Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 44

2021-05-19 22:18:13
3ನೇ ಮಹಾಯುದ್ಧಕ್ಕೆ ರಣಕಹಳೆ..? ಇಸ್ರೇಲ್ ವಿರುದ್ಧ ಅರಬ್ ರಾಷ್ಟ್ರಗಳು ಗರಂ..?

ಎಷ್ಟೇ ಬೇಡಿದರೂ ರಕ್ತಪಾತ ನಿಲ್ಲುತ್ತಿಲ್ಲ, ಬೀದಿ ಬೀದಿಯಲ್ಲಿ ಬಾಂಬ್ ಏಟು ತಿಂದು ನರಳಾಡಿ ಸಾಯುತ್ತಿರುವ ಜನರ ಸಂಖ್ಯೆ ಏರುತ್ತಲೇ ಇದೆ. ಆದರೆ ಇಂತಹ ಹೊತ್ತಲ್ಲೇ ಮತ್ತೆ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಡೆಡ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ 12 ಅಮಾಯಕ ನಾಗರಿಕರು ಮೃತಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಈಗಾಗಲೇ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ಕಿತ್ತಾಟಕ್ಕೆ ಬಲಿಯಾದವರ ಸಂಖ್ಯೆ 250ರ ಸಮೀಪ ಬಂದು ತಲುಪಿದೆ. ಇದು ಜಗತ್ತಿನಾದ್ಯಂತ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಅಮೆರಿಕ ಅಧ್ಯಕ್ಷರು ಖುದ್ದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕರೆ ಮಾಡಿ ದಾಳಿ ನಿಲ್ಲಿಸಲು ಮನವಿ ಮಾಡಿದ್ದಾರೆ. ಉಗ್ರರ ನಾಯಕನ ಹೆಣ ಉರುಳಿಸಿತು ಇಸ್ರೇಲ್ ಸೇನೆಯ ರಾಕೆಟ್..! ಅಮಾಯಕರನ್ನ ರಕ್ಷಿಸಿ ಪ್ಲೀಸ್ ಎಂದು ಬೇಡಿದ್ದೂ ಆಗಿದೆ.

View full article
70 views19:18
ओपन / कमेंट
2021-05-19 22:18:09
ಹರೇಕಳ ಡ್ಯಾಂ ನಿರ್ಮಾಣ ಪ್ರದೇಶಕ್ಕೆ ಯು.ಟಿ.ಖಾದರ್ ಭೇಟಿ

ಕೊಣಾಜೆ: ಹರೇಕಳ ಅಡ್ಯಾರ್ ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಯು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಚಂಡಮಾರುತ ಪ್ರಭಾವದಿಂದಾಗಿ ನೀರಿನ ಮಟ್ಟ ಏರಿಕೆಯಾಗಿತ್ತು.ಆದರೆ ಶಂಬೂರು ಮತ್ತು ತುಂಬೆ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ಸಂದರ್ಭ ಹರೇಕಳ ಡ್ಯಾಂ ನಿರ್ಮಿಸುವ ಸಂಸ್ಥೆಗೆ ಮಾಹಿತಿ ನೀಡಬೇಕು. ಆದರೆ ಎಎಂಆರ್ ಹೈಡ್ರೋಲಿಕ್ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ನೀರು ಬಿಟ್ಟು ಬೇಜವಾಬ್ದಾರಿ ಮೆರೆದಿದೆ. ಇದರಿಂದ ಸೇತುವೆ ಕಾಮಗಾರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು. ಮಳೆನೀರು ಬಿಡದಿದ್ದರೆ ಮಳೆಗಾಲದಲ್ಲಿ ಸ್ಲಾಬ್ ನಿರ್ಮಿಸಿ ಜನರು ನಡೆದಾಡುವ ವ್ಯವಸ್ಥೆ ಪೂರ್ಣಗೊಳ್ಳುತ್ತಿತ್ತು. ಅದರೆ ಇದೀಗ ಕಾಮಗಾರಿಗೆ ಅಡಚನೆಯಾಗಿದೆ.

View full article
69 views19:18
ओपन / कमेंट
2021-05-19 22:18:07
ಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ; ಏಮ್ಸ್ ವೈದ್ಯೆ ಎಚ್ಚರಿಕೆ

ನವದೆಹಲಿ, ಮೇ 19: ದೇಶದಲ್ಲಿ ಕೊರೊನಾ ಎರಡನೇ ಅಲೆ ನಡುವೆ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್‌ ಫಂಗಸ್ (mucormycosis-ಕಪ್ಪು ಶಿಲೀಂಧ್ರ) ಪ್ರಕರಣಗಳು ಹೆಚ್ಚಾಗುತ್ತಿವೆ. ದಿನೇ ದಿನೇ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇದರ ಸಂಖ್ಯೆ ಮೂರಂಕಿ ಮೀರುತ್ತಿದೆ ಎಂದು ದೆಹಲಿ ಏಮ್ಸ್‌ ನ್ಯೂರಾಲಜಿ ವಿಭಾಗದ ಪ್ರೊ. ಎಂ.ವಿ. ಪದ್ಮ ಶ್ರೀವಾತ್ಸವ ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ದಿನೇ ದಿನೇ ಬ್ಲಾಕ್ ಫಂಗಸ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ದಿನನಿತ್ಯ ಸುಮಾರು 20 ಹೊಸ ಪ್ರಕರಣಗಳು ಕಂಡುಬರುತ್ತಿವೆ. ಪ್ರತ್ಯೇಕ ವಾರ್ಡ್ ಕೂಡ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ಅನ್ನು ನಿರ್ಲಕ್ಷಿಸುವಂತೆಯೇ ಇಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ... ಬ್ಲಾಕ್‌ ಫಂಗಸ್ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ರಾಜಸ್ಥಾನ "ಹೆಚ್ಚಿನ ಸ್ಟೆರಾಯ್ಡ್ ಬಳಕೆಯೂ ಕಾರಣವಾಗಿರಬಹುದು" ದೆಹಲಿಯ ಶ್ರೀಗಂಗಾ ಆಸ್ಪತ್ರೆಯಲ್ಲಿ ಮೇ 7ರಿಂದ ಇದುವರೆಗೂ ನೂರು ಬ್ಲಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
65 views19:18
ओपन / कमेंट
2021-05-19 19:18:13
"ಪ್ರಧಾನಿಗಳೇ.. ದಯಮಾಡಿ ಅಷ್ಟು ಕೆಳಮಟ್ಟಕ್ಕೆ ಇಳಿಯಬೇಡಿ''

ಹಾಸನ, ಮೇ 19: ದಯಮಾಡಿ ಪ್ರಧಾನಮಂತ್ರಿಗಳು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಎಚ್.ಡಿ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ ರೇವಣ್ಣ, ಜಿಲ್ಲಾಧಿಕಾರಿಗಳೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಆಕ್ರೋಶ ಹೊರಹಾಕಿದರು. ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ. ನೀವು ಯಾವ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೀರಿ? ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ. ಪ್ರಧಾನಿಗಳು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು. ಸಭೆ ಮಾಡಿ ಈ ರಾಜ್ಯದ ಬಗ್ಗೆ ಪ್ರಧಾನಿಗಳು ಏನು ತಿಳಿದುಕೊಂಡಿದ್ದಾರೆ ಎಂದು ರೇವಣ್ಣ ಖಾರವಾಗಿ ಪ್ರಶ್ನಿಸಿದರು. ಬಿಬಿಎಂಪಿ ವಿಶೇಷ ಅಧಿಕಾರಿ ಆ ಗೌರವ್ ಗುಪ್ತಾ ಅವರ ಜೊತೆ ಮಾತನಾಡಿದ್ದಾರೆ.

View full article
61 views16:18
ओपन / कमेंट
2021-05-19 19:18:09
ಕೊರೊನಾ ವಾರಿಯರ್ಸ್ ಅಂತ ಖಾಸಗಿ ಶಿಕ್ಷಕರ ಕಿವಿಗೆ ಹೂವು ಇಟ್ಟ "ಸಿಎಂ"

ಬೆಂಗಳೂರು, ಮೇ. 19: ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಅಂತ ಪರಿಗಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕೇತರರನ್ನು ಪರಿಗಣಿಸಿಲ್ಲ. ಇಡೀ ಶಿಕ್ಷಣ ವ್ಯವಸ್ಥೆ ನಿರ್ನಾಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿರುವ ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆ ಪ್ರತಿನಿಧಿಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ. ರಾಜ್ಯದಲ್ಲಿ 3.5 ಲಕ್ಷ ಮಂದಿ ಶಿಕ್ಷಕರು ಇದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಖಾಸಗಿ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರರ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಎಲ್ಲಾ ಶಾಸಕರು ಶಿಕ್ಷಣ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
59 views16:18
ओपन / कमेंट
2021-05-19 19:18:06
ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ಬಳಕೆಗೆ ಕೇಂದ್ರ ನೀಡಿತು ಒಪ್ಪಿಗೆ

ಬೆಂಗಳೂರು, ಮೇ 19: ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆ ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರಾದ ಪಿಯೂಶ್ ಗೋಯೆಲ್, ಪ್ರಹ್ಲಾದ್ ಜೋಶಿ ಹಾಗೂ ಸದಾನಂದಗೌಡ ಅವರೊಂದಿಗೆ ಹಲವು ಹಂತಗಳ ಮಾತುಕತೆ ನಡೆಸಿದ್ದೆವು. ಅಲ್ಲದೆ, ಹಲವು ಬಾರಿ ಪತ್ರಗಳನ್ನು ಬರೆಯಲಾಗಿತ್ತು.

View full article
60 views16:18
ओपन / कमेंट
2021-05-19 16:18:11
ಕೊರೋನಾ ವಿರುದ್ಧ ಹೋರಾಡಲು ಭಾರತ ಏನು ಮಾಡುತ್ತಿದೆ?

Author: Akhilesh Mishra, New Delhi ಮೊದಲ ಕೊರೋನಾ ಅಲೆ ನಿವಾರಣೆಯಾಗಿ ನಿಟ್ಟುಸಿರು ಬಿಡಲು ಸಜ್ಜಾಗಿದ್ದ ಭಾರತಕ್ಕೆ ಏಕಾಏಕಿ ಶಾಕ್ ಕೊಟ್ಟಿದ್ದು ಎರಡನೇ ಅಲೆ. ಭಾರೀ ಭೀತಿ ಸೃಷ್ಟಿಸಿದ್ದ ಈ ಎರಡನೇ ಅಲೆ ವಿರುದ್ಧ ಭಾರತ ಗೆಲುವು ಸಾಧಿಸುವ ಭರವಸೆ ಕೊಂಚ ಹುಟ್ಟಿದೆ. ಪ್ರತಿನಿತ್ಯ ದಾಖಲಾಗುತ್ತಿರುವ ಹೊಸ ಪ್ರಕರಣಗಳು(ಮೊದಲ ಚಿತ್ರ) ಹಾಗೂ ಕಳೆದ ಏಳು ದಿನಗಳಲ್ಲಿ ದಾಖಲಾದ ಸರಾಸರಿ ಪ್ರಕರಣಗಳ ಸಂಖ್ಯೆ(ಎರಡನೇ ಚಿತ್ರ) ಇಳಿಕೆಯ ಹಾದಿ ಹಿಡಿದಿರುವುದನ್ನು ಸ್ಪಷ್ಟಪಡಿಸುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಚೇತರಿಸಿಕೊಂಡವರ ಗ್ರಾಫ್‌ ಕೂಡಾ ಹಸಿರು ರೇಖೆಯಲ್ಲಿದೆ. ಈ ಮೂಲಕ ಹೊಸ ಪ್ರಕರಣಗಳ ಸಂಖ್ಯೆಗಿಂತಲೂ, ಪ್ರತಿನಿತ್ಯ ಗುಣಮುಖರಾಗುತ್ತಿರುವವರ ಸಂಖ್ಯೆ ಅಧಿಕವಿದೆ ಎಂಬುವುದು ಸದ್ಯ ಖುಷಿ ಪಡುವ ವಿಚಾರವಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
67 views13:18
ओपन / कमेंट
2021-05-19 13:18:11
ಇಂಫಾಲ್ʼನಲ್ಲಿ ಕಟ್ಟುನಿಟ್ಟಿನ ಕ್ರಮ: ಇನ್ಮುಂದೆ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ʼಧ್ವನಿವರ್ಧಕʼಗಳ ಬಳಕೆಗೆ ಅವಕಾಶ

ಇಂಫಾಲ್ : 'ಲಿಖಿತ ಅನುಮತಿಯಿಲ್ಲದ ಧ್ವನಿವರ್ಧಕಗಳನ್ನ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು' ಎಂದು ಮಣಿಪುರದ ರಾಜಧಾನಿ ಇಂಫಾಲ್ ವೆಸ್ಟ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಬುಧವಾರ ತಿಳಿಸಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್, ಮೇ 18ರಂದು ಈ ಆದೇಶ ಹೊರಡಿಸಿದ್ದು, ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಧ್ವನಿವರ್ಧಕಗಳನ್ನು ಅನಗತ್ಯವಾಗಿ ಬಳಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಇನ್ನು ಸಾಂಕ್ರಾಮಿಕ ಸಮಯದಲ್ಲಿ ಅನೇಕ ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳು ಅನುಮತಿಯಿಲ್ಲದೆ ಧ್ವನಿವರ್ಧಕಗಳನ್ನ ಬಳಸುತ್ತಿದ್ದು, ಈ ಸಮಯದಲ್ಲಿ ಜನರ ಸಮಸ್ಯೆಗಳನ್ನ ಉಂಟು ಮಾಡುತ್ತಿದೆ ಎಂದಿದೆ.

View full article
71 views10:18
ओपन / कमेंट
2021-05-19 10:18:11
'ಸಹಕಾರಿ ಸಂಘ'ಗಳಿಂದ ಸಾಲಪಡೆದವರಿಗೆ ಬಿಗ್ ರಿಲೀಫ್ : ರಾಜ್ಯ ಸರ್ಕಾರದಿಂದ ಸಾಲ ಮರುಪಾವತಿಗೆ 3 ತಿಂಗಳು ಅವಧಿ ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವಂತ ರಾಜ್ಯದ ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ರೈತರಿಗೆ ಸಹಕಾರಿ ಸಂಘಗಳಿಂದ ಪಡೆದ ಸಾಲದ ಕಂತು ಪಾವತಿ ಮುಂದೂಡಿದ್ದರೇ, ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅಲ್ಲದೇ ಸಹಕಾರ ಸಂಘಗಳ ಮೂಲಕ ಸಾಲ ಪಡೆದವರಿಗೆ 31-07-2021 ರವರೆಗೆ ವಿಸ್ತರಣೆ ಮಾಡಿದ್ದಾರೆ. ಈ ಮೂಲಕ ಸಹಕಾರಿ ಸಂಘಗಳಿಂದ ಸಾಲ ಪಡೆದವರಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಈ ಕುರಿತಂತೆ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದಂತ ಅವರು, ಕೋವಿಡ್ 19 ಸಾಂಕ್ರಾಮಿಕ 2ನೇ ಅಲೆಯ ತೀವ್ರತೆಯಿಂದಾಗಿ ಹೆಚ್ಚುತ್ತಿರುವಂತ ಸೋಂಕಿತರ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಮೇ.24ರವರೆಗೆ ವಾಣಿಜ್ಯ ಮತ್ತು ಇತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸೋದು ಅನಿವಾರ್ಯವಾಗಿತ್ತು.

View full article
68 views07:18
ओपन / कमेंट
2021-05-19 10:18:05
ಇಬ್ಬರು ಪತ್ನಿಯರನ್ನು ಹೊಂದಿದ್ದ ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ನಾವು ಹಿಂದೂಗಳು. ನಮ್ಮ ತಂದೆಗೆ ಇಬ್ಬರು ಪತ್ನಿಯರು. ಮೊದಲ ಹೆಂಡತಿಗೆ ಮೂವರು ಹೆಣ್ಣು ಮಕ್ಕಳು. ಎರಡನೇ ಹೆಂಡತಿಗೆ ನಾನು ಒಬ್ಬಳೇ ಮಗಳು. ನಮ್ಮ ತಂದೆ ತೀರಿಕೊಂಡು ಆರು ವರ್ಷಗಳಾಗಿವೆ. ನಮ್ಮ ತಂದೆಯ ಹೆಸರಿನಲ್ಲಿ ಎರಡು ಎಕರೆ ಜಮೀನು ಇದೆ. ಇದರಲ್ಲಿ ನನಗೂ ನಮ್ಮ ತಾಯಿಗೂ ಹಕ್ಕು ಇದೆಯಾ. ಇದನ್ನು ಹೇಗೆ ಹಂಚಿಕೆ ಮಾಡಿಕೊಳ್ಳಬೇಕು. ಹಂಚಿಕೆ ಮಕ್ಕಳ ಮೇಲೆ ಆಗುತ್ತದೋ ತಾಯಂದಿರ ಮೇಲೆ ಆಗುತ್ತದೋ?

View full article
57 views07:18
ओपन / कमेंट