Get Mystery Box with random crypto!

ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಕಸ ವಿಲೇವಾರಿಗೆ ಬಳಸಿದ ಅ | Kannada News Daily

ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಕಸ ವಿಲೇವಾರಿಗೆ ಬಳಸಿದ ಅಪರ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ರವಿವಾರ ಲಾಕ್‌ಡೌನ್‌ ಅವಧಿಯಲ್ಲಿ ನಿಯಮ ಬಾಹಿರವಾಗಿ ರಾ.ಹೆ.ಯಲ್ಲಿ ಓಡಾಡುತ್ತಿದ್ದ ವಾಹನ ತಡೆದು ಅದರಲ್ಲಿ ರಸ್ತೆ ಬದಿಯಲ್ಲಿ ಎಸೆಯಲಾದ ತ್ಯಾಜ್ಯವನ್ನು ತುಂಬಿಸಿ ಅಲೆವೂರು ಡಂಪಿಂಗ್‌ ಯಾರ್ಡ್‌ಗೆ ಸಾಗಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ನಿಟ್ಟೂರು ಸಮೀಪ ಶೇಖರಣೆಯಾಗಿ ಬಿದ್ದಿದ್ದ ಕಸವನ್ನು ವಾಹನಕ್ಕೆ ತುಂಬಿಸಿ ಅಲೆವೂರಿನ ತ್ಯಾಜ್ಯ ಸಂಗ್ರಹಣ ಕೇಂದ್ರಕ್ಕೆ ರವಾನಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ಸಾರ್ವಜನಿಕರು ನಿಯಮ ಬಾಹಿರವಾಗಿ ವಾಹನಗಳಲ್ಲಿ ಸಂಚರಿಸದಂತೆ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೂ ನಿಯಮ ಮೀರಿ ವಾಹನಗಳು ಸಂಚಾರ ನಡೆಸಿದ ಹಿನ್ನೆಲೆಯಲ್ಲಿ ಅಂತಹ ವಾಹನಗಳನ್ನು ಕೊರೊನಾ ಲಾಕ್‌ಡೌನ್‌ ಮುಗಿಯುವ ವರೆಗೆ ಕಸ ವಿಲೇವಾರಿ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಸದಾಶಿವ ಪ್ರಭು ಎಚ್ಚರಿಸಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article