Get Mystery Box with random crypto!

ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ : ಅಡ್ಡದಾರಿ ಹಿಡಿದ BBMP! | Kannada News Daily

ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ : ಅಡ್ಡದಾರಿ ಹಿಡಿದ BBMP!

ಬೆಂಗಳೂರು (ಮೇ.11): ಬೆಂಗಳೂರು ಕೊರೋನಾ ಸೋಂಕಿನ ಹಾಟ್‌ ಸ್ಪಾಟ್ ಆಗಿದೆ. ದಿನದಿನವೂ ಸೋಂಕು ಸಾವಿನ ಪ್ರಮಾಣ ಏರುತ್ತಲೇ ಇದೆ. ಇದೀಗ ಬೆಂಗಳೂರಿನಲ್ಲಿ ಬಿಬಿಎಂಪಿ ಅಡ್ಡದಾರಿ ಮೂಲಕ ಸೋಂಕು ಇಳಿಕೆಗೆ ಹೊರಟಿರುವ ಬಗ್ಗೆ ಅನುಮಾನಗಳು ಕಾಡಿದೆ. ಬೆಂಗಳೂರಿನಲ್ಲಿ ಸೋಂಕು ಇಳಿಕೆಗೆ ಹೊಸ ಮಾರ್ಗ ಕಂಡುಕೊಂಡ ಪಾಲಿಕೆ ಕೊರೋನಾ ಟೆಸ್ಟ್ ಸಂಖ್ಯೆ ಅರ್ಧಕ್ಕೆ ಇಳಿಸಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗುತ್ತಿದ್ದಂತೆ ಪರೀಕ್ಷೆ ಪ್ರಮಾಣವನ್ನೂ ಕೂಡ ಇಳಿಸಿದೆ. ನಿನ್ನೆ ಮೇ 10 ರಂದು ಬೆಂಗಳೂರಿನಲ್ಲಿ ಕೇವಲ 32,862 ಮಂದಿ ಕೋವಿಡ್ ಟೆಸ್ಟ್ ಮಾಡಿಸಿದ್ದು, ಬರೋಬ್ಬರಿ ಶೇ. 50% ಪಾಸಿಟಿವಿಟಿ ರೇಟ್ ದಾಖಲಾಗಿದೆ. 32,862 ಮಂದಿ ಪರೀಕ್ಷೆಯಲ್ಲಿ 16,747 ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿದೆ. ಲಸಿಕೆಗಾಗಿ ಸಮೀಪದ ಹಳ್ಳಿಗಳನ್ನು ಆಶ್ರಯಿಸುತ್ತಿರುವ ಬೆಂಗಳೂರಿಗರು ಈ ಮೊದಲು 65 ಸಾವಿರದ ವರೆಗೆ ಪ್ರತಿದಿನ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತಿತ್ತು.

View full article