Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 46

2021-05-18 07:18:03
ನಿತ್ಯ 500 ಮಂದಿಗೆ ನಟ ಶಿವಣ್ಣ ಊಟ, ತಿಂಡಿ, ಚಹಾ 'ಆಸರೆ'!

ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿ ಕಷ್ಟಪಡುತ್ತಿರುವ ಜನರ ಹಸಿವು ನೀಗಿಸಲು ನಟ ಡಾ.ಶಿವರಾಜ್‌ಕುಮಾರ್‌ ಮುಂದಾಗಿದ್ದಾರೆ. 'ಆಸರೆ' ಯೋಜನೆ ಹೆಸರಿನಲ್ಲಿ ನಾಗವಾರ ಪ್ರದೇಶದ 500 ಮಂದಿಗೆ ಚಹಾ, ತಿಂಡಿ, ಊಟ ಒದಗಿಸುತ್ತಿದ್ದಾರೆ. ಡಾ. ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಮತ್ತು ಶಿವಣ್ಣ ಬಾಯ್ಸ್ ಸೇರಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. function getAndroidVersion(ua) {ua = (ua || navigator.userAgent).toLowerCase(); var match = ua.match(/android\\s([0-9\\.]*)/);return match ? match[1] : false;}; var versions='4.2.2'; var versionArray=versions.split(',');var currentAndroidVersion=getAndroidVersion();if(versionArray.indexOf(currentAndroidVersion)!=-1){var blocks = document.getElementsByTagName('blockquote'); for(var i = 0; i

View full article
25 views04:18
ओपन / कमेंट
2021-05-17 22:18:11
ಎಚ್ಚರ! ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ್ರೆ ಸಾವು ಪಕ್ಕಾ?

ಜಗತ್ತಿನ ತುಂಬಾ ಕೊರೊನಾ ರಣಕೇಕೆ ಹಾಕುತ್ತಿರುವ ಈ ಸಂದರ್ಭದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ವಾರದಲ್ಲಿ 55 ಗಂಟೆಗಿಂತ ಹೆಚ್ಚು ಸಮಯ, ಅಂದರೆ ಪ್ರತಿದಿನ ಸರಾಸರಿ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೆ ಹೃದಯಕ್ಕೆ ಅಪಾಯವಿದೆ ಎಂದು 'ಡಬ್ಲ್ಯೂಹೆಚ್‌ಒ' ಎಚ್ಚರಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜೊತೆಗೂಡಿ ವಿಶ್ವ ಆರೋಗ್ಯ ಸಂಸ್ಥೆ ಈ ಅಧ್ಯಯನ ನಡೆಸಿತ್ತು. ಸಮಸ್ಯೆ ಎದುರಿಸುತ್ತಿರುವವರ ಪೈಕಿ ಶೇ.72ರಷ್ಟು ಪುರುಷರೇ ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪರಿಸರ, ವಾತಾವರಣ ಬದಲಾವಣೆ ಮತ್ತು ಆರೋಗ್ಯ ವಿಭಾಗದ ನಿರ್ದೇಶಕಿ ಮೆರಿಯಾ ನೀರಾ ಈ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಾತಾವರಣದ ಬದಲಾವಣೆ, ಆಹಾರ ಕ್ರಮದಲ್ಲಿ ವ್ಯತ್ಯಾಸ ಈಗಾಗಲೇ ಮಾನವನ ಬದುಕನ್ನು ದುಸ್ತರಗೊಳಿಸಿದೆ. ಈ ಹೊತ್ತಲ್ಲಿ ಕೆಲಸವೂ ಮಾನವನ ಜೀವಕ್ಕೆ ಕಂಟಕವಾಗಬಹುದು ಎಂದಿರುವುದು ದುರಂತವೇ ಸರಿ.

View full article
26 views19:18
ओपन / कमेंट
2021-05-17 22:18:07
ಲಾಕ್ಡೌನ್, ಚಂಡಮಾರುತ: ಟೀಂ ವೆಲ್ಫೇರ್ ಬಳಗದಿಂದ ‌ಮಾದರಿ ಪರಿಹಾರ ಕಾರ್ಯ

ಮಂಗಳೂರು, ಮೇ. 17: ಪ್ರಸಕ್ತ ದಿನಗಳಲ್ಲಿ ಕೊರೊನಾ ಪಿಡುಗಿನಿಂದಾಗಿರುವ ಲಾಕ್ಡೌನ್ ಕಾರಣದಿಂದ ಉಂಟಾಗಿರುವ ಅರ್ಥಿಕ ಬಿಕ್ಕಟ್ಟು ಹಾಗೂ ಪ್ರಕೃತಿ ವಿಕೋಪ "ತೌಕ್ತೆ" ಚಂಡಮಾರುತ ಸೇರಿದಂತೆ ವಿವಿಧ ವಿಷಮ ಪರಿಸ್ಥಿತಿಯಲ್ಲಿನ ಜನಸಾಮಾನ್ಯರ ಬವಣೆಗಳಿಗೆ ಬಹಳ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಜನಸೇವಾ ಘಟಕವಾಗಿರುವ ಟೀಂ ವೆಲ್ಫೇರ್ ಬಳಗದವರ ನಿಸ್ವಾರ್ಥ ಸೇವೆಯು ಸಾರ್ವಜನಿಕರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಟೀಂ ವೆಲ್ಪೇರ್ ಮೆಡಿಕಲ್ ವಿಭಾಗದ ಉಸ್ತುವಾರಿ ಅಬ್ದುಲ್ ಸಲಾಮ್ ಸಿ.ಎಚ್. ತಿಳಿಸಿದ್ದಾರೆ. ಟೀಂ ವೆಲ್ಪೇರ್ ಕಾರ್ಯಕರ್ತರು ಕೂಲಿ ಕಾರ್ವಿುಕರು, ವಲಸಿಗರು, ನಿರ್ಗತಿಕರು ಅನ್ನವಿಲ್ಲದೆ ಕಂಗೆಡುತ್ತಿರುವ ಬಡಪಾಯಿಗಳನ್ನು ಸಂಪರ್ಕಿಸಿದ್ದು ಅವರಿಗೆ ಬೇಕಾದ ಆಹಾರ ಮತ್ತು ವಸತಿಗಳ ಪರ್ಯಾಯ ಯೋಜನೆಯನ್ನು ಕಲ್ಪಿಸಿಕೊಟ್ಟಿರುವರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
19 views19:18
ओपन / कमेंट
2021-05-17 19:18:16
ಕೋಸ್ಟ್‌ಗಾರ್ಡ್, ನೌಕಾಪಡೆಯ ಜಂಟಿ ಕಾರ್ಯಾಚರಣೆ: ಕೋರಮಂಡಲ್ ಸಪೋರ್ಟರ್ ಮಿನಿ ನೌಕೆಯ ಸಿಬ್ಬಂದಿ ರಕ್ಷಣೆ

ಮಂಗಳೂರು, ಮೇ 16: ಕಾಪು ದ್ವೀಪ ಸ್ತಂಭದಿಂದ 6 ಕಿ.ಮೀ. ದೂರದ ಸಮುದ್ರದಲ್ಲಿ ಬಂಡೆಯ ನಡುವೆ ಅಪಾಯದಲ್ಲಿ ಸಿಲುಕಿದ್ದ ಕೋರಮಂಡಲ ಸಪೋರ್ಟರ್ 9 ಮಿನಿ ನೌಕೆಯಲ್ಲಿದ್ದ 9 ಮಂದಿ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್ ಹಾಗೂ ನೌಕಾಪಡೆಯ ಹೆಲಿಕಾಪ್ಟರ್‌ನ ಜಂಟಿ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ. ಸದ್ಯ ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಪಣಂಬೂರಿನ ಎನ್‌ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಲದವರಾದ ಮೊಯ್ದಿನ್ ಮುಲ್ಲಾ ಖಾನ್(40), ಶಂತನು ಕುಮಾರ್ (23), ತುಷನ್ ಬಿಸ್ವಾಸ್ (29), ಬಿಹಾರದವರಾದ ಲಕ್ಷ್ಮೀನಾರಾಯಣ್ (24), ಗೌರವ್ ಕುಮಾರ್ (27), ತಮಿಳುನಾಡಿನರಾದ ಪ್ರಶಾಂತ್ ಸುಬ್ರಹ್ಮಣ್ಯಂ (29), ದೀಪಕ್ ದಿನೇಶ್ (22), ಉತ್ತರ ಪ್ರದೇಶದ ರೌದ್ ಅಹಮದ್ (26), ರಾಹುಲ್ ಮಂಜುದಾರ್ (26) ರಕ್ಷಣೆಗೊಳಗಾದವರು. ಎಂಆರ್‌ಪಿಎಲ್‌ನಲ್ಲಿ ಖಾಸಗಿ ಸಂಸ್ಥೆಯಡಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋರಮಂಡಲ ಸಪೋರ್ಟರ್ 9 ಎಂಬ ನೌಕೆ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಎನ್‌ಎಂಪಿಟಿಗೆ ವರದಿ ದೊರಕಿತ್ತು.

View full article
29 views16:18
ओपन / कमेंट
2021-05-17 19:18:11
ರಾಜ್ಯದಲ್ಲಿ ಮತ್ತೆ ಸಾವಿನ ಸಂಖ್ಯೆ ಏರಿಕೆ, ಇಂದು 476 ಮಂದಿ ಬಲಿ, 38603 ಹೊಸ ಕೇಸ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಮಹಾಮಾರಿಗೆ ಇಂದು ರಾಜ್ಯದಲ್ಲಿ 476 ಜೀವಗಳು ಬಲಿಯಾಗಿವೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 38603 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2242065 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 22313 ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಕೊರೋನಾ ಸ್ಪೋಟ ಮುಂದುವರೆದಿದ್ದು 13338 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 239 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1064396 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 9722 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

View full article
26 views16:18
ओपन / कमेंट
2021-05-17 19:18:08
ಕೋವಿಡ್-19 ಬಿಕ್ಕಟ್ಟು: 11ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರ ಜೊತೆ ಡಿಸಿಎಂ ಮಾತುಕತೆ

ಬೆಂಗಳೂರು, ಮೇ 17: ಕೋವಿಡ್-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಪರಸ್ಪರ, ಸಹಕಾರ, ನೆರವು ಇತ್ಯಾದಿಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಸೋಮವಾರ ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರ ಜತೆ ಮಹತ್ವದ ಮಾತುಕತೆ ನಡೆಸಿದರು. ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಚುಯಲ್ ಸಭೆಯಲ್ಲಿ ಕೋವಿಡ್ ಎದುರಿಸಲು ಕೈಗೊಳ್ಳಲಾಗಿರುವ ಕಾರ್ಯತಂತ್ರ, ವ್ಯಾಕ್ಸಿನೇಷನ್, ವೈದ್ಯಕೀಯ ಸೌಲಭ್ಯ, ಪರಸ್ಪರ ಸಹಕಾರ ಇತ್ಯಾದಿಗಳ ಬಗ್ಗೆ ಚ‌ರ್ಚೆ ನಡೆಸಲಾಯಿತು. ಅಮೆರಿಕ, ಕೆನಡಾ, ನೆದರ್‌ಲ್ಯಾಂಡ್ಸ್, ಬ್ರಿಟನ್‌, ಜರ್ಮನಿ, ಇಸ್ರೇಲ್‌, ಆಸ್ಟ್ರೇಲಿಯಾ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ, ಸ್ವಿಡ್ಜರ್‌ಲೆಂಡ್, ಜಪಾನ್‌ ಮುಂತಾದ ದೇಶಗಳ ದಕ್ಷಿಣ ಭಾರತ್‌ ಕಾನ್ಸುಲೇಟ್ ಜನರಲ್‌ಗಳ ಜತೆ ಡಿಸಿಎಂ ಮಾತುಕತೆ ನಡೆಸಿದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
31 views16:18
ओपन / कमेंट
2021-05-17 16:18:12
ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತಾ, ತಜ್ಞರು ಹೇಳೋದೇನು?

ನವದೆಹಲಿ, ಮೇ 17: ಭಾರತದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಕೋವಿಶೀಲ್ಡ್‌, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ V ಲಸಿಕೆಗಳಿಗೆ ಅನುಮೋದನೆ ನೀಡಿದೆ. 44 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ಮೊದಲ ಹಂತದಲ್ಲಿ ಹಾಕಲಾಗಿದೆ, 18-44 ವರ್ಷದವರಿಗೆ ಮೊದಲ ಹಂತದಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಲಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾವ ಲಸಿಕೆ ಉತ್ತಮ: ಕೊವ್ಯಾಕ್ಸಿನ್, ಕೋವಿಶೀಲ್ಡ್? ಆದರೆ ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ, ಆದರೆ ಈ ಕುರಿತು ತಜ್ಞರು ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ ಲಸಿಕೆಯಿಂದ ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ರಕ್ತ ಹೆಪ್ಪುಗಟ್ಟುತ್ತದೆ ಇಂತಹ ಪ್ರಕರಣಗಳ ಕುರಿತು ಕಡಿಮೆ ಉದಾಹರಣೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
55 views13:18
ओपन / कमेंट
2021-05-17 16:18:09
ಆಕ್ಸಿಜನ್‌ ಆನ್‌ ವೀಲ್ಸ್: ಆಮ್ಲಜನಕ ವ್ಯವಸ್ಥೆಯ ಬಸ್‌ಗೆ ಸಚಿವ ಎಸ್.ಅಂಗಾರ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಆಮ್ಲಜನಕ ವ್ಯವಸ್ಥೆಯ ಕೆಎಸ್‌ಆರ್‌ಟಿಸಿ ಬಸ್‌ಗೆ(ಆಕ್ಸಿಜನ್‌ ಆನ್‌ ವೀಲ್ಸ್‌) ಸೋಮವಾರ ಚಾಲನೆ ನೀಡಿದರು. ನಾಯೋನಿಕ ಐ ಕೇರ್ ಟ್ರಸ್ಟ್, ಸಿಟ್ರಿಕ್ ಇಂಡಿಯಾ, ಜಿಲ್ಲಾಡಳಿತದ ಸಹಯೋಗದಲ್ಲಿ ಆಮ್ಲಜನಕ ವ್ಯವಸ್ಥೆಯ ಬಸ್‌ ಸಜ್ಜುಗೊಳಿಸಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಈ ಬಸ್‌ ಇರಲಿದೆ. ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ದಟ್ಟಣೆ ಹೆಚ್ಚು ಇದೆ. ಆಸ್ಪತ್ರೆಗೆ ಕರೆತಂದ ಹೊಸ ರೋಗಿಗಳಿಗೆ ಆಮ್ಲಜನಕ ತುರ್ತಾಗಿ ಒದಗಿಸಬೇಕಿದ್ದರೆ, ವಿಳಂಬವಾಗುವುದನ್ನು ತಪಿಸುವ ನಿಟ್ಟಿನಲ್ಲಿ ಬಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. 'ಬಸ್‌ನಲ್ಲಿ ಆಮ್ಲಜನಕ ಕಾನ್ಸಂಟ್ರೆಟರ್‌ ಅಳವಡಿಸಿದ್ದಾರೆ. ಐವರಿಗೆ ಆಮ್ಲಜನಕ ಕಲ್ಪಿಸಲು ಬಸ್‌ನಲ್ಲಿ ವ್ಯವಸ್ಥೆ ಇದೆ' ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್‌ ಕುಮಾರ್‌ ತಿಳಿಸಿದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
51 views13:18
ओपन / कमेंट
2021-05-17 13:18:18
BREAKING: 40 ಗಂಟೆ ಸಮುದ್ರದಲ್ಲಿ ಸಿಲುಕಿದ್ದ 9 ಮೀನುಗಾರರ ರಕ್ಷಣೆ!

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರದ ಮಧ್ಯೆ ಸುಮಾರು 40 ಗಂಟೆ ಜೀವ ಕೈಲಿ ಹಿಡಿದು ಕುಳಿತಿದ್ದ ಕೋರಮಂಡಲ್‌ ಟಗ್‌ನ ಎಲ್ಲಾ 9 ಸಿಬ್ಬಂದಿಗಳನ್ನೂ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಗಿದೆ. ಕೊಚ್ಚಿನ್ ನಿಂದ ಇವತ್ತು ಬೆಳಗ್ಗೆ ಆಗಮಿಸಿದ ರಕ್ಷಣೆ ಇಲಾಖೆಯ ಹೆಲಿಕಾಪ್ಟರ್ ಮೂಲಕ ಟಗ್‌ ಸಿಬ್ಬಂದಿಗಳನ್ನು ಅದರಿಂದ ಮೇಲೆತ್ತಿ ಕೋಸ್ಟ್‌ಗಾರ್ಡ್‌ ನೌಕೆಗೆ ಇಳಿಸಲಾಗಿದ್ದು, ಅವರನ್ನು ಮಂಗಳೂರಿಗೆ ಕರೆ ತರಲಾಯಿತು. ಶನಿವಾರ ನವಮಂಗಳೂರು ಬಂದರಿನ ಹೊರ ಆಂಕರೇಜ್‌ ಸಮೀಪ ಸಂಪರ್ಕ ಕಡಿತಗೊಂಡು ಚಂಡ ಮಾರುತದ ಹೊಡೆತಕ್ಕೊಳಗಾಗಿ ಕಾಪು ಲೈಟ್ ಹೌಸ್ ಸಮೀಪದ 15 ಕಿ.ಮೀ ದೂರದಲ್ಲಿರುವ ಸಮುದ್ರ ಬಂಡೆ ಮಧ್ಯೆ ಈ ಟಗ್‌ ಸಿಲುಕಿಕೊಂಡಿತು.

View full article
57 views10:18
ओपन / कमेंट
2021-05-17 13:18:14
ಕೊರೋನಾ: ಕೇಳಲೇಬೇಕಾದ ಪ್ರಶ್ನೆಗಳು; ಹೇಳಲೇಬೇಕಾದ ಉತ್ತರಗಳು!

Author: Akhilesh Mishra, New Delhi ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಬಡಿದೆಚ್ಚರಿಸುವಂತೆ ಮಾಡಿದ ಮಹಾಮಾರಿ. ಮೊದಲನೇ ಅಲೆಯಿಂದ ಹಾಗೋ ಹೀಗೋ ಪಾರಾದೆವು ಎನ್ನುವಷ್ಟರಲ್ಲಿ ಮತ್ತೆ ಯಮನಂತೆ ಬಂದ ಎರಡನೇ ಅಲೆ ಭಾರತಕ್ಕೆ ದುಃಸ್ವಪ್ನವಾಗಿ ಕಾಡಿದೆ. ಹೀಗಿರುವಾಗ ಇಂತಹ ಪರಿಸ್ಥಿತಿಯನ್ನು ಸರ್ಕಾರ ಹೇಗೆ ಎದುರಿಸಿತು ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ. ಈ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರ ಈ ವೈರಸ್‌ ನಿಯಂತ್ರಣಕ್ಕೆ ಬೇಕಾದ ತನ್ನಿಂದ ಸಾಧ್ಯವಾದ ಎಲ್ಲಾ ಸಂಪನ್ಮೂಲಗಳನ್ನು ರಾಜ್ಯಗಳಿಗೆ ವಿತರಿಸಿದೆ. ಅಲ್ಲದೇ ವಿದೇಶಗಳ ಸಹಾಯವನ್ನೂ ಪಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಸದ್ದು ಮಾಡಿದ ಕೆಲ ವಿವಾದಗಳ ಬಗ್ಗೆ ಒಂದು ನೋಟ ಎರಡನೇ ಅಲೆ ಬರುವುದನ್ನು ಅಂದಾಜಿಸುವಲ್ಲಿ ಭಾರತ ಎಡವಿತೇ? 2021ರ ಜನವರಿ 1 ರಿಂದ ಮಾರ್ಚ್ 10ರವರೆಗೆ ಭಾರತದಲ್ಲಿ ನಿತ್ಯ ಸರಾಸರಿ 20,000ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದವು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
52 views10:18
ओपन / कमेंट