Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 48

2021-05-16 07:18:12
ಗಂಗಾವತಿ: ಐದು ದಿನಗಳ ಲಾಕ್ ಡೌನ್ ಘೋಷಣೆ ಹಿನ್ನೆಲೆ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಗಂಗಾವತಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಐದು ದಿನಗಳ ಕಠಿಣ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿ ರವಿವಾರ ಅಗತ್ಯವಸ್ತುಗಳ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ತರಕಾರಿ, ಮಾಂಸ ಹಾಗೂ ಬಟ್ಟೆ ಕಿರಾಣಿ ಸಾಮಾನುಗಳನ್ನು ಖರೀದಿಸಲು ನಗರ ಹಾಗೂ ಗ್ರಾಮೀಣ ಭಾಗದಿಂದ ಜನರು ಬೈಕ್ ಟ್ರ್ಯಾಕ್ಟರ್ ಹಾಗೂ ಆಟೋಗಳಲ್ಲಿ ಆಗಮಿಸಿದ್ದರು. ಪೊಲೀಸರು ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಮಾಸ್ಕ್ ಧರಿಸುವಂತೆ ಮನವಿ ಮಾಡಿದರೂ ಜನರು ಕೇಳಿಸಿಕೊಳ್ಳುವ ವ್ಯವದಾನದಲ್ಲಿರಲಿಲ್ಲ ಎಂದು ವರದಿಯಾಗಿದೆ. ತರಕಾರಿ, ಮಾಂಸದಂಗಡಿ, ಕಿರಾಣಿ ಮತ್ತು ಬಟ್ಟೆ ಅಂಗಡಿಗಳ ಮುಂದೆ ಜನಸ್ತೋಮವೇ ಕಂಡುಬಂದಿದೆ. ಡೇಲಿ ಮಾರ್ಕೆಟ್, ಮಹಾವೀರ ವೃತ್ತ ಹಾಗೂ ಓಎಸ್ ಬಿ ರೋಡ್ ನಲ್ಲಿರುವ ಬಟ್ಟೆ ಅಂಗಡಿಗಳಲ್ಲೂ ಜನರು ಮುಗಿಬಿದ್ದಿದ್ದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
21 views04:18
ओपन / कमेंट
2021-05-16 07:18:10
ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಮೇ 16ರ ದರ ಹೀಗಿದೆ

ದಿನೇ ದಿನೇ ತೈಲ ದರ ಗಗನಕ್ಕೇರುತ್ತಿದ್ದು, ಶನಿವಾರ ಒಂದು ದಿನ ವಿರಾಮದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭಾನುವಾರ ದರ ಏರಿಕೆ ಮಾಡಿವೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 24 ಪೈಸೆ ಹೆಚ್ಚಾಗಿ 92.58 ರೂಪಾಯಿಗೆ ತಲುಪಿದೆ. ಡೀಸೆಲ್ ದರವೂ ಲೀಟರ್‌ಗೆ 27 ಪೈಸೆ ಏರಿಕೆಗೊಂಡು 83.22 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

View full article
22 views04:18
ओपन / कमेंट
2021-05-16 07:18:05
1 ತಿಂಗಳ ಚಂದಾದಾರಿಕೆಯನ್ನು ರದ್ದುಗೊಳಿಸಿದ ಅಮೆಜಾನ್ ಪ್ರೈಮ್; ಫ್ರೀ ಟ್ರಯಲ್ ಸೇವೆ ಕೂಡ ಅಲಭ್ಯ

ನವದೆಹಲಿ: ಓಟಿಟಿ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದಾದ ಅಮೆಜಾನ್ ಪ್ರೈಮ್ ತನ್ನ, ಒಂದು ತಿಂಗಳ ಕಾಲಾವಧಿಯ ಸಬ್ ಸ್ಕ್ರಿಫ್ಷನ್ ಪ್ಲ್ಯಾನ್ (ಚಂದಾದಾರಿಕೆ) ನನ್ನು ರದ್ದುಗೊಳಿಸಿದೆ. ಮಾತ್ರವಲ್ಲದೆ ಅಮೇಜಾನ್ ಪ್ರೈಮ್ ಟ್ರಯಲ್ ಪ್ಯಾಕ್ ಯೋಜನೆಯನ್ನೂ ಸ್ಥಗಿತಗೊಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಮೆಜಾನ್ ಪ್ರೈಮ್ ತಿಳಿಸಿದೆ. ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ, ಪುನರಾವರ್ತಿತ ಆನ್ ಲೈನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಧೃಡೀಕರಣದ ಅಂಶಗಳನ್ನು ಸೇರಿಸುವಂತೆ ಸೂಚನೆ ನೀಡಿತ್ತು. ಜೊತೆಗೆ ಸೆಪ್ಟೆಂಬರ್ 30ರ ಗಡುವನ್ನು ಕೂಡ ವಿಧಿಸಿತ್ತು. ಅಮೆಜಾನ್ ತನ್ನ FAQ(Frequently asked questions) ಪೇಜ್ ಅನ್ನು ನವೀಕರಣಗೊಳಿಸಿದ್ದು, ಕೆಲವೊಂದು ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

View full article
20 views04:18
ओपन / कमेंट
2021-05-15 22:18:08
ಫಿಕ್ಸೆಡ್ ಡೆಪಾಸಿಟ್‌: 7.9% ಬಡ್ಡಿ ನೀಡುವ ಬ್ಯಾಂಕುಗಳು

ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎಂದು ಜನರು ಹುಡುಕುವುದು ಸಾಮಾನ್ಯವಾಗಿದೆ. ಏಕೆಂದರೆ ಉಳಿತಾಯ ಖಾತೆಗೆ ಹೋಲಿಸಿದರೆ ನಿಶ್ಚಿತ ಠೇವಣಿ (ಎಫ್‌ಡಿ) ಉತ್ತಮ ಹೂಡಿಕೆ ಆಯ್ಕೆಗಳನ್ನು ಹೊಂದಿದೆ. ನಿಶ್ಚಿತ ಠೇವಣಿಯಲ್ಲಿ ಗ್ರಾಹಕರು ನಿಗದಿತ ಅವಧಿಗೆ ಠೇವಣಿ ಇರಿಸಿದ ಹಣದ ಮೇಲೆ ಬಡ್ಡಿ ಪಡೆಯುತ್ತಾರೆ. ನೀವು ಆಯ್ಕೆ ಮಾಡಿದ ಅವಧಿಗೆ ಅನುಗುಣವಾಗಿ ಈ ಬಡ್ಡಿದರ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಉಳಿದ ಬಡ್ಡಿದರಗಳನ್ನು ಬ್ಯಾಂಕ್ ಮತ್ತು ಠೇವಣಿದಾರರ ಆಧಾರದ ಮೇಲೆ ಸಹ ನಿರ್ಧರಿಸಬಹುದು. ಸಣ್ಣ ಬ್ಯಾಂಕುಗಳಲ್ಲಿ ಉತ್ತಮ ಬಡ್ಡಿದರ ಠೇವಣಿದಾರರು ಸಾಮಾನ್ಯವಾಗಿ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಎರಡು ವಿಧಗಳನ್ನು ಹೊಂದಿರುತ್ತಾರೆ.

View full article
47 views19:18
ओपन / कमेंट
2021-05-15 19:18:08
ಕೊರೋನಾ ಸ್ಥಿತಿಗತಿ: ಕರ್ನಾಟಕದ 17 ಜಿಲ್ಲಾಧಿಕಾರಿಗಳ ಜೊತೆ ಪ್ರದಾನಿ ಮೋದಿ ಸಂವಾದ!

ಬೆಂಗಳೂರು(ಮೇ.15): ಕೊರೋನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ದೇಶದ ಹಲವು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಇದೀಗ ಕೊರೋನಾ ಪಾಸಿಟಿವೀಟಿ ರೇಟ್ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಕೇಂದ್ರದಿಂದ ಕಳುಹಿಸಿದ ವೆಂಟಿಲೇಟರ್‌ ಬಳಕೆ, ಆಡಿಟ್‌ಗೆ ಆದೇಶ: ರಾಜ್ಯಗಳಿಗೆ ಢವಢವ!. ಕರ್ನಾಟಕದಲಲ್ಲಿ ಕೊರೋನಾ ಹೆಚ್ಚಿರುವ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ ನಡೆಸಿದ್ದಾರೆ. ಮಂಗಳವಾರ(ಮೇ.18) ಬೆಳಗ್ಗೆ 11 ಗಂಟೆ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ವೇಳೆ ಪ್ರತಿ ಜಿಲ್ಲೆಗಳ ಕೋವಿಡ್ ಸ್ಥಿತಿ-ಗತಿ ಕುರಿತ ಮಾಹಿತಿ ಪಡೆಯಲಿದ್ದಾರೆ.

View full article
51 views16:18
ओपन / कमेंट
2021-05-15 16:18:06
ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ

ಕೋವಿಡ್‌ನಿಂದಾಗಿ ದೇಶಾದ್ಯಂತ ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ. ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಎಲ್ಲರನ್ನ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮೊದಲೇ ಧ್ವನಿಯೆತ್ತಿದ್ದ ಬಾಲಿವುಡ್ ನಟ ಸೋನು ಸೂದ್, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಂಥ ಮಕ್ಕಳ ಕೈಹಿಡಿಯುವಂತೆ ಮನವಿ ಮಾಡಿಕೊಂಡಿದ್ರು. ಕೋವಿಡ್ ಸೋಂಕಿನಿಂದಾಗಿ ಹಲವು ಕುಟುಂಬಗಳು ಬಾಧಿತವಾಗಿವೆ. ಮಕ್ಕಳು ತಂದೆ-ತಾಯಿ ಅಥವಾ ಪೋಷಕರನ್ನ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ತಮ್ಮನ್ನ ಆರೈಕೆ ಮಾಡುವವರೇ ಮೃತಪಟ್ಟಿದ್ದರಿಂದ ಆ ಮಕ್ಕಳು ಒಬ್ಬಂಟಿಗಳಾಗಿದ್ದಾರೆ. ಸಂಕಷ್ಟದಲ್ಲಿರುವ ಅಂಥ ಮಕ್ಕಳ ಬಗ್ಗೆ ಸರ್ಕಾರಗಳೇ ಕಾಳಜಿ ವಹಿಸಬೇಕು ಎಂದು ಕಳೆದ ವಾರವಷ್ಟೇ ಸೋನು ಸೂದ್ ಅಭಿಪ್ರಾಯ ವ್ಯಕ್ತಪಡಿಸಿದ್ರು. ವಾಕ್ ಇನ್ ಆಕ್ಸಿಜನ್ ಕೆಫೆ ಸ್ಥಾಪಿಸಿದ ದಿಲ್ಲಿಯ ಖಾಸಗಿ ಶಾಲೆ ಇದರ ಬೆನ್ನಲ್ಲೇ ಇದೀಗ ಒಂದೊಂದೇ ರಾಜ್ಯಗಳು ನೊಂದ ಮಕ್ಕಳ ಕಣ್ಣೀರೊರೆಸಲು ಮುಂದೆ ಬರ್ತಿವೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
67 views13:18
ओपन / कमेंट
2021-05-15 16:18:05
ಸಾಮಾಜಿಕ ಜಾಲತಾಣದಿಂದ ಸುರೇಶ್ ಕುಮಾರ್ ದೂರ ದೂರ !

ಬೆಂಗಳೂರು, ಮೇ. 14: ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸರಣಿ ಸಾವಿನ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಆಕ್ಸಿಜನ್ ಇಲ್ಲದೇ ಉಸಿರು ನಿಲ್ಲಿಸಿದ ಬಳಿಕ ಜನರು "ಎಫ್ ಬಿ ಮಿನಿಸ್ಟರ್" ಎಂದು ಟೀಕಿಸಿದ್ದರು. ಜನರ ಟೀಕೆಯೋ, ಚಾಮರಾಜನಗರ ಸರ್ಕಾರಿ ಆಸ್ಪತ್ರೆಯ ಅವಘಡದ ಪರಿಣಾಮವೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು "ಸಾಮಾಜಿಕ ಮಾಧ್ಯಮಗಳಿಂದ" ಸಂಪೂರ್ಣ ಹೊರ ಬಂದಿದ್ದಾರೆ. ಮೊದಲಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇತ್ತೀಚೆಗಂತೂ ದಿನಕ್ಕೊಂದು ಪೋಸ್ಟ್ ಹಾಕುವುದು. ಶಾಲೆಗೆ ಭೇಟಿ ನೀಡಿದರೂ ಪೋಸ್ಟ್, ಪೆಟ್ರೋಲ್ ಬಂಕ್ ನಲ್ಲಿ ಯಾರನ್ನಾದರೂ ಭೇಟಿ ಮಾಡಿದರೂ ಅದಕ್ಕೊಂದು ಒಕ್ಕಣೆ ಬರೆದು ಪೋಸ್ಟ್ ಮಾಡುತ್ತಿದ್ದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
57 views13:18
ओपन / कमेंट
2021-05-15 13:18:11
ಶಿಕ್ಷಣ ಇಲಾಖೆ ದ್ವಂದ್ವ ನೀತಿ: ಎರಡು ದಿನದಲ್ಲಿ ಮೌಲ್ಯಾಂಕನ ಅಪ್‌ಡೇಟ್‌ಗೆ ಡೆಡ್ ಲೈನ್

ಬೆಂಗಳೂರು, ಮೇ. 15: ಕೊರೊನಾ 2 ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಇದೀಗ ಏಕಾಏಕಿ ಎರಡು ದಿನದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡುವಂತೆ ಸೂಚನೆ ನೀಡಿ ಗೊಂದಲ ವಾತಾವರಣ ನಿರ್ಮಾಣ ಮಾಡಿದೆ. ಶಾಲೆ ಬಂದ್ ಇರುವ ಕಾರಣ ಶಿಕ್ಷಕರು ಶಾಲೆಗಳಿಗೆ ಭೇಟಿ ನೀಡಲಾಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ವಿದ್ಯಾರ್ಥಿಗಳ ಮೌಲ್ಯಾಂಕನ ಅಪ್ಡೇಟ್ ಮಾಡಲು ಎರಡು ದಿನ ಕಾಲಾವಕಾಶ ಕೊಟ್ಟು ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಪರೀಕ್ಷೆ ಇಲ್ಲದೇ 1 ರಿಂದ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಸರ್ಕಾರ ಆದೇಶಿಸಿದೆ. ಆನ್‌ಲೈನ್ ಮತ್ತು ವಿದ್ಯಾಗಮ ಅಡಿ ಕಲಿತ ಮಕ್ಕಳಿಗೆ ಈಗಾಗಲೇ ನಡೆಸಿರುವ ಪರೀಕ್ಷೆಗಳನ್ನು ಆಧರಿಸಿ ಅಂಕ ನೀಡಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸೂಚಿಸಿತ್ತು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
65 views10:18
ओपन / कमेंट
2021-05-15 13:18:05
ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ

ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್​ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ ಬೆಂಬಲವನ್ನ ವ್ಯಕ್ತಪಡಿಸಿದೆ.ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಯುಎನ್‌ಎಸ್​ಡಬ್ಲೂದ ಮುಖ್ಯ ಲೈಬ್ರರಿ ಟವರ್​​ನಲ್ಲಿ ತ್ರಿವರ್ಣ ಧ್ವಜದ ಬಣ್ಣದ ದೀಪಗಳನ್ನ ಬೆಳಗುವ ಮೂಲಕ ಭಾರತೀಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಮತ್ತು ವಿಶ್ವದಲ್ಲಿ ಕೋವಿಡ್​​ನಿಂದ ಬಳಲುತ್ತಿರುವವರಿಗೆ ಬೆಂಬಲ ಸೂಚಿಸಿದೆ. ಈ ಫೋಟೋವನ್ನ ಟ್ವಿಟರ್​ನಲ್ಲಿ ಆಸ್ಟ್ರೇಲಿಯಾ ಯುನಿವರ್ಸಿಟಿ ಶೇರ್​ ಮಾಡಿದೆ. ಈ ಫೋಟೋದಲ್ಲಿ ಕಟ್ಟಡವನ್ನ ತ್ರಿವರ್ಣ ದೀಪದಲ್ಲಿ ಬೆಳಗುತ್ತಿರೋದ್ರ ಜೊತೆಗೆ ಕೊರೊನಾದಿಂದ ಬಳಲುತ್ತಿರುವ ಭಾರತ ಸೇರಿದಂತೆ ಎಲ್ಲರೂ ಸದೃಢವಾಗಿರಿ ಎಂದು ಬರೆದಿರೋದನ್ನ ಕಾಣಬಹುದಾಗಿದೆ.

View full article
64 views10:18
ओपन / कमेंट
2021-05-15 10:18:13
Good News : 'PF ಖಾತೆದಾರ' ಉದ್ಯೋಗಿ 'ಕೊರೋನಾ ಸೋಂಕಿ'ನಿಂದ ಮೃತಪಟ್ಟರೇ, ಸಿಗಲಿದೆ 7 ಲಕ್ಷದವರೆಗೆ 'ವಿಮೆ ಪರಿಹಾರ'.!

ಡಿಜಿಟಲ್ ಡೆಸ್ಕ್ : ಕೋವಿಡ್-19 ರಿಂದ ದುರದೃಷ್ಟವಶಾತ್ ಪಿಎಫ್ ಖಾತೆದಾರರು ಸಾವನ್ನಪ್ಪಿದರೆ ಸಕ್ರಿಯ ವೇತನ ಸಿಬ್ಬಂದಿಯ ಕುಟುಂಬ ಸದಸ್ಯರಿಗೆ ಸಹಾಯ ಮಾಡಲು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) 7 ಲಕ್ಷ ರೂ.ಗಳವರೆಗೆ ವಿಮೆಯನ್ನು ಒದಗಿಸುತ್ತಿದೆ, ಇದು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಥವಾ ಪಿಎಫ್ ನ ನೋಡಲ್ ಪ್ರಾಧಿಕಾರವಾಗಿದೆ. ಈ ಮರಣ ವಿಮೆ ಪ್ರಯೋಜನವನ್ನು ಉದ್ಯೋಗಿಗಳ ಠೇವಣಿ-ಲಿಂಕ್ಡ್ ಇನ್ಶೂರೆನ್ಸ್ (ಇ.ಡಿ.ಎಲ್.ಐ) ಯೋಜನೆಯ ಭಾಗವಾಗಿ ಒದಗಿಸಲಾಗುತ್ತದೆ. ಯೋಜನೆಯಡಿ ಮರಣ ಹೊಂದಿದವರಿಗೆ ಗರಿಷ್ಠ 7 ಲಕ್ಷ ರೂ.ಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ಕನಿಷ್ಠ ಮಿತಿಯನ್ನು 2.5 ಲಕ್ಷ ರೂ.ಗಳಲ್ಲಿ ಇಡಲಾಗಿದೆ. ಈ ಹಿಂದೆ 6 ಲಕ್ಷ ರೂ.ಗಳು ಗರಿಷ್ಠ ಮೊತ್ತವಾಗಿದ್ದು, ವ್ಯಕ್ತಿ ಸಾವನ್ನಪ್ಪಿದರೆ ಸಕ್ರಿಯ ಸಂಬಳದ ಸಿಬ್ಬಂದಿಯ ಕುಟುಂಬ ಸದಸ್ಯರಿಗೆ ನೀಡಲಾಗುತ್ತಿತ್ತು.

View full article
31 views07:18
ओपन / कमेंट