Get Mystery Box with random crypto!

ಲಾಕ್ಡೌನ್, ಚಂಡಮಾರುತ: ಟೀಂ ವೆಲ್ಫೇರ್ ಬಳಗದಿಂದ ‌ಮಾದರಿ ಪರಿಹಾರ ಕಾರ್ಯ | Kannada News Daily

ಲಾಕ್ಡೌನ್, ಚಂಡಮಾರುತ: ಟೀಂ ವೆಲ್ಫೇರ್ ಬಳಗದಿಂದ ‌ಮಾದರಿ ಪರಿಹಾರ ಕಾರ್ಯ

ಮಂಗಳೂರು, ಮೇ. 17: ಪ್ರಸಕ್ತ ದಿನಗಳಲ್ಲಿ ಕೊರೊನಾ ಪಿಡುಗಿನಿಂದಾಗಿರುವ ಲಾಕ್ಡೌನ್ ಕಾರಣದಿಂದ ಉಂಟಾಗಿರುವ ಅರ್ಥಿಕ ಬಿಕ್ಕಟ್ಟು ಹಾಗೂ ಪ್ರಕೃತಿ ವಿಕೋಪ "ತೌಕ್ತೆ" ಚಂಡಮಾರುತ ಸೇರಿದಂತೆ ವಿವಿಧ ವಿಷಮ ಪರಿಸ್ಥಿತಿಯಲ್ಲಿನ ಜನಸಾಮಾನ್ಯರ ಬವಣೆಗಳಿಗೆ ಬಹಳ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಜನಸೇವಾ ಘಟಕವಾಗಿರುವ ಟೀಂ ವೆಲ್ಫೇರ್ ಬಳಗದವರ ನಿಸ್ವಾರ್ಥ ಸೇವೆಯು ಸಾರ್ವಜನಿಕರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಟೀಂ ವೆಲ್ಪೇರ್ ಮೆಡಿಕಲ್ ವಿಭಾಗದ ಉಸ್ತುವಾರಿ ಅಬ್ದುಲ್ ಸಲಾಮ್ ಸಿ.ಎಚ್. ತಿಳಿಸಿದ್ದಾರೆ. ಟೀಂ ವೆಲ್ಪೇರ್ ಕಾರ್ಯಕರ್ತರು ಕೂಲಿ ಕಾರ್ವಿುಕರು, ವಲಸಿಗರು, ನಿರ್ಗತಿಕರು ಅನ್ನವಿಲ್ಲದೆ ಕಂಗೆಡುತ್ತಿರುವ ಬಡಪಾಯಿಗಳನ್ನು ಸಂಪರ್ಕಿಸಿದ್ದು ಅವರಿಗೆ ಬೇಕಾದ ಆಹಾರ ಮತ್ತು ವಸತಿಗಳ ಪರ್ಯಾಯ ಯೋಜನೆಯನ್ನು ಕಲ್ಪಿಸಿಕೊಟ್ಟಿರುವರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article