Get Mystery Box with random crypto!

ಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ | Kannada News Daily

ಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ ರಕ್ಷಣೆ

ಮಂಗಳೂರು, ಮೇ 17: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಒಂಬತ್ತು ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾದಳ ಜಂಟಿ ಕಾರ್ಯಾಚರಣೆ ಮಾಡಿ ರಕ್ಷಿಸಿದೆ. ಭೋರ್ಗರೆಯುವ ಕಡಲಿನ ಮಧ್ಯೆ ಜೀವವನ್ನು ಕೈಯಲ್ಲಿ ಹಿಡಿದು ಕಳೆದ 38 ಗಂಟೆಗಳಿಂದ ರಕ್ಷಣೆಗಾಗಿ ಕಾದು ಕುಳಿತಿದ್ದ ಕಾರ್ಮಿಕರಿಗೆ ಸೇನೆ ಸಹಾಯಹಸ್ತ ಚಾಚಿದೆ. ಮೇ 15ರ ರಾತ್ರಿ ಪಡುಬಿದ್ರೆಯ ಕಡಲ ಕಿನಾರೆಯಿಂದ 17 ನಾಟಿಕಲ್ ಮೈಲ್ ದೂರದಲ್ಲಿ ಎಂಆರ್‌ಪಿಎಲ್‌ಗೆ ಸೇರಿದ ಕೋರಮಂಡಲ್-9 ಎಂಬ ಹೆಸರಿನ ಟಗ್, ತೌಕ್ತೆ ಚಂಡಮಾರುತಕ್ಕೆ ತುತ್ತಾಗಿತ್ತು. ಟಗ್ ನಲ್ಲಿ 9 ಮಂದಿ ಕಾರ್ಮಿಕರು ಅಬ್ಬರಿಸುವ ಕಡಲ ಮಧ್ಯೆಯೂ ರಕ್ಷಣೆಗಾಗಿ ಕಾಯುತ್ತಿದ್ದರು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆಯೇ ಟಗ್ ನ ಆಯಂಕರ್ ಭಾಗ ತುಂಡಾಗಿ ಅಲೆಗಳ ಅಬ್ಬರಕ್ಕೆ ದಿಕ್ಕುಪಾಲಾಗಿ ಎರಡು ಮೈಲ್ ದೂರಕ್ಕೆ ಸಾಗಿತ್ತು.

View full article