Get Mystery Box with random crypto!

ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 529 ಮಂದಿ ಬಲಿ, 25311 ಹೊಸ ಕೇಸ್..! | Kannada News Daily

ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 529 ಮಂದಿ ಬಲಿ, 25311 ಹೊಸ ಕೇಸ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಇಂದು ಕಿಲ್ಲರ್ ಕೊರೋನಾ ಮರಣಮೃದಂಗ ಬಾರಿಸಿದೆ. ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 529 ಪ್ರಾಣ ಕಳೆದುಕೊಂಡಿದ್ದಾರೆ, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 25311 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2450215ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 25811ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 5701 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 297 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1125253 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 11513 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

View full article