Get Mystery Box with random crypto!

She for Society: ಕೊರೋನಾ ವಾರಿಯರ್ಸ್ ಆದ ಬೆಂಗಳೂರಿನ ಮಹಿಳಾ ಬೈಕರ್ಸ್; | Kannada News Daily

She for Society: ಕೊರೋನಾ ವಾರಿಯರ್ಸ್ ಆದ ಬೆಂಗಳೂರಿನ ಮಹಿಳಾ ಬೈಕರ್ಸ್; ಸೋಂಕಿತರಿಗೆ ಉಚಿತ ಆಂಬುಲೆನ್ಸ್ ಸೇವೆ...

ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಅವುಗಳಲ್ಲಿ ಬೆಂಗಳೂರಿನ ಮಹಿಳಾ ಬೈಕರ್‌ಗಳ ತಂಡ ಕೂಡ ಒಂದು. ಹೌದು, ಕಳೆದ ಒಂದು ವಾರದಿಂದ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ಈ ಲೇಡಿ ಬೈಕರ್ಸ್ ಗ್ಯಾಂಗ್ ಎಲ್ಲರಿಗೂ ಮಾದರಿಯಾಗಿದೆ. 'ಶೀ ಫಾರ್ ಸೊಸೈಟಿ' ಸೈನಿಕರ ಹಾಗೂ ಸೈನಿಕರ ಕುಟುಂಬಗಳಿಗೆ ನೆರವಾಗಲು ಕೆಲ ವರ್ಷಗಳ ಹಿಂದೆ ಪ್ರಾರಂಭವಾದ ತಂಡ. ಹರ್ಷಿಣಿ ವೆಂಕಟೇಶ್ ಸಾರಥ್ಯದಲ್ಲಿ ಹತ್ತು ಜನರ ಮಹಿಳಾ ಬೈಕರ್‌ಗಳು ಸೇರಿ ಸೈನಿಕರು, ಅವರ ಕುಟುಂಬದವರಿಗೆ ನೆರವಾಗಲು, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಲು ಈ ತಂಡವನ್ನು ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ಆಂಬುಲೆನ್ಸ್​ಗಳ ಕೊರತೆ ಇರುವುದನ್ನು ಮನಗಂಡು 'ಶೀ ಫಾರ್ ಸೊಸೈಟಿ' ಟೀಮ್ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದೆ.

View full article