Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 53

2021-05-12 07:18:04
ಕೊರೋನಾ ತಡೆಗೆ ಸರ್ಕಾರ ವಿಫಲ: ಕಾಂಗ್ರೆಸ್‌ MLC ಶ್ರೀನಿವಾಸ ಮಾನೆ

ಹಾನಗಲ್ಲ(ಮೇ.12): ಪ್ರಚಾರದಲ್ಲಿ ಹಾಗೂ ಮಾಹಿತಿ ಸಂಗ್ರಹಣೆಯಲ್ಲಿ ನಂಬರ್‌ ಒನ್‌ ಇರುವ ಕೇಂದ್ರ ಸರ್ಕಾರ, ಕೊರೋನಾ ತಡೆಗಟ್ಟುವ ವಿಷಯದಲ್ಲಿ ವಿಫಲವಾಗಿರುವುದು ಏಕೆ? ವೈದ್ಯಕೀಯ ಲಾಬಿ, ಕೃತಕ ಅಭಾವ ಸೃಷ್ಟಿಸಿ ಕೊರೋನಾ ಬಾಧಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದಂತೆ ಮಾಡುತ್ತಿರುವ ಶಂಕೆ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೋನಾ ಎರಡನೇ ಅಲೆ ಗಂಭೀರ ಅನಾರೋಗ್ಯ ಪರಿಣಾಮ ಬೀರುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊರತೆ ಇದೆ ಎಂದೆನಿಸುತ್ತಿದೆ.

View full article
30 views04:18
ओपन / कमेंट
2021-05-11 22:18:06
ಸಂಸದ ಪ್ರತಾಪ್ ಸಿಂಹಗೆ ಕೋವಿಡ್ ಸೋಂಕು ದೃಢ

ಮೈಸೂರು; ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಟ್ವಿಟ್ಟರ್ ನಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ರೋಗಿಯೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ನಂತರ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಕರೊನಾ ನೆಗಟಿವ್ ಬಂದಿತ್ತು. ಆದರೆ, ನಂತರ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದಾಗ ಕರೊನಾ ಪಾಸಿಟಿವ್ ಬಂದಿದೆ.

View full article
50 views19:18
ओपन / कमेंट
2021-05-11 19:18:11
ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..

ಮುಂದುವರಿದ ಭಾಗ.. ಸಸ್ಯಗಳು ನೆಲದ ಮೇಲೆ ಹುಟ್ಟಿ 47.5 ಕೋಟಿ ವರ್ಷವಾಗಿದ್ದರೂ, ಅವುಗಳಿಗೆ ಹೂವು ಮತ್ತು ಕಾಯಿ ಬಂದಿದ್ದು ಕೇವಲ 15 ಕೋಟಿ ವರ್ಷಗಳ ಹಿಂದೆ. ಮೊದಲ 33 ಕೋಟಿ ವರ್ಷಗಳ ಕಾಲ ಅವುಗಳಿಗೆ ಹೂವೇ ಇರಲಿಲ್ಲ. ಈಗ ನಮಗೆ ಅದನ್ನು ಊಹೆ ಮಾಡಿಕೊಳ್ಳುವುದೂ ಕಷ್ಟಕರ. ಹೀಗೆ ಹಲವಾರು ಮಾರ್ಪಾಡುಗಳನ್ನು ಮಾಡಿಕೊಂಡು ಈ ಸಸ್ಯಗಳು ನೆಲದ ಮೇಲೆ ಬೆಳೆದಿವೆ.

View full article
55 views16:18
ओपन / कमेंट
2021-05-11 19:18:10
ಚೀನಾದಲ್ಲಿ ಕುಸಿಯುತ್ತಿದೆ ಜನಸಂಖ್ಯೆ..! ಭವಿಷ್ಯದಲ್ಲಿ ಭಾರತಕ್ಕೆ ನಂ. 1 ಪಟ್ಟ..?

ಕೊರೊನಾ ನಂತರ ಎಲ್ಲವೂ ಬದಲಾಗುತ್ತಿದೆ, ಅದರಲ್ಲೂ ಕೊರೊನಾ ಕಂಡುಬಂದ ಚೀನಾದಲ್ಲಿ ಜನಸಂಖ್ಯೆಯ ಪ್ರಮಾಣ ಭಾರಿ ಕುಸಿತ ಕಂಡಿದೆ. ಚೀನಾದಲ್ಲಿ ಕಳೆದ ವರ್ಷ ಅಂದರೆ 2020ರಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ 0.53ರಷ್ಟು ಮಾತ್ರ ದಾಖಲಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕುಸಿತ ಕಂಡಿದೆ. ಈ ರೀತಿ ಚೀನಾದಲ್ಲಿ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದೇ ಮೊದಲು ಎನ್ನಲಾಗಿದೆ. ಮುಂದಿನ ವರ್ಷವೂ ಚೀನಾದಲ್ಲಿ ಜನಸಂಖ್ಯೆ ಮತ್ತಷ್ಟು ಇಳಿಮುಖವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅಂದಹಾಗೆ 2019ರಲ್ಲಿ ಚೀನಾ ಜನಸಂಖ್ಯೆ 140 ಕೋಟಿ ಇತ್ತು, 2020ರಲ್ಲಿ ಜನಸಂಖ್ಯೆಯ ಪ್ರಮಾಣ 141.17 ಕೋಟಿಗೆ ಹೆಚ್ಚಳವಾಗಿದೆ. ಅಭಿವೃದ್ಧಿಯಲ್ಲಿ ಚೀನಾ ಮೀರಿಸುವವರೇ ಇಲ್ಲ..! 'ಜಿಡಿಪಿ' ವಿಚಾರದಲ್ಲಿ ಹೊಸ ದಾಖಲೆ..! ಆದರೂ ಈ ಅಂಕಿ-ಅಂಶವು ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

View full article
50 views16:18
ओपन / कमेंट
2021-05-11 19:18:06
She for Society: ಕೊರೋನಾ ವಾರಿಯರ್ಸ್ ಆದ ಬೆಂಗಳೂರಿನ ಮಹಿಳಾ ಬೈಕರ್ಸ್; ಸೋಂಕಿತರಿಗೆ ಉಚಿತ ಆಂಬುಲೆನ್ಸ್ ಸೇವೆ...

ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಅವುಗಳಲ್ಲಿ ಬೆಂಗಳೂರಿನ ಮಹಿಳಾ ಬೈಕರ್‌ಗಳ ತಂಡ ಕೂಡ ಒಂದು. ಹೌದು, ಕಳೆದ ಒಂದು ವಾರದಿಂದ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ಈ ಲೇಡಿ ಬೈಕರ್ಸ್ ಗ್ಯಾಂಗ್ ಎಲ್ಲರಿಗೂ ಮಾದರಿಯಾಗಿದೆ. 'ಶೀ ಫಾರ್ ಸೊಸೈಟಿ' ಸೈನಿಕರ ಹಾಗೂ ಸೈನಿಕರ ಕುಟುಂಬಗಳಿಗೆ ನೆರವಾಗಲು ಕೆಲ ವರ್ಷಗಳ ಹಿಂದೆ ಪ್ರಾರಂಭವಾದ ತಂಡ. ಹರ್ಷಿಣಿ ವೆಂಕಟೇಶ್ ಸಾರಥ್ಯದಲ್ಲಿ ಹತ್ತು ಜನರ ಮಹಿಳಾ ಬೈಕರ್‌ಗಳು ಸೇರಿ ಸೈನಿಕರು, ಅವರ ಕುಟುಂಬದವರಿಗೆ ನೆರವಾಗಲು, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಲು ಈ ತಂಡವನ್ನು ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ಆಂಬುಲೆನ್ಸ್​ಗಳ ಕೊರತೆ ಇರುವುದನ್ನು ಮನಗಂಡು 'ಶೀ ಫಾರ್ ಸೊಸೈಟಿ' ಟೀಮ್ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದೆ.

View full article
46 views16:18
ओपन / कमेंट
2021-05-11 16:18:12
ವಾಲಿ ಬಿತ್ತು 'ಓಲಿ'ಯ ಸರ್ಕಾರ! ಅಧಿಕಾರ ಹಿಡಿಯಲು ಕಾಂಗ್ರೆಸ್ ಸರ್ಕಸ್..?

ಭಾರತದ ನೆರೆ ದೇಶದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದ್ದು, ಹೊಸ ಸರ್ಕಾರ ರಚನೆಗೆ ಡೆಡ್‌ಲೈನ್ ನೀಡಲಾಗಿದೆ. ಅಂದಹಾಗೆ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡ ಹಿನ್ನೆಲೆ ಹೊಸ ಸರ್ಕಾರ ರಚನೆಗೆ ನೇಪಾಳ ಅಧ್ಯಕ್ಷೆ 3 ದಿನಗಳ ಗಡುವು ನೀಡಿದ್ದಾರೆ. ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್‌ನ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದ ಕೆ.ಪಿ. ಶರ್ಮಾ ಓಲಿಗೆ ಕನಿಷ್ಠ 136 ಮತಗಳು ಬೇಕಾಗಿದ್ದವು. ಆದರೆ ಓಲಿಗೆ ಸಿಕ್ಕಿದ್ದು 93 ಸಂಸತ್ ಸದಸ್ಯರ ಮತಗಳು. ಈ ಮೂಲಕ ಓಲಿ ಸೋಲು ಕಂಡು, ಓಲಿ ಸರ್ಕಾರ ವಾಲಿಸಿದ್ದಾರೆ. ಓಲಿ ವಿರುದ್ಧ 124 ಮತಗಳು ಬಿದ್ದಿದ್ದು, 15 ಮಂದಿ ನೇಪಾಳ ಸಂಸತ್ ಸದಸ್ಯರು ತಟಸ್ಥರಾಗಿ ಉಳಿದರು.

View full article
36 views13:18
ओपन / कमेंट
2021-05-11 13:18:12
ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ: ಇದೇನಾ ಕಾರಣ?

ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ, ಕಳೆದ ಒಂದು ವಾರದಿಂದ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಜೊತೆಗೆ, ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿರುವ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಾಣುತ್ತಿದೆ. ಇಂದು ಪರೀಕ್ಷೆ ಮಾಡಿದ ಕೋವಿಡ್ ವರದಿಯನ್ನು ಆರೋಗ್ಯ ಇಲಾಖೆ ಅಂದೇ ಕೌಂಟಿಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಏಪ್ರಿಲ್ 27ರಿಂದ ಕರ್ನಾಟಕ ಸರಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿತ್ತು. ಇದಾದ ನಂತರ ಮೇ ಹತ್ತರಿಂದ ಲಾಕ್ ಡೌನ್ ಹೇರಿತ್ತು. ಕರ್ನಾಟಕದ ಕೋವಿಡ್ ಪ್ರಕರಣ ಇಳಿಕೆ, ಪರೀಕ್ಷೆ ಸಂಖ್ಯೆಯೂ ಕಡಿಮೆ ಹಾಗಾಗಿ, ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಸ್ವಾಭಾವಿಕವಾಗಿ ಜನರು ಕೋವಿಡ್ ಟೆಸ್ಟ್ ಮಾಡಿಸಲು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ ಎನ್ನುವುದು ಒಂದು ಕಡೆಯಾದರೆ, ಲಸಿಕೆ ತೆಗೆದುಕೊಂಡು ಟೆಸ್ಟಿಂಗ್ ಹೋದವರ ಸಂಖ್ಯೆಯೂ ಇರಬಹುದು.

View full article
52 views10:18
ओपन / कमेंट
2021-05-11 10:18:11
ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ : ಅಡ್ಡದಾರಿ ಹಿಡಿದ BBMP!

ಬೆಂಗಳೂರು (ಮೇ.11): ಬೆಂಗಳೂರು ಕೊರೋನಾ ಸೋಂಕಿನ ಹಾಟ್‌ ಸ್ಪಾಟ್ ಆಗಿದೆ. ದಿನದಿನವೂ ಸೋಂಕು ಸಾವಿನ ಪ್ರಮಾಣ ಏರುತ್ತಲೇ ಇದೆ. ಇದೀಗ ಬೆಂಗಳೂರಿನಲ್ಲಿ ಬಿಬಿಎಂಪಿ ಅಡ್ಡದಾರಿ ಮೂಲಕ ಸೋಂಕು ಇಳಿಕೆಗೆ ಹೊರಟಿರುವ ಬಗ್ಗೆ ಅನುಮಾನಗಳು ಕಾಡಿದೆ. ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ ಕಂಡುಕೊಂಡ ಪಾಲಿಕೆ ಕೊರೋನಾ ಟೆಸ್ಟ್ ಸಂಖ್ಯೆ ಅರ್ಧಕ್ಕೆ ಇಳಿಸಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗುತ್ತಿದ್ದಂತೆ ಪರೀಕ್ಷೆ ಪ್ರಮಾಣವನ್ನೂ ಕೂಡ ಇಳಿಸಿದೆ. ನಿನ್ನೆ ಮೇ 10 ರಂದು ಬೆಂಗಳೂರಿನಲ್ಲಿ ಕೇವಲ 32,862 ಮಂದಿ ಕೋವಿಡ್ ಟೆಸ್ಟ್ ಮಾಡಿಸಿದ್ದು, ಬರೋಬ್ಬರಿ ಶೇ. 50% ಪಾಸಿಟಿವಿಟಿ ರೇಟ್ ದಾಖಲಾಗಿದೆ. 32,862 ಮಂದಿ ಪರೀಕ್ಷೆಯಲ್ಲಿ 16,747 ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿದೆ. ಲಸಿಕೆಗಾಗಿ ಸಮೀಪದ ಹಳ್ಳಿಗಳನ್ನು ಆಶ್ರಯಿಸುತ್ತಿರುವ ಬೆಂಗಳೂರಿಗರು ಈ ಮೊದಲು 65 ಸಾವಿರದ ವರೆಗೆ ಪ್ರತಿದಿನ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತಿತ್ತು.

View full article
63 views07:18
ओपन / कमेंट
2021-05-11 10:18:10
'ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ': ವಿಶ್ವಸಂಸ್ಥೆಗೆ ಮಾಹಿತಿ ನೀಡಿದ ಆ ದೇಶ ಯಾವುದು?

ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ. ಅರೆ ಇದೇನಿದು.. ಇಡೀ ಜಗತ್ತೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿದೆ. ಅಂತಹುದರಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣವಿಲ್ಲವೇ... ಇಂತಹುದೊಂದು ಪ್ರಶ್ನೆ ಮೂಡುವುದು ಸಹಜ.. ಆದರೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ. ಏಪ್ರಿಲ್ ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೋನಾ ವೈರಸ್ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ.

View full article
49 views07:18
ओपन / कमेंट
2021-05-11 10:18:07
ದ.ಕ. 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಅಭಿಯಾನ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ರೋಗ ನಿರೋಧಕ ಲಸಿಕಾ ಅಭಿಯಾನ ಮಂಗಳವಾರ ಆರಂಭಗೊಂಡಿದೆ. ಜಿಲ್ಲಾ‌ವೆನ್ಲಾಕ್ ಆಸ್ಪತ್ರೆಯಲ್ಲಿ 250 ಮಂದಿಗೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ 170 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ನೋಂದಣಿ ಮಾಡಿಕೊಂಡ ಯುವಕ-ಯುವತಿಯರು ಲಸಿಕೆ ಪಡೆದುಕೊಳ್ಳಲು ಲಸಿಕಾ ಕೇಂದ್ರದತ್ತ ಆಗಮಿಸಿದ್ದರು. ಅದೇ ರೀತಿ 45 ವರ್ಷದಿಂದ 59 ಮತ್ತು 60 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಅಭಿಯಾನ ನಡೆದಿದೆ.

View full article
45 views07:18
ओपन / कमेंट