Get Mystery Box with random crypto!

ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ | Kannada News Daily

ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?

ನವದೆಹಲಿ, ಮೇ 25: ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26ಕ್ಕೆ ಘಟಿಸಲಿದ್ದು, ಅದೇ ದಿನ ಸೂಪರ್ ಮೂನ್, ಬ್ಲಡ್ ಮೂನ್ ಎರಡೂ ವಿದ್ಯಾಮಾನವೂ ಗೋಚರವಾಗಲಿದೆ. ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 26 ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಇದು ಗೋಚರಿಸುತ್ತದೆ. ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ? ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ.

View full article