Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 36

2021-05-27 19:18:10
ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ 'ಸೂರ್ಯ'!

ಜನ ತಮ್ಮನ್ನು ತಾವು ಹೊಗಳಿಕೊಳ್ಳಲು 'ಸೂರ್ಯನಿಗೆ ಟಾರ್ಚಾ' ಅಂತಾ ಡೈಲಾಗ್ ಹೊಡೆಯುತ್ತಾರೆ. ಆದ್ರೆ ನಾಸಾ ಆ ಡೈಲಾಗ್‌ಗೂ ಸವಾಲು ಹಾಕುವಂತೆ ಸೂರ್ಯನ ಅಧ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡಿತ್ತು. 2020ರಲ್ಲಿ 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಬಾಹ್ಯಾಕಾಶಕ್ಕೆ ಹಾರಿ, ಸೂರ್ಯನ ತಲುಪಿತ್ತು. ಈ ಉಪಗ್ರಹ ಅದೆಷ್ಟು ಶಕ್ತಿಶಾಲಿ ಎಂದರೆ, ಸೂರ್ಯನ ಕೆಂಡದಂತಹ ಜ್ವಾಲೆಗಳನ್ನೂ ಸಹಿಸಿಕೊಳ್ಳುತ್ತದೆ. ಇದೀಗ 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಸೂರ್ಯನ ಮೇಲೆ ಏಳುತ್ತಿರುವ ಭೀಕರ ಜ್ವಾಲೆಗಳ ಫೋಟೋ ಮತ್ತು ವಿಡಿಯೋ ರವಾನಿಸಿದೆ. ಸೂರ್ಯ ಭೂಮಿಗೆ ಬೆಳಕು ನೀಡುವ ದೈವ ಎನ್ನುತ್ತಾರೆ ಮಾನವರು. ಆದರೆ ಇದೇ ಸೂರ್ಯನ ಬೆಳಕು ಸ್ವಲ್ಪ ಹೆಚ್ಚಾದರೂ ನಾವೆಲ್ಲಾ ಸುಟ್ಟು ಬೂದಿಯಾಗಿ ಹೋಗುತ್ತೇವೆ. ಇದಕ್ಕೆ ಕಾರಣ ಸೂರ್ಯನ ಜ್ವಾಲೆಗಳು ಅಲಿಯಾಸ್ ಸೌರ ಜ್ವಾಲೆಗಳು.

View full article
28 views16:18
ओपन / कमेंट
2021-05-27 16:18:10
ಹಿಂಗಾದ್ರೆ ಹೆಂಗೆ: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಐಸಿಯು ಬೆಡ್ ಇಲ್ಲವೇ ಇಲ್ಲ!

ಬೆಂಗಳೂರು, ಮೇ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಆಗಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಕೇಂದ್ರ ಸಂಸ್ಥೆ ಹಾಗೂ ವಾಣಿ ವಿಲಾಸ್ ಆಸ್ಪತ್ರೆ ಹೊರತುಪಡಿಸಿ ಯಾವುದೇ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ತುರ್ತು ನಿಗಾ ಘಟಕ ಮತ್ತು ಉಸಿರಾಟ ವ್ಯವಸ್ಥೆ ಕಲ್ಪಿಸುವ ವೈದ್ಯಕೀಯ ಸೌಲಭ್ಯಗಳಿಲ್ಲ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
23 views13:18
ओपन / कमेंट
2021-05-27 13:18:10
'ಸಾರ್ವಜನಿಕ ಶಿಕ್ಷಣ ಇಲಾಖೆ'ಯಲ್ಲಿ ಸೇವೆಯಲ್ಲಿ ಇರುವಾಗಲೇ ಮೃತಪಟ್ಟ 'ಸರ್ಕಾರಿ ನೌಕರ'ರ 130 ಜನರಿಗೆ ಅನುಕಂಪದ ಆಧಾರದ ನೇಮಕಾತಿ

ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿರುವಾಗಲೇ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರಲ್ಲಿ ಒಬ್ಬರಿಗೆ ನಿಯಮಾನುಸಾರ ಅವರ ವಿದ್ಯಾರ್ಹತೆ ಪರಿಗಣಿಸಿ, 130 ಜನರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಲಾಗಿದೆ. ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿನ ರೋಗಿಗೆ ವೈಟ್ ಫಂಗಸ್ ಕಾಯಿಲೆ ಈ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮಾಹಿತಿ ಬಿಡುಗಡೆ ಮಾಡಿದ್ದು, ಸರ್ಕಾರಿ ಸೇವೆಯಲ್ಲಿರುವಾಗಲೇ ಮೃತ ಪಟ್ಟ ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರಲ್ಲಿ ಒಬ್ಬರಿಗೆ ನಿಯಮಾನುಸಾರ ಅವರ ವಿದ್ಯಾರ್ಹತೆಯನ್ನು ಪರಿಗಣಿಸಿ ಸಿ ವೃಂದದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಹೆಚ್ಚಿಲ್ಲದ ಯಾವುದಾದರೂ ಹುದ್ದೆಗೆ ನೇಮಕಾತಿ ನೀಡಬಹುದಾಗಿರುತ್ತದೆ.

View full article
38 views10:18
ओपन / कमेंट
2021-05-27 10:18:12
ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ: ಶಾಸಕ ಸುರೇಶ್ ಸ್ಪಷ್ಟೀಕರಣ

ಚಿಕ್ಕಮಗಳೂರು: ಅಪಘಾತವಾಗಿ ಅರೋಗ್ಯಾಧಿಕಾರಿ ರಸ್ತೆ ಪಕ್ಕ ಬಿದ್ದು ನರಳಾಡಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದು, ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ ಎಂದು ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ನಡೆದ ಅಪಘಾತವೊಂದರಲ್ಲಿ, ಲಕ್ಕವಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರಮೇಶ್, ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಒದ್ದಾಡಿದ್ದರು. ಆದರೆ ಅಲ್ಲೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು ಕಾರಿನಿಂದ ಇಳಿಯಲೇ ಇಲ್ಲ. ಶಾಸಕರ ಗನ್ ಮ್ಯಾನ್ ಕಾರಿನಿಂದ ಇಳಿದು ಬಂದರೂ ಶಾಸಕರು ಮಾತ್ರ ಕಾರಿನಿಂದ ಇಳಿದು ಸಹಾಯ ಮಾಡುವ ಮನಸು ಮಾಡಲೇ ಇಲ್ಲ! ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದರಿಂದ ಘಟನೆ ಕುರಿತು ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದಾರೆ.

View full article
51 views07:18
ओपन / कमेंट
2021-05-27 10:18:08
Cryptocurrency Rate : ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಮೇ 27ರ ಬೆಲೆ ಇಲ್ಲಿದೆ

ಕ್ರಿಪ್ಟೋ ಕರೆನ್ಸಿಯು ಸದ್ಯ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಡಿಜಿಟಲ್ ರೂಪದ ಕರೆನ್ಸಿಯನ್ನು ನಿಷೇಧಿಸಿವೆ. ಆದರೂ ಹಲವು ರಾಷ್ಟ್ರಗಳಲ್ಲಿ ಕ್ರಿಪ್ಟೋಕರೆನ್ಸಿಗೆ ಸಾಕಷ್ಟು ಬೇಡಿಕೆಯಿದ್ದು, ಅನೇಕರು ಇದರಿಂದ ಲಾಭಗಳಿಸಿದ್ರೆ, ನಷ್ಟ ಅನುಭವಿಸಿರುವವರು ಹೆಚ್ಚಿದ್ದಾರೆ. ಪ್ರಪಂಚದ ಅನೇಕ ದೇಶಗಳ ಸರ್ಕಾರಗಳ ಕಟ್ಟುನಿಟ್ಟಿನಿಂದಾಗಿ, ಅನೇಕ ಕ್ರಿಪ್ಟೋಕರೆನ್ಸಿಗಳ ಜೊತೆಗೆ ಬಿಟ್‌ಕಾಯಿನ್‌ನ ದರಗಳು ಸಂಪೂರ್ಣವಾಗಿ ಕುಸಿದಿವೆ.

View full article
47 views07:18
ओपन / कमेंट
2021-05-27 10:18:06
ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಂದ ಪ್ರಧಾನಿ ಮೋದಿಗೆ ಮನವಿ

ಜೈಪುರ, ಮೇ 27: ಪಾಕಿಸ್ತಾನದಿಂದ ಬಂದಿರುವ ಹಿಂದೂಳಿಗೆ ಕೊರೊನಾ ಲಸಿಕೆ ನಿರಾಕರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಾಗಿದೆ. ಭಾರತದ ಪ್ರಜೆಗಳ ಪೈಕಿ 18 ವಯಸ್ಸಿನ ಮೆಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದರೆ, ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಗೆ ರಾಜಸ್ಥಾನದಲ್ಲಿ ಲಸಿಕೆಯನ್ನು ನಿರಾಕರಿಸಲಾಗುತ್ತಿದೆ. ಭಾರತದಲ್ಲಿ ಕಂಡುಬಂದಿರುವ ಕೊರೊನಾ ತಳಿ ಮೇಲೆ ಲಸಿಕೆ ಪ್ರಭಾವ ಬೀರಲಿದೆ: ಫೈಜರ್ ಶ್ಯಾಮ್ ಹಿರಾಣಿ ಪಾಕಿಸ್ತಾನ 2009 ನಲ್ಲಿ ಸಿಂಧ್ ಪ್ರಾಂತ್ಯದಿಂದ ಜೋಧ್ ಪುರಕ್ಕೆ ವಲಸೆ ಬಂದಿದ್ದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
44 views07:18
ओपन / कमेंट
2021-05-27 07:18:11
ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ ಮತ್ತು ಚಿಕಿತ್ಸೆಗೆ ಮಾರ್ಗಸೂಚಿ

ಬೆಂಗಳೂರು, ಮೇ 26: ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ಜನರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕ ಸರ್ಕಾರ ಕಪ್ಪು ಶಿಲೀಂಧ್ರ ರೋಗಿಗಳ ಚಿಕಿತ್ಸೆಗೆ ಸೂಕ್ತ ನೀತಿಯನ್ನು ರೂಪಿಸುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ದೇಶದ ಎಲ್ಲ ರಾಜ್ಯ ಸರ್ಕಾರಗಳು ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ರೋಗಿಗಳ ಪರೀಕ್ಷೆ, ತಪಾಸಣೆ ಮತ್ತು ರೋಗ ನಿರ್ಣಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಈಗಾಗಲೇ ಸಲಹೆ ನೀಡಿದೆ.

View full article
53 views04:18
ओपन / कमेंट
2021-05-27 07:18:08
ಕೋವಿಡ್ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ದಂಪತಿ ಮಸ್ತ್ ಡ್ಯಾನ್ಸ್

ದಾವಣಗೆರೆ, ಮೇ 27: ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಆತಸ್ಥೈರ್ಯ ತುಂಬಲು ಹೊನ್ನಾಳಿ ಶಾಸಕ ಎಂ.‌ಪಿ ರೇಣುಕಾಚಾರ್ಯ ಮತ್ತು ಅವರ ಪತ್ನಿ ನೃತ್ಯ ಮಾಡಿ ಹುರಿದುಂಬಿಸಿದರು. ನ್ಯಾಮತಿ ತಾಲ್ಲೂಕಿನ ಮಾದನಬಾವಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ 180 ಕೋವಿಡ್ ಸೋಂಕಿತರಿದ್ದು, ಶಾಸಕ ರೇಣುಕಾಚಾರ್ಯ ಮತ್ತು ಅವರ ಪತ್ನಿ ಸುಮಾ ರೇಣುಕಾಚಾರ್ಯ ಸತ್ಯಹರಿಶ್ಚಂದ್ರ ಚಿತ್ರದ "ಕುಲದಲ್ಲಿ ಮೇಲಾವುದೋ ಹುಚ್ಚಪ್ಪಾ' ಹಾಡಿಗೆ ಸಖತ್ ಸ್ಟೆಪ್ ಹಾಕಿ ಮನರಂಜಿಸಿದರು. ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್ ಬುಧವಾರ ರಾತ್ರಿಯೂ ಸಹ ಶಿವಮೊಗ್ಗ ಆರ್ಕೆಸ್ಟ್ರಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

View full article
45 views04:18
ओपन / कमेंट
2021-05-27 07:18:05
ಮುಚ್ಚುವ ಭೀತಿಯಲ್ಲಿದೆ, ಬಡವರ ಶಾಲೆ ಎಂದೆನಿಸಿಕೊಂಡಿದ್ದ ಬೆಂಗಳೂರು ಹೈಸ್ಕೂಲ್

ಬೆಂಗಳೂರು, ಮೇ 27: ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಸೇರಿದಂತೆ ಬೆಂಗಳೂರಿನ ಹಲವು ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಒಂದು ಕಾಲದಲ್ಲಿ ಬಡ ಮಕ್ಕಳ ಶಾಲೆ ಎಂದೇ ಹೆಸರು ವಾಸಿಯಾಗಿದ್ದ ಬೆಂಗಳೂರು ಹೈಸ್ಕೂಲ್(ಬಿಎಚ್‌ಎಸ್) ಇದೀಗ ಮುಚ್ಚುವ ಭೀತಿ ಎದುರಿಸುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ರಾಜಧಾನಿಯ ಅತ್ಯಂತ ಹಳೆಯ ಕನ್ನಡ ಶಾಲೆ ಜಯನಗರದಲ್ಲಿರುವ ಈ ಶಾಲೆಯನ್ನು 1942ರಲ್ಲಿ ಪ್ರಾರಂಭಿಸಲಾಗಿತ್ತು, ಬಡ ಮಕ್ಕಳಿಗೆಂದೇ ಶುರು ಮಾಡಿದ್ದ ಶಾಲೆ ಇದಾಗಿತ್ತು.

View full article
40 views04:18
ओपन / कमेंट
2021-05-27 04:18:10
ಯಸ್‌ ಚಂಡಮಾರುತದ ಪರಿಣಾಮ: ನಿಲ್ಲದ ಮಳೆ; ಉಕ್ಕೇರಿದ ನದಿಗಳು

ಕೋಲ್ಕತ್ತ: ಯಸ್‌ ಚಂಡಮಾರುತದ ಪರಿಣಾಮ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿದೆ. ಭದ್ರಕ ಜಿಲ್ಲೆಯ ಚಾಂದ್‌ಬಾಲಿಯಲ್ಲಿ 288.3 ಮಿ.ಮೀ. ಮಳೆಯಾಗಿದೆ ಎಂದು ಭುವನೇಶ್ವರದಲ್ಲಿರುವ ಹವಾಮಾನ ಕೇಂದ್ರ ತಿಳಿಸಿದೆ. ರಾಜ್ಯದ ಒಟ್ಟು 314ರಲ್ಲಿ 36 ತಾಲ್ಲೂಕುಗಳಲ್ಲಿ ಕನಿಷ್ಠ 110 ಮಿ.ಮೀ.ನಿಂದ ಗರಿಷ್ಠ 304 ಮಿ.ಮೀ.ನಷ್ಟು ಮಳೆಯಾಗಿದೆ. 37 ತಾಲ್ಲೂಕುಗಳಲ್ಲಿ 50ರಿಂದ 100 ಮಿ.ಮೀ. ನಷ್ಟು ಮಳೆಯಾಗಿದೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೇನ ತಿಳಿಸಿದ್ದಾರೆ. ಮುಂದಿನ 48 ಗಂಟೆಗಳ ಅವಧಿಗೆ ಒಂಬತ್ತು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ತೆರವು ಕೆಲಸ ಆರಂಭ: ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಸಮಗೊಂಡಿದ್ದು, ಅವುಗಳನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

View full article
27 views01:18
ओपन / कमेंट