Get Mystery Box with random crypto!

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ | Kannada News Daily

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಬೆಳಗಾವಿ: ಲಾಕ್‌ಡೌನ್‌ ಅವಧಿಯಲ್ಲಿ ಇಲ್ಲಿನ ಕಡೋಲ್ಕರ ಗಲ್ಲಿಯ ಅಂಗಡಿಯಲ್ಲಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿದ್ದ ವೇಳೆ ಡಿಸಿಪಿ ವಿಕ್ರಮ್ ಆಮಟೆ ನೇತೃತ್ವದಲ್ಲಿ ಸೋಮವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿಶ್ವನಾಥ ಮುಚ್ಚಂಡಿ ಹಾಗೂ ರೋಹಿತ್ ಸುನೀಲ್ ಕುಟರೆ ಎಂಬಾತರನ್ನು ಬಂಧಿಸಲಾಗಿದೆ. ಲಾಕ್ ಡೌನ್ ಇದ್ದರೂ 'ಮುಚ್ಚಂಡಿ ಪ್ರಿಂಟರ್ಸ್‌' ಎನ್ನುವ ಅಂಗಡಿ ತೆರೆದಿದ್ದರು. ಬಂಧಿತರಿಂದ ಕಂಪ್ಯೂಟರ್‌, ಪ್ರಿಂಟರ್ ಸೇರಿದಂತೆ ಇತರೆ ಸಾಮಗ್ರಿಗಳು ಮತ್ತು ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್ ಡೌನ್ ವೇಳೆಯಲ್ಲಿ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಎಂಬುದನ್ನೇ ಬಳಸಿಕೊಂಡು, ನಕಲಿ ಗುರುತಿನ ಚೀಟಿಗಳನ್ನು ಇವರು ತಯಾರಿಸಿ ಕೊಡುತ್ತಿದ್ದರು.

View full article