Get Mystery Box with random crypto!

ಕೇರಳದಲ್ಲಿ ಹಿಂದು-ಕ್ರಿಶ್ಚಿಯನ್ ಚಿತಾಗಾರ ನಿರ್ವಹಿಸುತ್ತಿರುವ ಸುಬೀನಾ ರಹ | Kannada News Daily

ಕೇರಳದಲ್ಲಿ ಹಿಂದು-ಕ್ರಿಶ್ಚಿಯನ್ ಚಿತಾಗಾರ ನಿರ್ವಹಿಸುತ್ತಿರುವ ಸುಬೀನಾ ರಹ್ಮಾನ್

ತಿರುವನಂತಪುರಂ, ಮೇ 16: ಕೊರೋನ ಸೋಂಕಿನ ಮಾರಣಾಂತಿಕ ಎರಡನೇ ಅಲೆಯಿಂದಾಗಿ ಮೃತರ ಸಂಖ್ಯೆ ಹೆಚ್ಚುತ್ತಿದ್ದು ಮೃತರಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ ಅಸಾಧ್ಯ ಎಂಬ ಪರಿಸ್ಥಿತಿ ನೆಲೆಸಿದೆ. ಇಂತಹ ಪರಿಸ್ಥಿತಿಯಲ್ಲೂ ಕೇರಳದ ಸುಬಿನಾ ರಹ್ಮಾನ್ ಎಂಬ ಮಹಿಳೆ ಕಳೆದ 2 ವರ್ಷದಿಂದ ಮೃತದೇಹಗಳಿಗೆ ಅಂತ್ಯಸಂಸ್ಕಾರ ನಡೆಸುವ ಕಾಯಕವನ್ನು ಶೃದ್ಧೆಯಿಂದ ನಿರ್ವಹಿಸುತ್ತಿದ್ದು ದುಃಖಿತರಿಗೆ ಧರ್ಮವಲ್ಲ, ಸಹಾನುಭೂತಿಯ ಅಗತ್ಯವಿದೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಸುಬಿನಾ ಕೇರಳದ ಇರಿಂಞಾಲಕ್ಕುಡ ಪಟ್ಟಣದ ಸ್ಮಶಾನ(ಚಿತಾಗಾರ)ದ ವ್ಯವಸ್ಥಾಪಕರಾಗಿ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಆದರೆ ಕೊರೋನ ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಂಡ ಬಳಿಕ ಸ್ಮಶಾನದ ವ್ಯವಸ್ಥಾಪಕರ ಜವಾಬ್ದಾರಿಯ ಜೊತೆಗೆ, ಬಹುತೇಕ ಮೃತದೇಹಗಳಿಗೆ ಅಂತ್ಯಸಂಸ್ಕಾರವನ್ನೂ ಇವರೇ ನಿರ್ವಹಿಸಬೇಕಿದೆ.

View full article