Get Mystery Box with random crypto!

ಕೋವಿಡ್ ಲಾಕ್‌ಡೌನ್‌: ವಾಹನ ನೋಂದಣಿ ಶೇ 30ರಷ್ಟು ಇಳಿಕೆ ನವದೆಹಲಿ: ದೇ | Kannada News Daily

ಕೋವಿಡ್ ಲಾಕ್‌ಡೌನ್‌: ವಾಹನ ನೋಂದಣಿ ಶೇ 30ರಷ್ಟು ಇಳಿಕೆ

ನವದೆಹಲಿ: ದೇಶದಲ್ಲಿ ವಾಹನಗಳ ನೋಂದಣಿಯು 2019-20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020-21ನೇ ಹಣಕಾಸು ವರ್ಷದಲ್ಲಿ ಶೇಕಡ 29.85ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ. 2019-20ರಲ್ಲಿ 2.17 ಕೋಟಿ ವಾಹನಗಳು ನೋಂದಣಿ ಆಗಿದ್ದವು. 2020-21ರಲ್ಲಿ ವಾಹನಗಳ ನೋಂದಣಿಯು 1.52 ಕೋಟಿಗೆ ಇಳಿಕೆ ಕಂಡಿದೆ. ಇದು ಕಳೆದ ಎಂಟು ವರ್ಷಗಳ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಟ್ರ್ಯಾಕ್ಟರ್‌ ಹೊರತುಪಡಿಸಿ ಉಳಿದೆಲ್ಲ ವಾಹನಗಳ ನೋಂದಣಿಯು 2020-21ರಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿದೆ ಎಂದು ಎಫ್‌ಎಡಿಎ ತಿಳಿಸಿದೆ. ಟ್ರ್ಯಾಕ್ಟರ್‌ ನೋಂದಣಿಯಲ್ಲಿ ಶೇ 16.11ರಷ್ಟು ಬೆಳವಣಿಗೆ ಕಂಡುಬಂದಿದೆ. 2020ರ ಏಪ್ರಿಲ್‌ನಲ್ಲಿ ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿತ್ತು.

View full article