Get Mystery Box with random crypto!

ದ.ಕ. 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಅಭಿಯಾನ ಆರಂಭ ಮಂಗಳೂರು: ದಕ್ಷಿಣ | Kannada News Daily

ದ.ಕ. 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಅಭಿಯಾನ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ರೋಗ ನಿರೋಧಕ ಲಸಿಕಾ ಅಭಿಯಾನ ಮಂಗಳವಾರ ಆರಂಭಗೊಂಡಿದೆ. ಜಿಲ್ಲಾ‌ವೆನ್ಲಾಕ್ ಆಸ್ಪತ್ರೆಯಲ್ಲಿ 250 ಮಂದಿಗೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ 170 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ನೋಂದಣಿ ಮಾಡಿಕೊಂಡ ಯುವಕ-ಯುವತಿಯರು ಲಸಿಕೆ ಪಡೆದುಕೊಳ್ಳಲು ಲಸಿಕಾ ಕೇಂದ್ರದತ್ತ ಆಗಮಿಸಿದ್ದರು. ಅದೇ ರೀತಿ 45 ವರ್ಷದಿಂದ 59 ಮತ್ತು 60 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಅಭಿಯಾನ ನಡೆದಿದೆ.

View full article