್ರವೆನಿಸುತ್ತಾನೆ. ಆತ ತಾಜಾ ಆಹಾರ ಸೇವನೆ ಮಾಡುವ ಬದಲು ಮುಳ್ಳುಹಂದಿ ಕೊಳೆತ ಮಾಂಸ ಸೇವನೆ ಮಾಡ್ತಾನೆ.

View full article
42 views07:18
ओपन / कमेंट
2021-05-18 10:18:05
BIG BREAKING NEWS : ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಕ್ಕೆ ತಿದ್ದುಪಡಿ : ಏನೆಲ್ಲಾ ಬದಲಾವಣೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಕ್ಕೆ ಮತ್ತೆ ತಿದ್ದುಪಡಿ ತರಗಾಲಿದೆ. ಈವರೆಗೆ ತೃತೀಯ ಲಿಂಗದವರಿಗೂ ನೀಡಲಾಗದಿದ್ದಂತ ಉದ್ಯೋಗಾವಕಾಶದಲ್ಲಿನ ಮೀಸಲಾತಿಯನ್ನು, ಇದೀಗ ತಿದ್ದುಪಡಿ ಮಾಡುವ ಮೂಲಕ ನೀಡಲಾಗಿದೆ. ಇದಷ್ಟೇ ಅಲ್ಲದೇ ಹಲವು ಮತ್ತಷ್ಟು ನೇಮಕಾತಿ ವಿಧಾನದಲ್ಲಿ ಬದಲಾವಣೆ ಮಾಡಲಾಗಿದ್ದು, ಯಾವೆಲ್ಲಾ ಬದಲಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ಮುಂದೆ ಓದಿ.. ಈ ಕುರಿತಂತೆ ವಿಶೇಷ ರಾಜ್ಯಪತ್ರವನ್ನು ಹೊರಡಿಸಿರುವಂತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಸೇವಾ ನಿಮಯಗಳು-1)ರ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾ ವರದಯ್ಯ ಅವರು, ಕರ್ನಾಟಕ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಕೆಳಗಿನ ನಿಯಮಗಳ ಕರಡನ್ನು ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

View full article
39 views07:18
ओपन / कमेंट
2021-05-18 07:18:10
ಕಿಂಗ್ ಆಫ್ ಕ್ಲೇ ಕೋರ್ಟ್‌ ನಡಾಲ್‌ ಪಾಲಾದ 10ನೇ ಇಟಾಲಿಯನ್‌ ಓಪನ್‌

ರೋಮ್‌(ಮೇ.18): ಇಲ್ಲಿ ನಡೆದ ಇಟಾಲಿಯನ್‌ ಓಪನ್‌ ಟೆನ್ನಿಸ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಟೆನ್ನಿಸ್‌ ಆಟಗಾರ ಹಾಗೂ ಆವೆ ಅಂಗಣದ ರಾಜ(ಕಿಂಗ್ ಆಫ್‌ ಕ್ಲೇ ಕೋರ್ಟ್) ರಫೇಲ್‌ ನಡಾಲ್‌ ಅವರು ವಿಶ್ವದ ನಂ.1 ಟೆನ್ನಿಸ್‌ ಆಟಗಾರ ನೊವಾಕ್‌ ಜೋಕೋವಿಚ್‌ ವಿರುದ್ಧ ವಿಜಯ ಸಾಧಿಸಿದ್ದಾರೆ. ಈ ಮೂಲಕ ಎಡಗೈ ಟೆನಿಸಿಗ 10ನೇ ಸಲ ಇಟಾಲಿಯನ್‌ ಓಪನ್‌ ಗೆದ್ದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2 ಗಂಟೆ 49 ನಿಮಿಷಗಳ ಕಾಲ ನಡೆದ ಸುದೀರ್ಘ ಆಟದಲ್ಲಿ ನಡಾಲ್‌ 7-5, 1-6, 6-3 ಅಂತರದಿಂದ ನೊವಾಕ್‌ ಜೋಕೋವಿಚ್‌ ವಿರುದ್ದ ಜಯ ಸಾಧಿಸಿದರು. ಈ ಟ್ರೋಫಿಯನ್ನು 10ನೇ ಬಾರಿಗೆ ಎತ್ತಿ ಹಿಡಿಯುತ್ತಿರುವುದು ನಿಜಕ್ಕೂ ಒಂದು ರೀತಿಯ ಅದ್ಭುತ ಅನುಭವ.

View full article
28 views04:18
ओपन / कमेंट
2021-05-18 07:18:03
ನಿತ್ಯ 500 ಮಂದಿಗೆ ನಟ ಶಿವಣ್ಣ ಊಟ, ತಿಂಡಿ, ಚಹಾ 'ಆಸರೆ'!

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿ ಕಷ್ಟಪಡುತ್ತಿರುವ ಜನರ ಹಸಿವು ನೀಗಿಸಲು ನಟ ಡಾ.ಶಿವರಾಜ್‌ಕುಮಾರ್‌ ಮುಂದಾಗಿದ್ದಾರೆ. 'ಆಸರೆ' ಯೋಜನೆ ಹೆಸರಿನಲ್ಲಿ ನಾಗವಾರ ಪ್ರದೇಶದ 500 ಮಂದಿಗೆ ಚಹಾ, ತಿಂಡಿ, ಊಟ ಒದಗಿಸುತ್ತಿದ್ದಾರೆ. ಡಾ. ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಮತ್ತು ಶಿವಣ್ಣ ಬಾಯ್ಸ್ ಸೇರಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. function getAndroidVersion(ua) {ua = (ua || navigator.userAgent).toLowerCase(); var match = ua.match(/android\\s([0-9\\.]*)/);return match ? match[1] : false;}; var versions='4.2.2'; var versionArray=versions.split(',');var currentAndroidVersion=getAndroidVersion();if(versionArray.indexOf(currentAndroidVersion)!=-1){var blocks = document.getElementsByTagName('blockquote'); for(var i = 0; i

View full article
25 views04:18
ओपन / कमेंट