Get Mystery Box with random crypto!

ಕೋಸ್ಟ್‌ಗಾರ್ಡ್, ನೌಕಾಪಡೆಯ ಜಂಟಿ ಕಾರ್ಯಾಚರಣೆ: ಕೋರಮಂಡಲ್ ಸಪೋರ್ಟರ್ ಮಿನ | Kannada News Daily

ಕೋಸ್ಟ್‌ಗಾರ್ಡ್, ನೌಕಾಪಡೆಯ ಜಂಟಿ ಕಾರ್ಯಾಚರಣೆ: ಕೋರಮಂಡಲ್ ಸಪೋರ್ಟರ್ ಮಿನಿ ನೌಕೆಯ ಸಿಬ್ಬಂದಿ ರಕ್ಷಣೆ

ಮಂಗಳೂರು, ಮೇ 16: ಕಾಪು ದ್ವೀಪ ಸ್ತಂಭದಿಂದ 6 ಕಿ.ಮೀ. ದೂರದ ಸಮುದ್ರದಲ್ಲಿ ಬಂಡೆಯ ನಡುವೆ ಅಪಾಯದಲ್ಲಿ ಸಿಲುಕಿದ್ದ ಕೋರಮಂಡಲ ಸಪೋರ್ಟರ್ 9 ಮಿನಿ ನೌಕೆಯಲ್ಲಿದ್ದ 9 ಮಂದಿ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್ ಹಾಗೂ ನೌಕಾಪಡೆಯ ಹೆಲಿಕಾಪ್ಟರ್‌ನ ಜಂಟಿ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ. ಸದ್ಯ ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಪಣಂಬೂರಿನ ಎನ್‌ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಲದವರಾದ ಮೊಯ್ದಿನ್ ಮುಲ್ಲಾ ಖಾನ್(40), ಶಂತನು ಕುಮಾರ್ (23), ತುಷನ್ ಬಿಸ್ವಾಸ್ (29), ಬಿಹಾರದವರಾದ ಲಕ್ಷ್ಮೀನಾರಾಯಣ್ (24), ಗೌರವ್ ಕುಮಾರ್ (27), ತಮಿಳುನಾಡಿನರಾದ ಪ್ರಶಾಂತ್ ಸುಬ್ರಹ್ಮಣ್ಯಂ (29), ದೀಪಕ್ ದಿನೇಶ್ (22), ಉತ್ತರ ಪ್ರದೇಶದ ರೌದ್ ಅಹಮದ್ (26), ರಾಹುಲ್ ಮಂಜುದಾರ್ (26) ರಕ್ಷಣೆಗೊಳಗಾದವರು. ಎಂಆರ್‌ಪಿಎಲ್‌ನಲ್ಲಿ ಖಾಸಗಿ ಸಂಸ್ಥೆಯಡಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋರಮಂಡಲ ಸಪೋರ್ಟರ್ 9 ಎಂಬ ನೌಕೆ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಎನ್‌ಎಂಪಿಟಿಗೆ ವರದಿ ದೊರಕಿತ್ತು.

View full article