Get Mystery Box with random crypto!

ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ 1 ಲಕ್ಷ ಶಿಕ್ಷಕರು ಸಸ್ಪೆಂಡ್! ಗುರ | Kannada News Daily

ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ 1 ಲಕ್ಷ ಶಿಕ್ಷಕರು ಸಸ್ಪೆಂಡ್!

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ; ಹೀಗೆ ಭಾರತದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಸಾವಿರಾರು ವರ್ಷಗಳಿಂದ ಗುರುವಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಆದರೆ ಭಾರತದ ನೆರೆಯ ರಾಷ್ಟ್ರ ಮಾತ್ರ ಗುರುಗಳಿಗೆ ದ್ರೋಹ ಬಗೆದು, ಶಿಕ್ಷಕರ ವಿರುದ್ಧವೇ ಸಮರ ಸಾರಿದೆ. ಹೌದು, ನಾವು ಹೇಳ್ತಿರೋದು ಮ್ಯಾನ್ಮಾರ್‌ ಶಿಕ್ಷಕರ ವ್ಯಥೆಯನ್ನು. ಫೆಬ್ರುವರಿ ತಿಂಗಳಲ್ಲಿ ನಡೆದಿದ್ದ ಸೇನಾ ದಂಗೆ ವಿರೋಧಿಸಲು ಪ್ರತಿಭಟನೆ ನಡೆಸುತ್ತಿದ್ದವರ ಜೊತೆ ಸೇರಿದ್ದಕ್ಕಾಗಿ ಮ್ಯಾನ್ಮಾರ್‌ನ 1.25 ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರನ್ನ ಅಮಾನತು ಮಾಡಿದ್ದಾರಂತೆ ಸೇನಾಧಿಕಾರಿಗಳು. ಫೆಬ್ರವರಿ 1ರಂದು ಮ್ಯಾನ್ಮಾರ್‌ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿತ್ತು. ಬಳಿಕ ಮ್ಯಾನ್ಮಾರ್‌ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸಂಪುಟ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು.

View full article