Get Mystery Box with random crypto!

ಪತ್ನಿಗೆ 1 ಕೆಜಿ ಚಿನ್ನದ ತಾಳಿ ಉಡುಗೊರೆ! ತನಿಖೆ ನಡೆಸಿದ ಪೊಲೀಸರಿಗೆ ಕಾದ | Kannada News Daily

ಪತ್ನಿಗೆ 1 ಕೆಜಿ ಚಿನ್ನದ ತಾಳಿ ಉಡುಗೊರೆ! ತನಿಖೆ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್​

ಮುಂಬೈ: ಮಹಾರಾಷ್ಟ್ರದ ಭಿವಾಂಡಿ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅನಿರೀಕ್ಷಿತ ಉಡುಗೊರೆಯೊಂದನ್ನು ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮೊಣಕಾಲು ಉದ್ದದ ಸುಮಾರು 1 ಕೆ.ಜಿ ತೂಕದ ಮಂಗಳಸೂತ್ರವನ್ನು ಪತ್ನಿಗೆ ಉಡುಗೊರೆಯಾಗಿ ನೀಡಿರುವ ಮುಂಬೈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಉಡುಗೊರೆ ನೀಡಿದ ವ್ಯಕ್ತಿಯ ಹೆಸರು ಬಾಲಾ. ವೈರಲ್​ ವಿಡಿಯೋ ಪೊಲೀಸರ ಗಮನ ಸೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬಾಲಾ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಪತ್ನಿಗೆ ನೀಡಿರುವ ಆಭರಣ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಬಾಲಾರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಆಭರಣ ಸಂಪೂರ್ಣ ಚಿನ್ನವಲ್ಲ. ಅದು ಚಿನ್ನದ ಪ್ಲೇಟ್​ ಉಳ್ಳ ಮಂಗಳಸೂತ್ರ ಎಂದು ಬಾಲಾ ಬಾಯ್ಬಿಟ್ಟಿದ್ದಾರೆ.

View full article