Get Mystery Box with random crypto!

ಕೊರೋನಾ ವಿರುದ್ಧ ಹೋರಾಡಲು ಭಾರತ ಏನು ಮಾಡುತ್ತಿದೆ? Author: Akhiles | Kannada News Daily

ಕೊರೋನಾ ವಿರುದ್ಧ ಹೋರಾಡಲು ಭಾರತ ಏನು ಮಾಡುತ್ತಿದೆ?

Author: Akhilesh Mishra, New Delhi ಮೊದಲ ಕೊರೋನಾ ಅಲೆ ನಿವಾರಣೆಯಾಗಿ ನಿಟ್ಟುಸಿರು ಬಿಡಲು ಸಜ್ಜಾಗಿದ್ದ ಭಾರತಕ್ಕೆ ಏಕಾಏಕಿ ಶಾಕ್ ಕೊಟ್ಟಿದ್ದು ಎರಡನೇ ಅಲೆ. ಭಾರೀ ಭೀತಿ ಸೃಷ್ಟಿಸಿದ್ದ ಈ ಎರಡನೇ ಅಲೆ ವಿರುದ್ಧ ಭಾರತ ಗೆಲುವು ಸಾಧಿಸುವ ಭರವಸೆ ಕೊಂಚ ಹುಟ್ಟಿದೆ. ಪ್ರತಿನಿತ್ಯ ದಾಖಲಾಗುತ್ತಿರುವ ಹೊಸ ಪ್ರಕರಣಗಳು(ಮೊದಲ ಚಿತ್ರ) ಹಾಗೂ ಕಳೆದ ಏಳು ದಿನಗಳಲ್ಲಿ ದಾಖಲಾದ ಸರಾಸರಿ ಪ್ರಕರಣಗಳ ಸಂಖ್ಯೆ(ಎರಡನೇ ಚಿತ್ರ) ಇಳಿಕೆಯ ಹಾದಿ ಹಿಡಿದಿರುವುದನ್ನು ಸ್ಪಷ್ಟಪಡಿಸುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಚೇತರಿಸಿಕೊಂಡವರ ಗ್ರಾಫ್‌ ಕೂಡಾ ಹಸಿರು ರೇಖೆಯಲ್ಲಿದೆ. ಈ ಮೂಲಕ ಹೊಸ ಪ್ರಕರಣಗಳ ಸಂಖ್ಯೆಗಿಂತಲೂ, ಪ್ರತಿನಿತ್ಯ ಗುಣಮುಖರಾಗುತ್ತಿರುವವರ ಸಂಖ್ಯೆ ಅಧಿಕವಿದೆ ಎಂಬುವುದು ಸದ್ಯ ಖುಷಿ ಪಡುವ ವಿಚಾರವಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article