Get Mystery Box with random crypto!

ವಾಲಿ ಬಿತ್ತು 'ಓಲಿ'ಯ ಸರ್ಕಾರ! ಅಧಿಕಾರ ಹಿಡಿಯಲು ಕಾಂಗ್ರೆಸ್ ಸರ್ಕಸ್..? | Kannada News Daily

ವಾಲಿ ಬಿತ್ತು 'ಓಲಿ'ಯ ಸರ್ಕಾರ! ಅಧಿಕಾರ ಹಿಡಿಯಲು ಕಾಂಗ್ರೆಸ್ ಸರ್ಕಸ್..?

ಭಾರತದ ನೆರೆ ದೇಶದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದ್ದು, ಹೊಸ ಸರ್ಕಾರ ರಚನೆಗೆ ಡೆಡ್‌ಲೈನ್ ನೀಡಲಾಗಿದೆ. ಅಂದಹಾಗೆ ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡ ಹಿನ್ನೆಲೆ ಹೊಸ ಸರ್ಕಾರ ರಚನೆಗೆ ನೇಪಾಳ ಅಧ್ಯಕ್ಷೆ 3 ದಿನಗಳ ಗಡುವು ನೀಡಿದ್ದಾರೆ. ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್‌ನ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದ ಕೆ.ಪಿ. ಶರ್ಮಾ ಓಲಿಗೆ ಕನಿಷ್ಠ 136 ಮತಗಳು ಬೇಕಾಗಿದ್ದವು. ಆದರೆ ಓಲಿಗೆ ಸಿಕ್ಕಿದ್ದು 93 ಸಂಸತ್ ಸದಸ್ಯರ ಮತಗಳು. ಈ ಮೂಲಕ ಓಲಿ ಸೋಲು ಕಂಡು, ಓಲಿ ಸರ್ಕಾರ ವಾಲಿಸಿದ್ದಾರೆ. ಓಲಿ ವಿರುದ್ಧ 124 ಮತಗಳು ಬಿದ್ದಿದ್ದು, 15 ಮಂದಿ ನೇಪಾಳ ಸಂಸತ್ ಸದಸ್ಯರು ತಟಸ್ಥರಾಗಿ ಉಳಿದರು.

View full article