Get Mystery Box with random crypto!

ಸಾಮಾಜಿಕ ಜಾಲತಾಣದಿಂದ ಸುರೇಶ್ ಕುಮಾರ್ ದೂರ ದೂರ ! ಬೆಂಗಳೂರು, ಮೇ. 14: | Kannada News Daily

ಸಾಮಾಜಿಕ ಜಾಲತಾಣದಿಂದ ಸುರೇಶ್ ಕುಮಾರ್ ದೂರ ದೂರ !

ಬೆಂಗಳೂರು, ಮೇ. 14: ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸರಣಿ ಸಾವಿನ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಆಕ್ಸಿಜನ್ ಇಲ್ಲದೇ ಉಸಿರು ನಿಲ್ಲಿಸಿದ ಬಳಿಕ ಜನರು "ಎಫ್ ಬಿ ಮಿನಿಸ್ಟರ್" ಎಂದು ಟೀಕಿಸಿದ್ದರು. ಜನರ ಟೀಕೆಯೋ, ಚಾಮರಾಜನಗರ ಸರ್ಕಾರಿ ಆಸ್ಪತ್ರೆಯ ಅವಘಡದ ಪರಿಣಾಮವೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು "ಸಾಮಾಜಿಕ ಮಾಧ್ಯಮಗಳಿಂದ" ಸಂಪೂರ್ಣ ಹೊರ ಬಂದಿದ್ದಾರೆ. ಮೊದಲಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇತ್ತೀಚೆಗಂತೂ ದಿನಕ್ಕೊಂದು ಪೋಸ್ಟ್ ಹಾಕುವುದು. ಶಾಲೆಗೆ ಭೇಟಿ ನೀಡಿದರೂ ಪೋಸ್ಟ್, ಪೆಟ್ರೋಲ್ ಬಂಕ್ ನಲ್ಲಿ ಯಾರನ್ನಾದರೂ ಭೇಟಿ ಮಾಡಿದರೂ ಅದಕ್ಕೊಂದು ಒಕ್ಕಣೆ ಬರೆದು ಪೋಸ್ಟ್ ಮಾಡುತ್ತಿದ್ದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article