Get Mystery Box with random crypto!

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಕೋವಿಡ್ ಗೆ ಬಲಿ | Kannada News Daily

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಕೋವಿಡ್ ಗೆ ಬಲಿ

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಭಾನುವಾರ ಸಂಜೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ಕಾಣಿಸಿಕೊಂಡಿದ್ದರಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಕೆಲದಿನಗಳ ದಿನ ಹಿಂದೆ ಅವರ ಪತ್ನಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಮಚೇಂದ್ರನಾಥ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘಟನೆಗಳು ಅವರನ್ನು ಸನ್ಮಾನಿಸಿದ್ದವು. ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿದ್ದರು. ಮಚೇಂದ್ರನಾಥ್ ಅವರ ಮಗಳು ಸಿಂಧು ಭೈರವಿ ಅಂತರಾಷ್ಟ್ರಮಟ್ಟದ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದಾರೆ. ಇದನ್ನೂ ಓದಿ : ಮುಧೋಳ : ಕೋವಿಡ್ ಮಾರಿಗೆ ನಗರಸಭೆ ಅಧ್ಯಕ್ಷ ಬಲಿ

View full article