Get Mystery Box with random crypto!

ಕೋವಿಡ್ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ದಂಪತಿ ಮಸ್ತ್ ಡ್ಯಾನ್ಸ್ ದಾ | Kannada News Daily

ಕೋವಿಡ್ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ದಂಪತಿ ಮಸ್ತ್ ಡ್ಯಾನ್ಸ್

ದಾವಣಗೆರೆ, ಮೇ 27: ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಆತಸ್ಥೈರ್ಯ ತುಂಬಲು ಹೊನ್ನಾಳಿ ಶಾಸಕ ಎಂ.‌ಪಿ ರೇಣುಕಾಚಾರ್ಯ ಮತ್ತು ಅವರ ಪತ್ನಿ ನೃತ್ಯ ಮಾಡಿ ಹುರಿದುಂಬಿಸಿದರು. ನ್ಯಾಮತಿ ತಾಲ್ಲೂಕಿನ ಮಾದನಬಾವಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ 180 ಕೋವಿಡ್ ಸೋಂಕಿತರಿದ್ದು, ಶಾಸಕ ರೇಣುಕಾಚಾರ್ಯ ಮತ್ತು ಅವರ ಪತ್ನಿ ಸುಮಾ ರೇಣುಕಾಚಾರ್ಯ ಸತ್ಯಹರಿಶ್ಚಂದ್ರ ಚಿತ್ರದ "ಕುಲದಲ್ಲಿ ಮೇಲಾವುದೋ ಹುಚ್ಚಪ್ಪಾ' ಹಾಡಿಗೆ ಸಖತ್ ಸ್ಟೆಪ್ ಹಾಕಿ ಮನರಂಜಿಸಿದರು. ವಿಡಿಯೋ ವೈರಲ್: ಕೊರೊನಾ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ಸಖತ್ ಡ್ಯಾನ್ಸ್ ಬುಧವಾರ ರಾತ್ರಿಯೂ ಸಹ ಶಿವಮೊಗ್ಗ ಆರ್ಕೆಸ್ಟ್ರಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

View full article