Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 54

2021-05-11 01:18:07
ಕೋವಿಡ್ ಲಾಕ್‌ಡೌನ್‌: ವಾಹನ ನೋಂದಣಿ ಶೇ 30ರಷ್ಟು ಇಳಿಕೆ

ನವದೆಹಲಿ: ದೇಶದಲ್ಲಿ ವಾಹನಗಳ ನೋಂದಣಿಯು 2019-20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020-21ನೇ ಹಣಕಾಸು ವರ್ಷದಲ್ಲಿ ಶೇಕಡ 29.85ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ. 2019-20ರಲ್ಲಿ 2.17 ಕೋಟಿ ವಾಹನಗಳು ನೋಂದಣಿ ಆಗಿದ್ದವು. 2020-21ರಲ್ಲಿ ವಾಹನಗಳ ನೋಂದಣಿಯು 1.52 ಕೋಟಿಗೆ ಇಳಿಕೆ ಕಂಡಿದೆ. ಇದು ಕಳೆದ ಎಂಟು ವರ್ಷಗಳ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಟ್ರ್ಯಾಕ್ಟರ್‌ ಹೊರತುಪಡಿಸಿ ಉಳಿದೆಲ್ಲ ವಾಹನಗಳ ನೋಂದಣಿಯು 2020-21ರಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿದೆ ಎಂದು ಎಫ್‌ಎಡಿಎ ತಿಳಿಸಿದೆ. ಟ್ರ್ಯಾಕ್ಟರ್‌ ನೋಂದಣಿಯಲ್ಲಿ ಶೇ 16.11ರಷ್ಟು ಬೆಳವಣಿಗೆ ಕಂಡುಬಂದಿದೆ. 2020ರ ಏಪ್ರಿಲ್‌ನಲ್ಲಿ ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿತ್ತು.

View full article
72 views22:18
ओपन / कमेंट
2021-05-11 01:18:04
ಹಾಸಿಗೆ ಬ್ಲಾಕಿಂಗ್ ದಂಧೆ: 'ಆರೋಗ್ಯಮಿತ್ರ' ಅಧಿಕಾರಿ ಸೇರಿ ಮೂವರ ಬಂಧನ

ಬೆಂಗಳೂರು: ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡುತ್ತಿದ್ದ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, 'ಆರೋಗ್ಯ ಮಿತ್ರ' ಅಧಿಕಾರಿ ಸೇರಿ ಮೂವರನ್ನು ಸೋಮವಾರ ಬಂಧಿಸಿದ್ದಾರೆ. 'ಶಶಿಧರ್, ವೆಂಕೋಬ ರಾವ್ ಹಾಗೂ ಸುಧೀರ್ ಉಮಾರಾಣಿ ಬಂಧಿತರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ' ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು. 'ಆರೋಪಿ ಶಶಿಧರ್, 'ಆರೋಗ್ಯ ಮಿತ್ರ'ದಲ್ಲಿ ಕೆಲಸ ಮಾಡುತ್ತಿದ್ದರು. ವೆಂಕೋಬ ರಾವ್, ರಾಜರಾಜೇಶ್ವರಿನಗರದ ಸ್ಪರ್ಶ ಆಸ್ಪತ್ರೆ ನೌಕರ. ಸುಧೀರ್ ಬಸವೇಶ್ವರನಗರದ ಪುಣ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮೂವರು ಹಾಸಿಗೆ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಗಳು ಸಿಕ್ಕಿವೆ' ಎಂದೂ ಅಧಿಕಾರಿ ಹೇಳಿದರು.

View full article
68 views22:18
ओपन / कमेंट
2021-05-10 22:18:13
ಕರಾಳ ಕೊರೋನಾ; ಸರಿಗಮಪ ಸಿಂಗರ್, ಪೊಲೀಸ್ ಸುಬ್ರಮಣಿ ಪತ್ನಿ ಸಾವು

ಬೆಂಗಳೂರು(ಮೇ 10) ಸರಿಗಮಪ ಶೋ ಖ್ಯಾತಿಯ ಪೊಲೀಸ್ ಕಾನ್ಸೇಟೆಬಲ್ ಸುಬ್ರಮಣಿ ಪತ್ನಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರವಲಯದ ಹೊಸಕೋಟೆ ಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಪತ್ತೆಯಾಗಿತ್ತು. ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಆಗಿತ್ತು. ವೆಂಟಿಲೇಟರ್ ಬೆಡ್ ಸಿಗದೆ ಪರದಾಡಿದ್ದ ಸಿಂಗರ್ ಸುಬ್ರಮಣಿ ಅವರಿಗೆ ಪತ್ನಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ವೆಂಟಿಲೇಟರ್ ಬೆಡ್ ಸಿಗದೆ ಕೊರೋನಾಕ್ಕೆ ಕೊನೆಯಾದ ಹಿರಿಯ ಜೀವ ರಾಜಾರಾಮ್ ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ವೆಂಟಿ ಲೇಟರ್ ಬೆಡ್ ಸಿಗಲಿಲ್ಲ. ಕೊನೆಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ ಬೆಡ್ ಸಿಗದೆ ಕನ್ನಡದ ಹಿರಿಯ ಕಲಾವಿದ ರಾಜಾ ರಾಮ್ ಸಹ ಕೊನೆ ಉಸಿರು ಎಳೆದಿದ್ದರು.

View full article
61 views19:18
ओपन / कमेंट
2021-05-10 22:18:12
ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ಇಲ್ಲಿನ ಕಡೋಲ್ಕರ ಗಲ್ಲಿಯ ಅಂಗಡಿಯಲ್ಲಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿದ್ದ ವೇಳೆ ಡಿಸಿಪಿ ವಿಕ್ರಮ್ ಆಮಟೆ ನೇತೃತ್ವದಲ್ಲಿ ಸೋಮವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿಶ್ವನಾಥ ಮುಚ್ಚಂಡಿ ಹಾಗೂ ರೋಹಿತ್ ಸುನೀಲ್ ಕುಟರೆ ಎಂಬಾತರನ್ನು ಬಂಧಿಸಲಾಗಿದೆ. ಲಾಕ್ ಡೌನ್ ಇದ್ದರೂ 'ಮುಚ್ಚಂಡಿ ಪ್ರಿಂಟರ್ಸ್‌' ಎನ್ನುವ ಅಂಗಡಿ ತೆರೆದಿದ್ದರು. ಬಂಧಿತರಿಂದ ಕಂಪ್ಯೂಟರ್‌, ಪ್ರಿಂಟರ್ ಸೇರಿದಂತೆ ಇತರೆ ಸಾಮಗ್ರಿಗಳು ಮತ್ತು ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್ ಡೌನ್ ವೇಳೆಯಲ್ಲಿ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಎಂಬುದನ್ನೇ ಬಳಸಿಕೊಂಡು, ನಕಲಿ ಗುರುತಿನ ಚೀಟಿಗಳನ್ನು ಇವರು ತಯಾರಿಸಿ ಕೊಡುತ್ತಿದ್ದರು.

View full article
61 views19:18
ओपन / कमेंट
2021-05-10 22:18:09
ಕೋವಿಡ್ ಕೇಂದ್ರವಾಗಿ ಐಟಿಐ ಆಸ್ಪತ್ರೆ ಪರಿವರ್ತನೆ: ಸದಾನಂದ ಗೌಡ

ಬೆಂಗಳೂರು, ಮೇ 10: ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ (ಕೇಂದ್ರ) ಸ್ವಾಮ್ಯದ ಐಟಿಐ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪುನಶ್ಚೇತನಗೊಳಿಸಿ ತಾತ್ಕಾಲಿಕವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು. ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಸಚಿವರು ತಾವು ಈಗಾಗಲೇ ಸಂಬಂಧಪಟ್ಟ ಸಚಿವರಿಗೆ (ರವಿಶಂಕರ್ ಪ್ರಸಾದ್) ಈ ಬಗ್ಗೆ ಪತ್ರ ಬರೆದಿದ್ದು ಅಗತ್ಯ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು. ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರುವ ಆಸ್ಪತ್ರೆಗಳು ಸಾಲುತ್ತಿಲ್ಲ. ಹೆಚ್ಚೆಚ್ಚು ತಾತ್ಕಾಲಿಕ ಕೋವಿಡ್ ಕೇಂದ್ರಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ.

View full article
61 views19:18
ओपन / कमेंट
2021-05-10 22:18:06
ರಾಜ್ಯದ ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳು ಬಂದ್: ಎಲ್ಲಿವರೆಗೆ?

ಬೆಂಗಳೂರು, (ಮೇ.10): ರಾಜ್ಯದಲ್ಲಿ ಕೊರೋನಾ ಎಡರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪರಿಣಾಮ ರಾಜ್ಯದ ಎಲ್ಲ ಸಬ್ ರಿಜಿಸ್ಟರ್​​​ (ಉಪನೋಂದಣಿ) ಕಚೇರಿಗಳಿಗೆ ರಜೆ ನೀಡಲಾಗಿದೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ಇಂದು (ಸೋಮವಾರ) ಆದೇಶ ಹೊರಡಿಸಿದ್ದು, ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು, ಮೇ 23 ರವರೆಗೆ ಕಚೇರಿಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಕೊಂಚ ಬದಲಾವಣೆ: ವಾಹನ ಬಳಕೆಗೆ ಷರತ್ತುಬದ್ಧ ಅನುಮತಿ ರಜೆ ಕೊಟ್ಟರೂ ಸಹ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ. ಕೊರೋನಾ ಸೋಂಕು ಹೆಚ್ಚಾಗಿದ್ದರೂ ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು.

View full article
60 views19:18
ओपन / कमेंट
2021-05-10 22:18:03
'ಪಾಸಿಟಿವ್ ಬದಲು ಪಾಸಿಟಿವ್ ಚಿಂತನೆ ಬೇಕಾಗಿದೆ' ದಿಗ್ಗಜರ ಮಾತು ಮಿಸ್ ಮಾಡ್ಬೇಡಿ!

ನವದೆಹಲಿ(ಮೇ 10) ಕೊರೋನಾದ ಆತಂಕದ ಸಮಯದಲ್ಲಿ ನಕಾರಾತ್ಮಕ ಅಂಶದಿಂದ ಸಕಾರಾತ್ಮಕ ಅಂಶದ ಕಡೆ ಬರಲೇಬೇಕಿದೆ. ಪಾಸಿಟಿವ್ ಆಗುವ ಬದಲು ಪಾಸಿಟಿವ್ ಚಿಂತನೆಗಳು ಬೇಕಾಗಿದೆ. ಧಾರ್ಮಿಕ ಸಂಸ್ಥೆಗಳು, ಉದ್ಯಮಿಗಳು, ಫಿಲೋಸಾಫರ್ ಗಳು, ಮಾಧ್ಯಮಗಳು ಆ ಕೆಲಸವನ್ನು ಆರಂಭಿಸಿವೆ. ಜನರಲ್ಲಿ ಧೈರ್ಯ ಮತ್ತು ವಿಶ್ವಾಸ ತುಂಬಿಸಲಾಗುತ್ತಿದೆ. ಇದೆ ವಿಚಾರವನ್ನು ಇಟ್ಟುಕೊಂಡು ಸದ್ಗುರು ಜಗ್ಗಿ ವಾಸುದೇವ್‌ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮೇ 11ರಿಂದ 15ರವರೆಗೆ ವಿವಿಧ ವಿಭಾಗದಲ್ಲಿ ಲೆಕ್ಚರ್ ನೀಡಲಿದ್ದಾರೆ. ಅದಕ್ಕೆ ವೇಳೆಯನ್ನು ನಿಗದಿ ಮಾಡಿಕೊಂಡಿದ್ದಾರೆ. ಯಾರಿಗೆ ಆಕ್ಸಿಜನ್ ಬೆಡ್ ಬೇಕಾಗುತ್ತದೆ? ಧೈರ್ಯ ಕಳೆದುಕೊಳ್ಳದಿರಿ ಸದ್ಗುರು ಜಗ್ಗಿ ವಾಸುದೇವ್ , ಜೈನ ಮುನಿ ಶ್ರೀ ಪ್ರಮನ್‌ಸಾಗರ್ ಜಿ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಅಜೀಮ್ ಪ್ರೇಮ್‌ಜಿ, ಶಂಕರಚಾರ್ಯ ವಿಜಯೇಂದ್ರ ಸರಸ್ವತಿ ಜಿ, ಸೋನಾಲ್ ಮಾನ್ಸಿಂಗ್ ಜಿ (ಪದ್ಮವಿಭೂಷಣ್), ಆಚಾರ್ಯ ವಿದ್ಯಾಸಾಗರ್ ಜಿ, ಪೂಜ್ಯಾ ಶ್ರೀ ಮಹಾ ಸಾಂತ್ ಜ್ಞಾನ ದೇ.

View full article
62 views19:18
ओपन / कमेंट
2021-05-10 16:18:09
ನೆರವು ನೀಡಿದ ಇನ್ಫಿ ಫೌಂಡೇಷನ್, ಯಾರಾಗ್ತಾರೆ ಕಾಂಗ್ರೆಸ್ ಕ್ಯಾಪ್ಟನ್? ಮೇ.10ರ ಟಾಪ್ 10 ಸುದ್ದಿ!

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಸದ್ದು, ಮುಂದಿನ ಎಐಸಿಸಿ ಅಧ್ಯಕ್ಷ ಯಾರು?... ಕೊರೋನಾ ಎರಡನೇ ಅಲೆ ಮಧ್ಯೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಭಾರಿ ಸದ್ದುಮಾಡುತ್ತಿದೆ. ಇದೇ ಜೂನ್ 23ಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಕೋವಿಡ್‌ ಸೆಂಟರ್‌ ಆದ ಗೋಶಾಲೆ: ಹಾಲು, ಗೋಮೂತ್ರದ ಚಿಕಿತ್ಸೆ, ಆಕ್ಸಿಜನ್‌ಗೂ ಇದೆ ವ್ಯವಸ್ಥೆ!...

View full article
77 views13:18
ओपन / कमेंट
2021-05-10 16:18:04
ಬೆಡ್ ಬ್ಲಾಕಿಂಗ್ ದಂಧೆ ಗೊಂದಲ, ಆರೋಪದ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟನೆ

ಬೆಂಗಳೂರು, ಮೇ 10: ಬೆಡ್ ಬ್ಲಾಕಿಂಗ್ ದಂಧೆ ಕುರಿತಂತೆ ಸಾರ್ವಜನಿಕರಲ್ಲಿ ಇರುವ ಕೆಲವು ಗೊಂದಲಗಳು, ಹಾಗೂ ಎದುರಿಸಿರುವ ಆರೋಪದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾನು ನೂರು ಗಂಟೆಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಬಯಸಿದ್ದೆ, ಆದರೆ ಅದೇ ನೂರು ಗಂಟೆಗಳಲ್ಲಿ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ, ಆಸ್ಪತ್ರೆಗಳ ಲೋಪದೋಷಗಳನ್ನು ತಿದ್ದಿ ಸಾವಿರಾರು ಜನರಿಗೆ ಹಾಸಿಗೆಗಳು ಸಿಗುವಂತೆ ಮಾಡಲಾಗಿದೆ ಎನ್ನುವ ಹೆಮ್ಮೆ ನನಗಿದೆ ಎಂದರು.

View full article
76 views13:18
ओपन / कमेंट