Get Mystery Box with random crypto!

ಎಚ್ಚರ! ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ್ರೆ ಸಾವು ಪಕ್ಕಾ? ಜ | Kannada News Daily

ಎಚ್ಚರ! ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ್ರೆ ಸಾವು ಪಕ್ಕಾ?

ಜಗತ್ತಿನ ತುಂಬಾ ಕೊರೊನಾ ರಣಕೇಕೆ ಹಾಕುತ್ತಿರುವ ಈ ಸಂದರ್ಭದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ವಾರದಲ್ಲಿ 55 ಗಂಟೆಗಿಂತ ಹೆಚ್ಚು ಸಮಯ, ಅಂದರೆ ಪ್ರತಿದಿನ ಸರಾಸರಿ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೆ ಹೃದಯಕ್ಕೆ ಅಪಾಯವಿದೆ ಎಂದು 'ಡಬ್ಲ್ಯೂಹೆಚ್‌ಒ' ಎಚ್ಚರಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜೊತೆಗೂಡಿ ವಿಶ್ವ ಆರೋಗ್ಯ ಸಂಸ್ಥೆ ಈ ಅಧ್ಯಯನ ನಡೆಸಿತ್ತು. ಸಮಸ್ಯೆ ಎದುರಿಸುತ್ತಿರುವವರ ಪೈಕಿ ಶೇ.72ರಷ್ಟು ಪುರುಷರೇ ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪರಿಸರ, ವಾತಾವರಣ ಬದಲಾವಣೆ ಮತ್ತು ಆರೋಗ್ಯ ವಿಭಾಗದ ನಿರ್ದೇಶಕಿ ಮೆರಿಯಾ ನೀರಾ ಈ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಾತಾವರಣದ ಬದಲಾವಣೆ, ಆಹಾರ ಕ್ರಮದಲ್ಲಿ ವ್ಯತ್ಯಾಸ ಈಗಾಗಲೇ ಮಾನವನ ಬದುಕನ್ನು ದುಸ್ತರಗೊಳಿಸಿದೆ. ಈ ಹೊತ್ತಲ್ಲಿ ಕೆಲಸವೂ ಮಾನವನ ಜೀವಕ್ಕೆ ಕಂಟಕವಾಗಬಹುದು ಎಂದಿರುವುದು ದುರಂತವೇ ಸರಿ.

View full article