Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 40

2021-05-24 07:18:13
ಮೈಸೂರು- ಕುಶಾಲನಗರ ರೈಲ್ವೇ ಮಾರ್ಗದ ಫೈನಲ್‌ ಲೊಕೇಶನ್‌ ಸರ್ವೆಗೆ ಮರು ಟೆಂಡರ್

ಮೈಸೂರು, ಮೇ 24: ಕರ್ನಾಟಕ ರಾಜ್ಯದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಪ್ರವಾಸಿ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸಲು ದಶಕಗಳಿಂದಲೇ ಪ್ರಯತ್ನ ನಡೆಯುತ್ತಿದೆ. ಆದರೆ ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ಮುಂದಕ್ಕೆ ಹೋಗುತ್ತಲೇ ಇದೆ. ಮೈಸೂರಿನಿಂದ ಬೆಳಗೊಳದ ಮಾರ್ಗವಾಗಿ ಕುಶಾಲನಗರ ಪಕ್ಕದ ಕೊಪ್ಪದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಲು ಸರ್ವೆ ನಡೆಸಿದ್ದ ರೈಲ್ವೇ ಅಧಿಕಾರಿಗಳು ಈ ಯೋಜನೆ ಆದಾಯದ ದೃಷ್ಟಿಯಿಂದ ಕಾರ್ಯಸಾಧುವಲ್ಲ ಎಂದು ತಳ್ಳಿ ಹಾಕಿದ್ದರು. ಸಾಕಷ್ಟು ಒತ್ತಡ, ಪ್ರಭಾವದ ನಂತರ ಕೇಂದ್ರ ಸರ್ಕಾರವು ಈ ಯೋಜನೆಗೆ 2019ನೇ ಇಸವಿಯಲ್ಲಿ ಒಪ್ಪಿಗೆ ನೀಡಿದೆ. ಅಂತಿಮ ಹಂತವಾಗಿ ಅಂತಿಮ ಸ್ಥಳ ಸಮೀಕ್ಷೆ ಒಟ್ಟು 1,885 ಕೋಟಿ ರೂಪಾಯಿಗಳ ವೆಚ್ಚದ ಮೈಸೂರಿನಿಂದ ಕುಶಾಲನಗರದವರೆಗಿನ 87 ಕಿಲೋಮೀಟರ್‌ ಉದ್ದದ ಈ ರೈಲು ಮಾರ್ಗಕ್ಕೆ ರೈಲ್ವೇ ಸಚಿವಾಲಯ ಮಂಜೂರಾತಿಯನ್ನೂ ನೀಡಿದೆ.

View full article
27 views04:18
ओपन / कमेंट
2021-05-24 07:18:10
ಮೇ 23ರಂದು ಚಿನ್ನ, ಬೆಳ್ಳಿ ದರ ಸ್ಥಿರ, ಯಾವ ನಗರದಲ್ಲಿ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಕೋವಿಡ್ ನಿರ್ಬಂಧದಿಂದ ಅಂಗಡಿ ಮಳಿಗೆಗಳು ಬಂದ್ ಆಗಿದ್ದು, ಖರೀದಿ ಇಲ್ಲದೆ ವಹಿವಾಟು ಕುಸಿತ ಕಾಣುತ್ತಿದೆ. ಆದರೆ, ರವಿವಾರ (ಮೇ.23) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ ಸ್ಥಿರವಾಗಿದೆ. 10 ಗ್ರಾಂಗೆ 210ರು ನಷ್ಟು ಏರಿಕೆ ಕಂಡಿದೆ. ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳಲ್ಲೂ ಹಲವೆಡೆ ಲಾಕ್ ಡೌನ್ ಹಾಗೂ ಜಾಗತಿಕ ವಿದ್ಯಮಾನಗಳಿಂದ ಬೆಲೆಯಲ್ಲಿ ಏರಿಳಿತ ಕಂಡಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0.22%ರು ನಷ್ಟು ಇಳಿಕೆ ಕಂಡು 48,439ರು ಹಾಗೂ ಬೆಳ್ಳಿ ಪ್ರತಿ 1 ಕೆಜಿಗೆ 1.67% ತಗ್ಗಿದ್ದು 71,100ರು ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.42ರಷ್ಟು ಏರಿಕೆಯಾಗಿ 1,881.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.53ಷ್ಟು ಇಳಿಕೆಯಾಗಿ 27.56ಯುಎಸ್ ಡಾಲರ್ ಆಗಿದೆ. ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ?

View full article
25 views04:18
ओपन / कमेंट
2021-05-24 07:18:07
ಚಾಮರಾಜನಗರ; ಕೊರೊನಾ ದೇವಿಯ ಪ್ರತಿಷ್ಠಾಪಿಸಿ ಪೂಜೆ!

ಚಾಮರಾಜನಗರ, ಮೇ 23; ಇವತ್ತು ನಾವು ಪೂಜಿಸುವ ಬಹಳಷ್ಟು ಮಾರಮ್ಮ ದೇಗುಲಗಳು ಹಿಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದಾಗ ಅವುಗಳ ನಿರ್ನಾಮಕ್ಕಾಗಿ ಜನರೇ ಪ್ರತಿಷ್ಠಾಪಿಸಿ ಪೂಜಿಸಿದ ದೇಗುಲಗಳಾಗಿವೆ. ಮಾರಮ್ಮ ದೇಗುಲಗಳಿಗೆ ಸಾಂಕ್ರಾಮಿಕ ರೋಗವನ್ನು ನಾಶ ಮಾಡುವ ಶಕ್ತಿಯಿದೆ ಎಂಬ ನಂಬಿಕೆ ಇವತ್ತಿಗೂ ಜನರಲ್ಲಿದೆ. ಹೀಗಾಗಿಯೇ ಪ್ರತಿವರ್ಷ ಮಾರಮ್ಮ ದೇಗುಲಗಳಲ್ಲಿ ವಿಶೇಷ ಪೂಜೆ ಜಾತ್ರೆಗಳನ್ನು ಮಾಡಲಾಗುತ್ತದೆ. ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ಬಹುಶಃ ಇವತ್ತಿನ ಕೊರೊನಾ ಮಹಾಮಾರಿ ಹಿಂದೆಂದೂ ಕಾಣದ ಮಹಾ ಸಾಂಕ್ರಾಮಿಕ ರೋಗವಾಗಿದ್ದು ಇಡೀ ಮನುಕುಲವೇ ನಡಗುವಂತಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
24 views04:18
ओपन / कमेंट
2021-05-24 07:18:05
ಮೇ 24ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಭಾನುವಾರ ತೈಲ ದರ ಏರಿಕೆ ಮಾಡಿದ ಬಳಿಕ ಸೋಮವಾರ (ಮೇ 24) ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆ ಮಾಡಿಲ್ಲ. ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 93.21 ರೂಪಾಯಿ ದಾಖಲಾಗಿದ್ದು, ಡೀಸೆಲ್ ದರವು ಲೀಟರ್‌ಗೆ 84.07 ರೂಪಾಯಿ ಮುಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

View full article
24 views04:18
ओपन / कमेंट
2021-05-24 04:18:03
BREAKING : ಉತ್ತರಾಖಂಡ್ ನ ಚಮೋಲಿಯಲ್ಲಿ 4.3 ತೀವ್ರತೆಯ ಭೂಕಂಪನ

ಚಮೋಲಿ : ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ಯ ಭೂಕಂಪವು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯ ಜೋಶಿಮಠದಿಂದ ಉತ್ತರ-ವಾಯುವ್ಯಕ್ಕೆ ೪೪ ಕಿ.ಮೀ ದೂರದಲ್ಲಿ ಸೋಮವಾರ ಬೆಳಿಗ್ಗೆ 12.31 ಕ್ಕೆ ಹುಟ್ಟಿಕೊಂಡಿತು. ಅಲೋಪತಿ ಬಗ್ಗೆ ರಾಮ್ ದೇವ್ ಹೇಳಿಕೆ ಹಿಂತೆಗೆದುಕೊಳ್ಳಲು ಸಚಿವ ಹರ್ಷವರ್ಧನ್ ಮನವಿ ಡೆಹ್ರಾಡೂನ್, ಪೌರಿ ಮತ್ತು ಗರ್ವಾಲ್ ಜಿಲ್ಲೆಗಳು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

View full article
39 views01:18
ओपन / कमेंट
2021-05-23 19:18:06
ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ 1 ಲಕ್ಷ ಶಿಕ್ಷಕರು ಸಸ್ಪೆಂಡ್!

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ; ಹೀಗೆ ಭಾರತದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಸಾವಿರಾರು ವರ್ಷಗಳಿಂದ ಗುರುವಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಆದರೆ ಭಾರತದ ನೆರೆಯ ರಾಷ್ಟ್ರ ಮಾತ್ರ ಗುರುಗಳಿಗೆ ದ್ರೋಹ ಬಗೆದು, ಶಿಕ್ಷಕರ ವಿರುದ್ಧವೇ ಸಮರ ಸಾರಿದೆ. ಹೌದು, ನಾವು ಹೇಳ್ತಿರೋದು ಮ್ಯಾನ್ಮಾರ್‌ ಶಿಕ್ಷಕರ ವ್ಯಥೆಯನ್ನು. ಫೆಬ್ರುವರಿ ತಿಂಗಳಲ್ಲಿ ನಡೆದಿದ್ದ ಸೇನಾ ದಂಗೆ ವಿರೋಧಿಸಲು ಪ್ರತಿಭಟನೆ ನಡೆಸುತ್ತಿದ್ದವರ ಜೊತೆ ಸೇರಿದ್ದಕ್ಕಾಗಿ ಮ್ಯಾನ್ಮಾರ್‌ನ 1.25 ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರನ್ನ ಅಮಾನತು ಮಾಡಿದ್ದಾರಂತೆ ಸೇನಾಧಿಕಾರಿಗಳು. ಫೆಬ್ರವರಿ 1ರಂದು ಮ್ಯಾನ್ಮಾರ್‌ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿತ್ತು. ಬಳಿಕ ಮ್ಯಾನ್ಮಾರ್‌ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸಂಪುಟ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು.

View full article
19 views16:18
ओपन / कमेंट
2021-05-23 16:19:27
ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಕೋವಿಡ್ ಗೆ ಬಲಿ

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಭಾನುವಾರ ಸಂಜೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ಕಾಣಿಸಿಕೊಂಡಿದ್ದರಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಕೆಲದಿನಗಳ ದಿನ ಹಿಂದೆ ಅವರ ಪತ್ನಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಮಚೇಂದ್ರನಾಥ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘಟನೆಗಳು ಅವರನ್ನು ಸನ್ಮಾನಿಸಿದ್ದವು. ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿದ್ದರು. ಮಚೇಂದ್ರನಾಥ್ ಅವರ ಮಗಳು ಸಿಂಧು ಭೈರವಿ ಅಂತರಾಷ್ಟ್ರಮಟ್ಟದ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದಾರೆ. ಇದನ್ನೂ ಓದಿ : ಮುಧೋಳ : ಕೋವಿಡ್ ಮಾರಿಗೆ ನಗರಸಭೆ ಅಧ್ಯಕ್ಷ ಬಲಿ

View full article
50 views13:19
ओपन / कमेंट
2021-05-23 16:19:24
ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಕಸ ವಿಲೇವಾರಿಗೆ ಬಳಸಿದ ಅಪರ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ರವಿವಾರ ಲಾಕ್‌ಡೌನ್‌ ಅವಧಿಯಲ್ಲಿ ನಿಯಮ ಬಾಹಿರವಾಗಿ ರಾ.ಹೆ.ಯಲ್ಲಿ ಓಡಾಡುತ್ತಿದ್ದ ವಾಹನ ತಡೆದು ಅದರಲ್ಲಿ ರಸ್ತೆ ಬದಿಯಲ್ಲಿ ಎಸೆಯಲಾದ ತ್ಯಾಜ್ಯವನ್ನು ತುಂಬಿಸಿ ಅಲೆವೂರು ಡಂಪಿಂಗ್‌ ಯಾರ್ಡ್‌ಗೆ ಸಾಗಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ನಿಟ್ಟೂರು ಸಮೀಪ ಶೇಖರಣೆಯಾಗಿ ಬಿದ್ದಿದ್ದ ಕಸವನ್ನು ವಾಹನಕ್ಕೆ ತುಂಬಿಸಿ ಅಲೆವೂರಿನ ತ್ಯಾಜ್ಯ ಸಂಗ್ರಹಣ ಕೇಂದ್ರಕ್ಕೆ ರವಾನಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ಸಾರ್ವಜನಿಕರು ನಿಯಮ ಬಾಹಿರವಾಗಿ ವಾಹನಗಳಲ್ಲಿ ಸಂಚರಿಸದಂತೆ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೂ ನಿಯಮ ಮೀರಿ ವಾಹನಗಳು ಸಂಚಾರ ನಡೆಸಿದ ಹಿನ್ನೆಲೆಯಲ್ಲಿ ಅಂತಹ ವಾಹನಗಳನ್ನು ಕೊರೊನಾ ಲಾಕ್‌ಡೌನ್‌ ಮುಗಿಯುವ ವರೆಗೆ ಕಸ ವಿಲೇವಾರಿ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಸದಾಶಿವ ಪ್ರಭು ಎಚ್ಚರಿಸಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
45 views13:19
ओपन / कमेंट
2021-05-23 16:19:22
CBSE: 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಲ್ಲ

ನವದೆಹಲಿ, ಮೇ 23: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ 12ನೇ ತರಗತಿ ಅಂತಿಮ ಪರೀಕ್ಷೆಗಳ ಅವಧಿ ಕಡಿತಗೊಳಿಸಲಾಗಿದೆ. ಅರ್ಧ ಗಂಟೆಗಳಲ್ಲೇ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಶಿಕ್ಷಣ ಮಂಡಳಿ ಚಿಂತನೆ ನಡೆಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ರಾಜ್ಯಗಳು ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದವು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಪರೀಕ್ಷೆಗಳನ್ನು ರದ್ದುಗೊಳಿಸುವುದಕ್ಕೆ ಪ್ರತಿಪಾದಿಸಿದ್ದವು. ಈ ಹಿನ್ನೆಲೆ ಕೇಂದ್ರ ಮಂಡಳಿ 12ನೇ ತರಗತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎರಡು ಆಯ್ಕೆಗಳನ್ನು ನೀಡಿದೆ. ಸಿಬಿಎಸ್‌ಇ ಪರೀಕ್ಷೆ ಭವಿಷ್ಯ ನಿರ್ಧಾರ, ರಾಜನಾಥ್ ನೇತೃತ್ವದಲ್ಲಿ ಸಭೆ 12ನೇ ತರಗತಿ ವಿದ್ಯಾರ್ಥಿಗಳಿಗೆ 3 ಗಂಟೆಗಳ ಬದಲಿಗೆ ಅರ್ಧ ಗಂಟೆಗಳಲ್ಲೇ ಪರೀಕ್ಷೆ ನಡೆಸುವುದು ಒಂದು ಆಯ್ಕೆಯಾಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
187 views13:19
ओपन / कमेंट
2021-05-23 13:19:12
ಸೋಂಕಿತರು, ಸಿಬ್ಬಂದಿಯ ನೋವಿಗೆ ಮಿಡಿದ ತರಳಬಾಳು ಮಠ; ವಿಕ್ಟೋರಿಯಾ ಆಸ್ಪತ್ರೆಗೆ ಆಹಾರ ಪೂರೈಕೆ

ಬೆಂಗಳೂರು: ಕರೊನಾ ಎರಡನೇ ಅಲೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದನ್ನು ಕಂಡ ಜನರು ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವೆಗೆ ಮುಂದಾಗಿರುವ ಸಿರಿಗೆರೆ ತರಳಬಾಳು ಬೃಹನ್ಮಠ ಕೋವಿಡ್ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬುವುದರ ಜತೆಗೆ ವಿವಿಧ ಸೇವೆಗಳಲ್ಲಿ ತೊಡಗಿಕೊಂಡಿದೆ. ಕರೊನಾದಿಂದ ಕಂಗೆಟ್ಟಿರುವ ಜನತೆಗೆ ಆಸರೆಯಾಗುವ ಮಾನವೀಯತೆಯ ನಿಟ್ಟಿನಲ್ಲಿ ತರಳಬಾಳು ಮಠ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಷ್ಟೇ ಅಲ್ಲದೇ ಅಂಗಸಂಸ್ಥೆಯಾದ ತರಳಬಾಳು ಕೇಂದ್ರದ ಮೂಲಕ ಬೆಂಗಳೂರು ನಗರದ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಕರೊನಾ ವಾರಿಯರ್ಸ್ ಗಳು, ಪರಿಚಾರಕರು ಹಾಗೂ ಕೋವಿಡ್ ಸೋಂಕಿತರ ಸಂಬಂಧಿಗಳಿಗೆ ಅವಶ್ಯಕವಾಗಿರುವ ಆಹಾರದ ಪೂರೈಕೆಯನ್ನು ಉಚಿತವಾಗಿ ಸಮರ್ಪಣೆ ಮಾಡಲಾಗುತ್ತಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
50 views10:19
ओपन / कमेंट