Get Mystery Box with random crypto!

'ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ | Kannada News Daily

'ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ': ವಿಶ್ವಸಂಸ್ಥೆಗೆ ಮಾಹಿತಿ ನೀಡಿದ ಆ ದೇಶ ಯಾವುದು?

ಪ್ಯೋಂಗ್ಯಾಂಗ್: ನಮ್ಮ ದೇಶದಲ್ಲಿ ಇಂದಿಗೂ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಒಂದು ದೇಶ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ. ಅರೆ ಇದೇನಿದು.. ಇಡೀ ಜಗತ್ತೇ ಮಾರಕ ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿದೆ. ಅಂತಹುದರಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣವಿಲ್ಲವೇ... ಇಂತಹುದೊಂದು ಪ್ರಶ್ನೆ ಮೂಡುವುದು ಸಹಜ.. ಆದರೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪ್ರಕರಣ ದಾಖಲಾಗಿಲ್ಲವಂತೆ. ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ. ಏಪ್ರಿಲ್ ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೋನಾ ವೈರಸ್ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ.

View full article