Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 39

2021-05-25 07:18:12
ಮಡಿಕೇರಿ ಆಸ್ಪತ್ರೆಯಲ್ಲಿ ಮೃತರ ಮಾಂಗಲ್ಯ ಸರ ಕಳವು; ಪೊಲೀಸ್‌ ದೂರು

ಮಡಿಕೇರಿ, ಮೇ 25: ಕೋವಿಡ್ ಸೋಂಕಿನಿಂದ ಮೃತಪಟ್ಟ ವೃದ್ಧೆಯ 25 ಗ್ರಾಂ ತೂಕದ ಚಿನ್ನದ ತಾಳಿ ಸರವನ್ನೇ ಕಳವು ಮಾಡಿರುವ ಪ್ರಕರಣ ಮಡಿಕೇರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸೋಮವಾರ ಪೊಲೀಸ್‌ ದೂರು ದಾಖಲಾಗಿದೆ. ಇತ್ತೀಚಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಫೋನ್ ಕಳ್ಳತನವಾಗಿದ್ದ ಪ್ರಕರಣ, ಆಕೆಯ ಮಗಳ ಮನವಿಯಿಂದಾಗಿ ರಾಜ್ಯಾದ್ಯಂತ ಪ್ರಚಾರವಾದ ಬೆನ್ನಲ್ಲೇ ಈಗ ಅದೇ ಆಸ್ಪತ್ರೆಯಲ್ಲಿ ಮೃತ ವೃದ್ಧೆಯ ಚಿನ್ನದ ತಾಳಿ ಸರ ಕಳುವಾಗಿದೆ. ಕೋವಿಡ್‌ನಿಂದ ಮೃತಪಟ್ಟ ಕಮಲಾ ಎಂಬ ವೃದ್ಧೆಯ ಅಂದಾಜು 1.5 ಲಕ್ಷ ರೂ. ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನೇ ದಾದಿಯರು ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಸೋಮವಾರಪೇಟೆ ತಾಲೂಕಿನ ರಸೂಲ್‌ಪುರ ಗ್ರಾಮದ ಕಮಲಾರನ್ನು ಕಳೆದ ಮೇ 1ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
46 views04:18
ओपन / कमेंट
2021-05-25 07:18:08
ಪತ್ನಿಗೆ 1 ಕೆಜಿ ಚಿನ್ನದ ತಾಳಿ ಉಡುಗೊರೆ! ತನಿಖೆ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್​

ಮುಂಬೈ: ಮಹಾರಾಷ್ಟ್ರದ ಭಿವಾಂಡಿ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅನಿರೀಕ್ಷಿತ ಉಡುಗೊರೆಯೊಂದನ್ನು ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮೊಣಕಾಲು ಉದ್ದದ ಸುಮಾರು 1 ಕೆ.ಜಿ ತೂಕದ ಮಂಗಳಸೂತ್ರವನ್ನು ಪತ್ನಿಗೆ ಉಡುಗೊರೆಯಾಗಿ ನೀಡಿರುವ ಮುಂಬೈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಉಡುಗೊರೆ ನೀಡಿದ ವ್ಯಕ್ತಿಯ ಹೆಸರು ಬಾಲಾ. ವೈರಲ್​ ವಿಡಿಯೋ ಪೊಲೀಸರ ಗಮನ ಸೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬಾಲಾ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಪತ್ನಿಗೆ ನೀಡಿರುವ ಆಭರಣ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಬಾಲಾರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಆಭರಣ ಸಂಪೂರ್ಣ ಚಿನ್ನವಲ್ಲ. ಅದು ಚಿನ್ನದ ಪ್ಲೇಟ್​ ಉಳ್ಳ ಮಂಗಳಸೂತ್ರ ಎಂದು ಬಾಲಾ ಬಾಯ್ಬಿಟ್ಟಿದ್ದಾರೆ.

View full article
35 views04:18
ओपन / कमेंट
2021-05-25 07:18:05
ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?

ನವದೆಹಲಿ, ಮೇ 25: ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26ಕ್ಕೆ ಘಟಿಸಲಿದ್ದು, ಅದೇ ದಿನ ಸೂಪರ್ ಮೂನ್, ಬ್ಲಡ್ ಮೂನ್ ಎರಡೂ ವಿದ್ಯಾಮಾನವೂ ಗೋಚರವಾಗಲಿದೆ. ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 26 ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಇದು ಗೋಚರಿಸುತ್ತದೆ. ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ? ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ.

View full article
33 views04:18
ओपन / कमेंट
2021-05-25 04:18:05
ಸೂರ್ಯನ ಸುತ್ತ ಕಾಣಿಸಿಕೊಳ್ತು ಉಂಗುರ: ಖಗೋಳ ವಿಜ್ಞಾನದ ಮತ್ತೊಂದು ಕೌತುಕಕ್ಕೆ ಸಾಕ್ಷಿಯಾದ ಬೆಂಗಳೂರಿನ ಜನ

ನಭೋ ಮಂಡಲದಲ್ಲಿ ನಡೆಯುವ ವಿಸ್ಮಯಗಳು ಒಂದೆರಡಲ್ಲ. ಅನಂತ ಕೌತುಕಗಳನ್ನ ಖಗೋಳ ವಿಜ್ಞಾನ ತನ್ನ ಒಡಲಿನಲ್ಲಿ ತುಂಬಿಕೊಂಡಿದೆ.ಸೋಮವಾರ ಇಂತಹದ್ದೇ ಒಂದು ವಿಸ್ಮಯಕ್ಕೆ ಬೆಂಗಳೂರಿಗರು ಸಾಕ್ಷಿಯಾಗಿದೆ. ಮುಂಜಾನೆ ಮೂಡಿದ ಸೂರ್ಯನ ಸುತ್ತ ಉಂಗುರದ ಮಾದರಿಯ ಆಕೃತಿ ಕಾಣಿಸಿಕೊಂಡಿದ್ದು ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಸೂರ್ಯ ಈ ರೀತಿ ವಿಭಿನ್ನವಾಗಿ ಕಾಣಿಸಿಕೊಳ್ತಾ ಇದ್ದಂತೆ ಬೆಂಗಳೂರು ಮಂದಿ ಈ ಫೋಟೋವನ್ನ ಕ್ಲಿಕ್ಕಿಸಿ ಟ್ವಿಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ, ವಾಟ್ಸಾಪ್​ ಸೇರಿದಂತೆ ವಿವಿಧ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಶೇರ್​ ಮಾಡಿದ್ದಾರೆ. ಅಂದಹಾಗೆ ಕಾಮನಬಿಲ್ಲಿನಂತೆ ಕಾಣುವ ಈ ಉಂಗುರಾಕೃತಿಯನ್ನ ಖಗೋಳ ವಿಜ್ಞಾನದ ಭಾಷೆಯಲ್ಲಿ ಹ್ಯಾಲೋ ಎಂದು ಕರೆಯಲಾಗುತ್ತೆ. ವಾತಾವರಣದಲ್ಲಿನ ಮಂಜಿನ ಕಣಗಳು ಸೂರ್ಯನ ಸುತ್ತ ಒಗ್ಗೂಡುವ ಮೂಲಕ ಉಂಗುರಾಕೃತಿಯನ್ನ ರಚಿಸುತ್ತದೆ.

View full article
11 views01:18
ओपन / कमेंट
2021-05-24 19:18:09
ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 529 ಮಂದಿ ಬಲಿ, 25311 ಹೊಸ ಕೇಸ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಇಂದು ಕಿಲ್ಲರ್ ಕೊರೋನಾ ಮರಣಮೃದಂಗ ಬಾರಿಸಿದೆ. ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 529 ಪ್ರಾಣ ಕಳೆದುಕೊಂಡಿದ್ದಾರೆ, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 25311 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2450215ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 25811ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 5701 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 297 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1125253 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 11513 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

View full article
33 views16:18
ओपन / कमेंट
2021-05-24 13:18:12
ವೈರಲ್; ಲಾಕ್‌ಡೌನ್‌ ನಡುವೆ ವಿಮಾನದಲ್ಲಿ ಮದುವೆಯಾಗಿ ಸುದ್ದಿಯಾದ ಜೋಡಿ

ಚೆನ್ನೈ, ಮೇ 24: ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೇ 31ರವರೆಗೂ ಲಾಕ್‌ಡೌನ್ ವಿಸ್ತರಿಸಲಾಗಿದೆ. ಸಂಪೂರ್ಣ ಲಾಕ್‌ಡೌನ್ ಇದ್ದರೂ, ವಾರದಲ್ಲಿ ಒಂದು ದಿನ ರಿಯಾಯಿತಿ ನೀಡಿ, ವೀಕೆಂಡ್‌ನಲ್ಲಿ ರಾತ್ರಿ 9 ಗಂಟೆವರೆಗೂ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಈ ನಡುವೆ ಮೇ 23ರಂದು ವಿಮಾನದಲ್ಲಿ ಮದುವೆಯಾಗುವ ಮೂಲಕ ತಮಿಳುನಾಡಿನ ಜೋಡಿ ಸುದ್ದಿಯಾಗಿದೆ. ರಾಕೇಶ್ ಹಾಗೂ ದೀಕ್ಷನಾ ಮಧುರೈ-ತೂತುಕುಡಿ ವಿಮಾನದಲ್ಲಿ ತಮ್ಮ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮಧುರೈ ಮೂಲದ ಈ ಜೋಡಿ ಸ್ಪೈಸ್‌ ಜೆಟ್ ವಿಮಾನವನ್ನು ಬಾಡಿಗೆಗೆ ಪಡೆದುಕೊಂಡು ವಿಮಾನದಲ್ಲೇ ಮದುವೆಯಾಗಿದೆ. 130 ಅತಿಥಿಗಳು ಭಾಗವಹಿಸಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ಆಫರ್: ಅಕ್ಕ- ತಂಗಿ ಇಬ್ಬರನ್ನ ವರಿಸಿದ ಮಧುಮಗ! ದೀಕ್ಷನಾ ಹಾಗೂ ರಾಕೇಶ್ ಕಳೆದ ವಾರವೇ ಖಾಸಗಿ ಸಮಾರಂಭ ಏರ್ಪಡಿಸಿ ಮದುವೆಯಾಗಿದ್ದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
32 views10:18
ओपन / कमेंट
2021-05-24 13:18:06
ರಾಜಕೀಯದ ಜೊತೆ ಕೃಷಿ; ಇದು ಸಹೋದರರ ಯಶಸ್ಸಿನ ಕಥೆ!

ವಿಜಯನಗರ, ಮೇ 24; ಇಲ್ಲೊಬ್ಬರು ಸಕ್ರಿಯ ರಾಜಕಾರಣದ ಜೊತೆ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಬೆಳ ಬೆಳೆದು, ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಇದು ಸಹೋದರರ ಯಶಸ್ಸಿನ ಕಥೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದ ನಿವಾಸಿ ಎಸ್. ಕೃಷ್ಣ ನಾಯ್ಕ್ ಅವರದ್ದು ಮೂವರು ತಮ್ಮಂದಿರು ಇರುವ ಅವಿಭಕ್ತ ಕುಟುಂಬ. ಕೃಷ್ಣ ನಾಯ್ಕ್ ತಂದೆ ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸಿದವರು. ಇವರ ಮೂರು ಜನ ಮಕ್ಕಳಲ್ಲಿ ಕೃಷ್ಣ ನಾಯ್ಕ್ ದೊಡ್ಡವರು, ಮೂವರು ತಮ್ಮಂದಿರಲ್ಲಿ ಒಬ್ಬರು ಸರ್ಕಾರಿ ಉದ್ಯೋಗಿ. ಇನ್ನಿಬ್ಬರು ಅಣ್ಣನ ಜೊತೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

View full article
23 views10:18
ओपन / कमेंट
2021-05-24 10:18:09
ಆಮ್ಲಜನಕ ಸಿಲಿಂಡರ್‌ನಲ್ಲೇ ಅಡಗಿದೆಯಾ ಬ್ಲ್ಯಾಕ್‌ ಫಂಗಸ್?; ವೈದ್ಯರು ಬಿಚ್ಚಿಟ್ಟ ಆತಂಕಕಾರಿ ಮಾಹಿತಿ

ನವದೆಹಲಿ, ಮೇ 24: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ "ಬ್ಲ್ಯಾಕ್ ಫಂಗಸ್" ಸೋಂಕು, ಎರಡು ವಾರಗಳಿಂದೀಚೆ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಸವಾಲು ಒಡ್ಡಿದೆ. ಈ ಅಪರೂಪದ ಕಾಯಿಲೆ ಹೇಗೆ ಕೊರೊನಾ ಎರಡನೇ ಅಲೆಯಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗಿದೆ? ಇದಕ್ಕೆ ಕಾರಣವೇನು? ಕೊರೊನಾದಿಂದ ಗುಣಮುಖರಾದವರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದೇಕೆ?ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
21 views07:18
ओपन / कमेंट
2021-05-24 10:18:06
ರೈತರ ವಿಶೇಷ ಪ್ಯಾಕೇಜ್; ರಮೇಶ್ ಕುಮಾರ್ ಅಸಮಾಧಾನ

ಕೋಲಾರ, ಮೇ 24; "ಸರ್ಕಾರ ಕನಿಷ್ಠ ಪಕ್ಷ ರೈತನನ್ನು ಕರೆಸಿ ಸೌಜನ್ಯಕ್ಕಾದರೂ ಕೇಳಬೇಕಿತ್ತು. ಹಾಗಾದರೆ ರೈತನಿಗೆ ಮರ್ಯಾದೆನೇ ಇಲ್ವಾ?. ನಾವೇನು ಭಿಕ್ಷುಕರಂತೆ ಕಾಣುತ್ತೀವಾ?" ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಿದರು. ಸೋಮವಾರ ಶ್ರೀನಿವಾಸಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರೈತರ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಏಕೆ ?. ಆರ್ಥಿಕ ಸಂಕಷ್ಟದಿಂದ ಕೊಡೋಕೆ ಆಗೋದಿಲ್ಲ ಎಂದು ಹೇಳಿ" ಎಂದು ಸರ್ಕಾರದ ಕೋವಿಡ್ ವಿಶೇಷ ಪ್ಯಾಕೇಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ "ಹೆಕ್ಟೇರ್‌ಗೆ 10 ಸಾವಿರ ಪರಿಹಾರ ಕೊಟ್ಟಿರೋದು ಏನಕ್ಕೆ ಆಗುತ್ತದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
20 views07:18
ओपन / कमेंट
2021-05-24 10:18:03
ಶ್ರೀಲಂಕಾ ಕಲಾವಿದನ ಕೈಚಳಕದಲ್ಲಿ ಮೂಡಿಬಂತು ಕನ್ನಡತಿಯ ಮಾದರಿ ಗೊಂಬೆ

ವಿಶ್ವ ಸುಂದರಿ 2020ರ ಸ್ಪರ್ಧೆಯಲ್ಲಿ ಕನ್ನಡತಿ ಆಡ್ಲಿನ್​ ಕಾಸ್ಟಲಿನೋ ನಾಲ್ಕನೇ ಸ್ಥಾನ ಪಡೆದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ನಿಗಿ ಡಾಲ್ಸ್ ಎಂಬ ಇನ್​ಸ್ಟಾಗ್ರಾಂ ಪೇಜ್​ ಹೊಂದಿರುವ ಶ್ರೀಲಂಕಾದ ಕಲಾವಿದ ಆಡ್ಲಿನ್​ ಕಾಸ್ಟಲಿನೋರನ್ನ ಹೋಲುವಂತೆ ಗೊಂಬೆಯನ್ನ ಅಲಂಕರಿಸಿದ್ದು ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾದ ಗೊಂಬೆಯ ಫೋಟೋದಲ್ಲಿ ಗುಲಾಬಿ ಬಣ್ಣದ ಸೀರೆ ಹಾಗೂ ಸಾಂಪ್ರದಾಯಿಕ ಆಭರಣಗಳಿಂದ ಗೊಂಬೆಯನ್ನ ಅಲಂಕರಿಸಿರೋದು ಕಂಡು ಬರುತ್ತಿದೆ. ವಿಶ್ವ ಸುಂದರಿ ಸ್ಪರ್ಧೆಯ ಸಾಂಪ್ರದಾಯಿಕ ಉಡುಪು ಸುತ್ತಿನಲ್ಲಿ ಆಡ್ಲಿನ್​ ಕಾಸ್ಟಲಿನೋ ದೇಶವನ್ನ ಪ್ರತಿನಿಧಿಸಲು ಈ ರೂಪದಲ್ಲಿ ಕಾಣಿಸಿಕೊಂಡಿದ್ದರು. ದಾರಿಹೋಕರಿಗೆ ವ್ಯಾಪಾರಿಯಿಂದ ಉಚಿತ ಬಾಳೆಹಣ್ಣು ವೇಷಭೂಷಣವು ಮಹಿಳೆಯ ಸೌಂದರ್ಯವನ್ನ ದುಪ್ಪಟ್ಟು ಮಾಡುತ್ತೆ.

View full article
16 views07:18
ओपन / कमेंट