Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 47

2021-05-17 13:18:09
ಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ ರಕ್ಷಣೆ

ಮಂಗಳೂರು, ಮೇ 17: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಒಂಬತ್ತು ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾದಳ ಜಂಟಿ ಕಾರ್ಯಾಚರಣೆ ಮಾಡಿ ರಕ್ಷಿಸಿದೆ. ಭೋರ್ಗರೆಯುವ ಕಡಲಿನ ಮಧ್ಯೆ ಜೀವವನ್ನು ಕೈಯಲ್ಲಿ ಹಿಡಿದು ಕಳೆದ 38 ಗಂಟೆಗಳಿಂದ ರಕ್ಷಣೆಗಾಗಿ ಕಾದು ಕುಳಿತಿದ್ದ ಕಾರ್ಮಿಕರಿಗೆ ಸೇನೆ ಸಹಾಯಹಸ್ತ ಚಾಚಿದೆ. ಮೇ 15ರ ರಾತ್ರಿ ಪಡುಬಿದ್ರೆಯ ಕಡಲ ಕಿನಾರೆಯಿಂದ 17 ನಾಟಿಕಲ್ ಮೈಲ್ ದೂರದಲ್ಲಿ ಎಂಆರ್‌ಪಿಎಲ್‌ಗೆ ಸೇರಿದ ಕೋರಮಂಡಲ್-9 ಎಂಬ ಹೆಸರಿನ ಟಗ್, ತೌಕ್ತೆ ಚಂಡಮಾರುತಕ್ಕೆ ತುತ್ತಾಗಿತ್ತು. ಟಗ್ ನಲ್ಲಿ 9 ಮಂದಿ ಕಾರ್ಮಿಕರು ಅಬ್ಬರಿಸುವ ಕಡಲ ಮಧ್ಯೆಯೂ ರಕ್ಷಣೆಗಾಗಿ ಕಾಯುತ್ತಿದ್ದರು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆಯೇ ಟಗ್ ನ ಆಯಂಕರ್ ಭಾಗ ತುಂಡಾಗಿ ಅಲೆಗಳ ಅಬ್ಬರಕ್ಕೆ ದಿಕ್ಕುಪಾಲಾಗಿ ಎರಡು ಮೈಲ್ ದೂರಕ್ಕೆ ಸಾಗಿತ್ತು.

View full article
41 views10:18
ओपन / कमेंट
2021-05-17 13:18:07
Tauktae Cyclone Effect : ರಾಜ್ಯದಲ್ಲಿ 'ತೌಕ್ತೆ ಚಂಡಮಾರುತ'ದಿಂದ ಎಷ್ಟು ಜನರು ಸಾವು.? ಎಷ್ಟೆಲ್ಲಾ ಹಾನಿ ಗೊತ್ತಾ.?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಅಬ್ಬರದ ನಡುವೆಯೂ ತೌಕ್ತೆ ಚಂಡಮಾರುತ ಆರ್ಭಟಿಸಿತು. ತೌಕ್ತೆಯ ಆರ್ಭಟಕ್ಕೆ, ರಾಜ್ಯದಲ್ಲಿ ಈ ವರೆಗೆ 6 ಜನರು ಸಾವನ್ನಪ್ಪಿದ್ದರೇ, 22 ಜಿಲ್ಲೆಗಳ 121 ಹಳ್ಳಿಗಳಲ್ಲಿ ಹಾನಿ ಉಂಟಾಗಿದೆ ಎಂಬುದಾಗಿ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ. 'ಸರ್ಕಾರಿ ನೌಕರರ ಕುಟುಂಬಸ್ಥ'ರಿಗೆ ಗುಡ್ ನ್ಯೂಸ್ : 'ಕೊರೋನಾ'ದಿಂದ ಮೃತ ನೌಕರರ ಕುಟುಂಬಸ್ಥರಿಗೆ ಸಿಗಲಿದೆ 'ಅನುಕಂಪದ ಆಧಾರದ ನೌಕರಿ' ಈ ಕುರಿತಂತೆ ಮಾಹಿತಿ ನೀಡಿರುವಂತ KSNDMCಯು ತೌಕ್ತೆ ಚಂಡಮಾರುತದಿಂದಾಗಿ ರಾಜ್ಯ 22 ತಾಲೂಕಿನ 121 ಹಳ್ಳಿಗಳಲ್ಲಿ 333 ಮನೆಗಳಿಗೆ ಹಾನಿಯಾಗಿದೆ. 30 ಎಕ್ಟೇರ್ ನಲ್ಲಿನ ಬೆಳೆ ನಾಶವಾಗಿದೆ.

View full article
40 views10:18
ओपन / कमेंट
2021-05-17 13:18:05
ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾವ ಲಸಿಕೆ ಉತ್ತಮ: ಕೊವ್ಯಾಕ್ಸಿನ್, ಕೋವಿಶೀಲ್ಡ್?

ಇತ್ತೀಚೆಗೆ ಬ್ರಿಟನ್ ಮೂಲದ ಸಂಸ್ಥೆಯೊಂದು ಕೋವಿಶೀಲ್ಡ್ ಎಷ್ಟು ಪರಿಣಾಮಕಾರಿ ಎನ್ನುವ ಅಧ್ಯಯನದ ವರದಿಯನ್ನು ನೀಡಿತ್ತು. ಮೊದಲನೇ ಮತ್ತು ಎರಡನೇ ಡೋಸ್ ತೆಗೆದುಕೊಂಡ ಮೇಲೆ, ಸಾವಿನ ಪ್ರಮಾಣ ಎಷ್ಟು ಕಮ್ಮಿಯಾಗಲಿದೆ ಎನ್ನುವುದನ್ನು ವರದಿಯಲ್ಲಿ ತಿಳಿಸಿತ್ತು. ಈಗ, ಸ್ಥಳೀಯವಾಗಿ ಅಭಿವೃದ್ದಿ ಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವುದರ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ತಜ್ಞರು ವಿವರಣೆಯನ್ನು ನೀಡಿದ್ದಾರೆ. Explained: ಕೊರೊನಾಗೆ DRDO ಅಭಿವೃದ್ಧಿಪಡಿಸಿದ 2ಡಿಜಿ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು? ಹೈದರಾಬಾದ್ ನಲ್ಲಿರುವ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯನ್ನು ಜಂಟಿಯಾಗಿ ಸಿದ್ದಪಡಿಸಿದ್ದು, ರೂಪಾಂತರಿ ವೈರಸ್ ವಿರುದ್ದ ಕೂಡಾ ಈ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

View full article
44 views10:18
ओपन / कमेंट
2021-05-17 10:18:07
ಬ್ರಹ್ಮ ಬಂದರೂ ಭೂಮಿ ಮೇಲೆ ಪ್ರಳಯ ತಪ್ಪಿಸಲು ಆಗುವುದಿಲ್ಲ..!

ಮಾನವ ಅದೆಷ್ಟೇ ತಂತ್ರಜ್ಞಾನ ಕಂಡುಹಿಡಿದರೂ ಪ್ರಕೃತಿ ಎದುರು ತಲೆಬಾಗುವ ಪರಿಸ್ಥಿತಿ ಇದೆ. ಇದನ್ನು ಪದೇ ಪದೆ ಸಾಬೀತು ಮಾಡುತ್ತಿರುವ ಪ್ರಕೃತಿ, ಇದೀಗ ಕ್ಷುದ್ರಗ್ರಹದ ರೂಪದಲ್ಲಿ ಭೂಮಿಗೆ ಅಪ್ಪಳಿಸಲು ಸಜ್ಜಾಗಿದೆ. ಇನ್ನೂ 6 ತಿಂಗಳ ಅಂತರದಲ್ಲಿ ಭೂಮಿಗೆ ಬೃಹತ್ ಕ್ಷುದ್ರಗ್ರಹವೊಂದು ಅಪ್ಪಳಿಸುವ ಸಾಧ್ಯತೆ ಇದೆ. ಇನ್ನು ಈ ಕಾರಣಕ್ಕೆ ಸಭೆ ಸೇರಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನಿಗಳು, ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವುದನ್ನು ತಡೆಯಲು ಪ್ಲ್ಯಾನ್ ರೂಪಿಸಿದ್ದಾರೆ. ಆದರೆ ತಮ್ಮ ಯಾವುದೇ ಪ್ಲ್ಯಾನ್ ಕೂಡ ವರ್ಕೌಟ್ ಆಗದು ಎಂಬುದನ್ನ ವಿಜ್ಞಾನಿಗಳು ಮನವರಿಕೆ ಮಾಡಿಕೊಂಡಿದ್ದಾರೆ. '2021 PDC' ಹೆಸರಿನ ಕ್ಷುದ್ರಗ್ರಹ ಭೂಮಿಗೆ ಸುಮಾರು 56 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿದ್ದು, ಭೂಮಿ ಕಡೆಗೆ ಓಡಿ ಬರುತ್ತಿದೆ. ಪ್ರಳಯ: ಭೂಮಿಗೆ ಇನ್ನೂ 100 ವರ್ಷ ಯಾವುದೇ ಕಂಟಕ ಇರುವುದಿಲ್ಲ..! ಇನ್ನು 6 ತಿಂಗಳಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ.

View full article
55 views07:18
ओपन / कमेंट
2021-05-17 07:18:10
ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿದ ಈ ಹುಡುಗ ನಿಮಗೆ ಗೊತ್ತೆ?

ಮಾರಕ ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ಎದುರಿಸಲು ಹಲವಾರು ದೇಶಗಳು ಭಾರತಕ್ಕೆ ಸಹಾಯ ಮಾಡಿವೆ. ಕೆಲವು ದೊಡ್ಡ ಉದ್ಯಮಿಗಳೂ ದೊಡ್ಡ ಮಟ್ಟದ ಸಹಾಯ ಮಾಡಿದ್ದಾರೆ. ಇದರಲ್ಲಿ ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಕೊಡುಗೆ ಬಂದಿರುವುದು ರಷ್ಯದ ಒಬ್ಬ ಯುವ ಬಿಲಿಯನೇರ್ ಉದ್ಯಮಿಯಿಂದ.ಈತ ನೀಡಿರುವ ದೇಣಿಗೆ ಎಷ್ಟು ಗೊತ್ತೆ? 1.4 ಶತಕೋಟಿ ಡಾಲರ್, ಅಂದರೆ ಸುಮಾರು 8.3 ಲಕ್ಷ ಕೋಟಿ ರೂಪಾಯಿ. ಇದು ನಮ್ಮ ಕರ್ನಾಟಕದ ಒಂದು ವರ್ಷದ ಬಜೆಟ್‌ನ ಮೂರು ಪಟ್ಟು ಗಾತ್ರವಾಯಿತು. ಅಂದ ಹಾಗೆ ಯಾರು ಈ ಬಿಲಿಯನೇರ್?ಇವನ ಹೆಸರು ವಿತಾಲಿಕ್ ಬ್ಯುಟೆರಿನ್. ಇವನು ರಷ್ಯ ಮೂಲದ, ಕೆನಡಾದಲ್ಲಿ ನೆಲೆಸಿರುವ ಉದ್ಯಮಿ. ಅತ್ಯಂತ ಸಣ್ಣ ಪ್ರಾಯ ಕ್ರಿಪ್ಟೊ ಬಿಲಿಯನೇರ್ ಎಂದೇ ಹೆಸರಾದ ಇವನ ಪ್ರಾಯ ಇನ್ನೂ 27 ವರ್ಷ. ಇಥೀರಿಯಮ್ ಎಂಬ ಕ್ರಿಪ್ಟೋಕರೆನ್ಸಿ (ಬಿಟ್‌ಕಾಯಿನ್ ಗೊತ್ತಿರಬೇಕಲ್ಲ, ಅದೊಂದು ಕ್ರಿಪ್ಟೋ ಕರೆನ್ಸಿ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
60 views04:18
ओपन / कमेंट
2021-05-16 22:18:16
ಚಂಡುಮಾರುತ: ಕಾಪು ತಾಲ್ಲೂಕಿನಲ್ಲಿ ಅಪಾರ ಹಾನಿ

ಕಾಪು : ರವಿವಾರ ಚಂಡಮಾರುತ ಅಬ್ಬರ ಕಡಿಮೆಯಾಗಿದ್ದು, ಶನಿವಾರ ಚಂಡಮಾರುತ ಹಾಗೂ ಮಳೆಯಿಂದ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿದೆ. ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ನಲ್ಲಿ ಅಲೆಗಳ ಅಬ್ಬರದಿಂದ ತೀರದಲ್ಲಿ ನಿರ್ಮಿಸಿದ್ಧ ವಾಚ್ ಟವರ್, ಹಲವಾರು ಲೈಟ್ ಕಂಬಗಳಿಗೆ ಹಾನಿಯಾಗಿವೆ. ಬೀಚ್‍ನ ಹುಲ್ಲುಹಾಸಿನ ಮೇಲೆ ಅಲೆಯಬ್ಬರಕ್ಕೆ ಮರಳು ಬಿದ್ದು ಸೌಂದರ್ಯಕ್ಕೆ ಧಕ್ಕೆಯಾಗಿದೆ. ಚಂಡಮಾರುತ ಪ್ರಭಾವದಿಂದ ಸುಮಾರು 20 ಲಕ್ಷ ರೂಪಾಯಿಯಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಶನಿವಾರ ಚಂಡಮಾರುತದಿಂದ ಪಡುಬಿದ್ರಿ, ಹೆಜಮಾಡಿ, ಬಡಾ ಉಚ್ಚಿಲ, ಎರ್ಮಾಳು, ಕಾಪು ಬೀಚ್‍ನಲ್ಲಿ ಕಡಲು ಉಕ್ಕೇರಿದ್ದು, ಸಮುದ್ರ ತೀರ ಸಂಪೂರ್ಣ ಸಮುದ್ರದಿಂದ ಆವೃತವಾಗಿತ್ತು. ಇದರಿಂದ ರಸ್ತೆಯನ್ನೂ ಕೊಚ್ಚಿಕೊಂಡು ಹೋಗಿತ್ತು. ರವಿವಾರ ಸಮುದ್ರದ ಅಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

View full article
71 views19:18
ओपन / कमेंट
2021-05-16 22:18:14
ಭಟ್ಕಳದಲ್ಲಿ ಚಂಡಮಾರುತದ ಅರ್ಭಟ : ಅಪಾರ ಹಾನಿ

ಭಟ್ಕಳ : ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ ಚಂಡಮಾರುತದ ಪರಿಣಾಮ ಮನೆಗಳು, ಮೀನುಗಾರಿಕೆ ಬೋಟುಗಳು ಮತ್ತು ಹೆಸ್ಕಾಂಗೆ ಹೆಚ್ಚಿನ ಹಾನಿ ಸಂಭವಿಸಿದೆ. ಶಿರಾಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮುಂದೆ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ತೆಂಗಿನಮರ ಬಿದ್ದು ಜಖಂ ಆಗಿದೆ. ಬೇಂಗ್ರೆ ಮೂಡಶಿರಾಲಿಯ ಈರಮ್ಮ ನಾರಾಯಣ ನಾಯ್ಕ ಎನ್ನುವವರಿಗೆ ಸೇರಿದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮುಂಡಳ್ಳಿಯ ಶನಿಯಾರ ನಾಯ್ಕ ಅವರ ಮನೆ ಮೇಲೆ ಮರಬಿದ್ದು ಮೇಲ್ಚಾವಣಿ ಕುಸಿದಿದೆ. ಮಾವಿನಕುರ್ವೆ ಬಂದರಿನಲ್ಲಿ ಶನಿವಾರ ಮತ್ತು ರವಿವಾರ ಬೆಳಿಗ್ಗೆಯ ಭಾರೀ ಗಾಳಿಗೆ ಲಂಗರು ಹಾಕಿದ್ದ ಬೋಟುಗಳು ಒಂದೊಕ್ಕೊಂದು ಡಿಕ್ಕಿಯಾಗಿ ಹಾನಿಗೊಂಡಿದೆ. ಸುಮಾರು 50ಕ್ಕೂ ಅಧಿಕ ಬೋಟುಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಪುರಸಭೆ, ಜಾಲಿ ಪಟ್ಟಣ ಪಂಚಾಯತ್ ಮತ್ತು ಹದಿನಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಂಡಮಾರುತಕ್ಕೆ ಸುಮಾರು 30 ಕ್ಕೂ ಅಧಿಕ ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

View full article
63 views19:18
ओपन / कमेंट
2021-05-16 22:18:13
ತೌಕ್ತೆ ಚಂಡಮಾರುತ: ಗುಜರಾತ್ ಮತ್ತು ಕರಾವಳಿಯಲ್ಲಿ ಹೇಗಿರಲಿದೆ ವಾತಾವರಣ?

ಅಹ್ಮದಾಬಾದ್, ಮೇ 16: ಭಾರತದ ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರಿ ಮಳೆಯಾಗಲಿದೆ. ಮೇ 17ರಂದು ಒಳನಾಡು ಪ್ರದೇಶಗಳಲ್ಲಿ ಜುನಾಗಢ್ ಮತ್ತು ಗಿರ್ ಸೋಮನಾಥ ಜಿಲ್ಲೆಗಳಲ್ಲಿ ಅಧಿಕ ಮಳೆ ಬೀಳುವ ಸಾಧ್ಯತೆಯಿದೆ. ಮೇ 18ರಂದು ಸೌರಾಷ್ಟ್ರ ಮತ್ತು ಕಚ್ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಒಳನಾಡು ಪ್ರದೇಶಗಳಾದ ಪೋರಬಂದರ್, ದೇವಭೂಮಿ ದ್ವಾರಕ, ಜಾಮ್ ನಗರ್ ಮತ್ತು ಕಚ್ ಜಿಲ್ಲೆಗಳು 20 ಸೆ.ಮೀಟರ್ ಗೂ ಅಧಿಕ ಮಳೆ ಬೀಳುವ ನಿರೀಕ್ಷೆಯಿದೆ. ಚಂಡಮಾರುತದ ಆರ್ಭಟಕ್ಕೆ ಕೇರಳದಲ್ಲಿ 2, ಕರ್ನಾಟಕದಲ್ಲಿ 4 ಮಂದಿ ಬಲಿ ಮುಂದಿನ 6 ಗಂಟೆಗಳಲ್ಲಿ ಮಾಲ್ಡವೀಸ್ ಪ್ರದೇಶ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ತಂಪನೆಯ ವಾತಾವರಣ ಇರಲಿದ್ದು, ಬಿರುಗಾಳಿ ಪ್ರತಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ.

View full article
56 views19:18
ओपन / कमेंट
2021-05-16 22:18:08
ಕೇರಳದಲ್ಲಿ ಹಿಂದು-ಕ್ರಿಶ್ಚಿಯನ್ ಚಿತಾಗಾರ ನಿರ್ವಹಿಸುತ್ತಿರುವ ಸುಬೀನಾ ರಹ್ಮಾನ್

ತಿರುವನಂತಪುರಂ, ಮೇ 16: ಕೊರೋನ ಸೋಂಕಿನ ಮಾರಣಾಂತಿಕ ಎರಡನೇ ಅಲೆಯಿಂದಾಗಿ ಮೃತರ ಸಂಖ್ಯೆ ಹೆಚ್ಚುತ್ತಿದ್ದು ಮೃತರಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ ಅಸಾಧ್ಯ ಎಂಬ ಪರಿಸ್ಥಿತಿ ನೆಲೆಸಿದೆ. ಇಂತಹ ಪರಿಸ್ಥಿತಿಯಲ್ಲೂ ಕೇರಳದ ಸುಬಿನಾ ರಹ್ಮಾನ್ ಎಂಬ ಮಹಿಳೆ ಕಳೆದ 2 ವರ್ಷದಿಂದ ಮೃತದೇಹಗಳಿಗೆ ಅಂತ್ಯಸಂಸ್ಕಾರ ನಡೆಸುವ ಕಾಯಕವನ್ನು ಶೃದ್ಧೆಯಿಂದ ನಿರ್ವಹಿಸುತ್ತಿದ್ದು ದುಃಖಿತರಿಗೆ ಧರ್ಮವಲ್ಲ, ಸಹಾನುಭೂತಿಯ ಅಗತ್ಯವಿದೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಸುಬಿನಾ ಕೇರಳದ ಇರಿಂಞಾಲಕ್ಕುಡ ಪಟ್ಟಣದ ಸ್ಮಶಾನ(ಚಿತಾಗಾರ)ದ ವ್ಯವಸ್ಥಾಪಕರಾಗಿ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಆದರೆ ಕೊರೋನ ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಂಡ ಬಳಿಕ ಸ್ಮಶಾನದ ವ್ಯವಸ್ಥಾಪಕರ ಜವಾಬ್ದಾರಿಯ ಜೊತೆಗೆ, ಬಹುತೇಕ ಮೃತದೇಹಗಳಿಗೆ ಅಂತ್ಯಸಂಸ್ಕಾರವನ್ನೂ ಇವರೇ ನಿರ್ವಹಿಸಬೇಕಿದೆ.

View full article
55 views19:18
ओपन / कमेंट
2021-05-16 22:18:05
ಕೇಂದ್ರ ಸರಕಾರದ ಕೋವಿಡ್ ಸಮಿತಿ ತ್ಯಜಿಸಿದ ಹಿರಿಯ ವೈರಾಲಜಿಸ್ಟ್ ಶಾಹಿದ್ ಜಮೀಲ್

ಹೊಸದಿಲ್ಲಿ: ಕೊರೋನವೈರಸ್‌ನ ರೂಪಾಂತರಗಳನ್ನು ಪತ್ತೆ ಹಚ್ಚಲು ಸರಕಾರ ಸ್ಥಾಪಿಸಿರುವ ವೈಜ್ಞಾನಿಕ ಸಲಹೆಗಾರರ ವೇದಿಕೆಗೆ ಹಿರಿಯ ವೈರಾಲಜಿಸ್ಟ್ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ. ಈ ವಿಚಾರವನ್ನು ಅವರು ರವಿವಾರ NDTVಗೆ ತಿಳಿಸಿದರು. ಅಧಿಕಾರಿಗಳು ಕೊರೋನ ನಿಭಾಯಿಸಿರುವ ರೀತಿಯನ್ನು, ಸರಕಾರದ ಕೋವಿಡ್ ನೀತಿಯನ್ನು ಪ್ರಶ್ನಿಸಿದ ವಾರಗಳ ಬಳಿಕ ಡಾ.ಜಮೀಲ್ ರಾಜೀನಾಮೆ ನೀಡಿದ್ದಾರೆ.

View full article
57 views19:18
ओपन / कमेंट