Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 34

2021-05-29 13:18:07
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಶಂಕಿತರ ಜಾಮೀನು ಅರ್ಜಿಗೆ ಎಸ್ ಐಟಿ ಆಕ್ಷೇಪ

ಬೆಂಗಳೂರು, ಮೇ. 29: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಶಂಕಿತ ಆರೋಪಿಗಳಾದ ಶ್ರವಣ್ ಮತ್ತು ನರೇಶ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ ಅಧಿಕಾರಿಗಳು ಪೂರ್ವ ಸಿದ್ಧತೆ ನಡೆಸಿದ್ದಾರೆ. ತಾಂತ್ರಿಕ ಕಾರಣದಿಂದಾಗಿ ಶನಿವಾರ ಸಲ್ಲಿಸಬೇಕಿದ್ದ ಆಕ್ಷೇಪಣೆ ಅರ್ಜಿಯನ್ನು ಸೋಮವಾರ ಸಲ್ಲಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಎಸ್‌ಐಟಿ ತನಿಖೆಯಲ್ಲಿ ಹನಿಟ್ರ್ಯಾಫ್ ಗೆ ಸಂಬಂಧಿಸಿದಂತೆ ಎಸ್‌ಐಟಿ ಕಲೆಹಾಕಿರುವ ಸಿಸಿಟಿವಿ ದೃಶ್ಯಗಳು, ದಾಖಲೆಗಳನ್ನು ಆಧರಿಸಿ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅಶ್ಲೀಲ ಸಿಡಿ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲಾಕ್ ಮೇಲ್ ದೂರು ದಾಖಲಿಸಿದ್ದರು.

View full article
39 views10:18
ओपन / कमेंट
2021-05-29 13:18:04
ಒಂದೇ ವ್ಯಕ್ತಿ 2 ಪ್ರತ್ಯೇಕ ಕೊರೊನಾ ಲಸಿಕೆ ಪಡೆದರೆ ಆಗುವ ಪರಿಣಾಮವೇನು?

ನವದೆಹಲಿ, ಮೇ 29: ಉತ್ತರ ಪ್ರದೇಶದಲ್ಲಿ ಹಳ್ಳಿಯೊಂದಲ್ಲಿ ಬಹುತೇಕ ಮಂದಿಗೆ ಎರಡು ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ನೀಡಿರುವ ವಿಚಾರ ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೋವಿಡ್​ ವಿರುದ್ಧ ಹೋರಾಟದ ವಿರುದ್ಧ ಸದ್ಯ ದೇಶದಲ್ಲಿ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಅವು ಒಂದು ಕೋವಿಶೀಲ್ಡ್​ ಮತ್ತೊಂದು ಕೋವಾಕ್ಸಿನ್​. ಎರಡು ಡೋಸ್​ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಈ ನಡುವೆ ಬಹುತೇಕರಿಗೆ ಇರುವ ಅನುಮಾನ ಎಂದರೆ ಮೊದಲ ಡೋಸ್​ನಲ್ಲಿ ಒಂದು ಲಸಿಕೆ ಮತ್ತೊಂದು ಡೋಸ್​ನಲ್ಲಿ ಬೇರೆ ಕಂಪನಿಯ ಲಸಿಕೆ ಪಡೆಯಬಹುದೇ ಎಂಬುದು. ಒಂದೇ ವ್ಯಕ್ತಿಗೆ 2 ಬಗೆಯ ಲಸಿಕೆ ಇದೇನಿದು ಯುಪಿ ಸರ್ಕಾರದ ಎಡವಟ್ಟು? ಲಸಿಕೆ ಕೊರತೆ ಇರುವ ಹಿನ್ನಲೆ ಅನೇಕರು ಕೂಡ ಈ ರೀತಿ ಎರಡು ವಿಭಿನ್ನ ಲಸಿಕೆ ಪ್ರಯೋಗ ನಡೆಸುವ ಕುರಿತು ಚಿಂತನೆ ನಡೆಸಿದ್ದರು.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
36 views10:18
ओपन / कमेंट
2021-05-29 10:18:11
ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಕಿಡಿ

ಮೈಸೂರು, ಮೇ 29: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯವೈಖರಿ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ, ಇದೀಗ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಹ ಡಿಸಿ ವಿರುದ್ಧ ಕಿಡಿಕಾರಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಹಾಗೂ ಬಿಜೆಪಿ ನಾಯಕರ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ರೋಹಿಣಿ ಸಿಂಧೂರಿ ಕಾರ್ಯವೈಖರಿಯ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಹ ಆಕ್ರೋಶಗೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಶಾಸಕರು, ಸಂಸದರು ಹೇಳುವ ಮಾತನ್ನು ನಾನೂ ಕೇಳಬೇಕು, ಬೇರೆಯವರು ಕೇಳಬೇಕು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳಿಗೆ ಹೇಳುವ ಅಧಿಕಾರ ಇದೆ. ಪಾಲಿಸುವ ಬದ್ಧತೆ ನನಗೂ ಇದೆ, ಅಧಿಕಾರಿಗಳೂ ಸಹ ಇದನ್ನು ಪಾಲಿಸಬೇಕು ಎಂದು ಸಚಿವ ಸೋಮಶೇಖರ್ ಹೇಳಿದರು.

View full article
54 views07:18
ओपन / कमेंट
2021-05-29 10:18:06
ಬಾಂಗ್ಲಾ ಯುವತಿ ಕೇರಳಗೆ ಹೋಗುವ ಮೊದಲೇ ಪೊಲೀಸರಿಗೆ "ಲಾಕ್" ಆಗಿದ್ದಳು!

ಬೆಂಗಳೂರು, ಮೇ. 28: ಇಡೀ ರಾಷ್ಟ್ರದಲ್ಲಿ ಬೆಂಗಳೂರು ಮಾನ ಹರಾಜು ಹಾಕಿದ ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣದ ಕೆಲವು ರೋಚಕ ಸತ್ಯಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾರ್ ಡಾನ್ಸರ್ ಆಗಿದ್ದ 22 ವರ್ಷದ ಸಂತ್ರಸ್ತ ಯುವತಿ ಹೈದರಾಬಾದ್ ನಿಂದ ಕೇರಳ ವರೂ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ! ಇನ್ನೊಂದು ರೋಚಕ ಸಂಗತಿ ಅಂದರೆ ಘಟನೆ ನಡೆದ ದಿನವೇ ಬಾಂಗ್ಲಾದೇಶದ ಸಂತ್ರಸ್ತ ಯುವತಿ ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಸಮಯದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಕೆ.

View full article
46 views07:18
ओपन / कमेंट
2021-05-29 10:18:04
ಜನರ ಸೇವೆಗೆ ನಿಂತ‌ ಕಲಾಲ ಸಹೋದರರು: ಪ್ರತಿಮನೆಗೂ ಕಿಟ್ ವಿತರಣೆ

ಗಂಗಾವತಿ: ಜನಿಸಿದ ಊರು ಸ್ವರ್ಗಕ್ಕೆ ಸಮ ಎಂದು ಹೇಳಲಾಗುತ್ತದೆ. ತಾಲೂಕಿನ ಮಲ್ಲಾಪೂರದಲ್ಲಿ ಜನಿಸಿದ ನಾಲ್ವರು ಕಲಾಲ ಸಹೋದರರು ಇಡೀ ಊರಿಗೆ ಆಹಾರದ ಕಿಟ್ ವಿತರಿಸಿ ಸಾರ್ಥಕ ಸೇವೆ ಮಾಡಿದ್ದಾರೆ. ಮಲ್ಲಾಪೂರ ಗ್ರಾಮದ ಮೂಲ ನಿವಾಸಿಗಳಾದ ಮಂಜುನಾಥ ಕಲಾಲ, ಸಿದ್ದೋಜಿರಾವ್ ಕಲಾಲ, ಮಲ್ಲಿಕಾರ್ಜುನ ಕಲಾಲ, ಪರಶುರಾಮ ಕಲಾಲ ಸಹೋದರರು ತೀವ್ರ ಬಡತನದಿಂದ ದುಡಿಯಲು ಹೊಸಪೇಟೆಯ ಜಿಂದಾಲ್ ತೋರಣಗಲ್ಲು ಗ್ರಾಮಕ್ಕೆ ತೆರಳಿ ಅಲ್ಲಿ ಉದ್ಯಮ ನಡೆಸಿದ್ದಾರೆ. ಆದರೂ ಜನಿಸಿದ ಊರನ್ನು ಕಲಾಲ ಸಹೋದರರು ಎಂದಿಗೂ ಮರೆತಿಲ್ಲ. ಪ್ರತಿವರ್ಷ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಪ್ರೌಢಶಾಲೆಗೆ ಡಿಜಿಟಲ್ ಬೋರ್ಡ್ ಕಂಪ್ಯೂಟರ್ ವಿತರಣೆ ಮಾಡಿದ್ದಾರೆ. ಇದೀಗ ಲಾಕ್ ಡೌನ್ ಸಂಕಷ್ಟದಲ್ಲಿ ಮಲ್ಲಾಪೂರ-ರಾಂಪೂರ ಗ್ರಾಮದ ಪ್ರತಿ ಮನೆಗೂ ಅಕ್ಕಿ ಬೇಳೆ ಸೇರಿ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

View full article
42 views07:18
ओपन / कमेंट
2021-05-29 07:18:11
ವಾಹನ ಸವಾರರಿಗೆ ಶಾಕ್‌: ಮತ್ತಷ್ಟು ಎತ್ತರಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ದರ

ದಿನೇ ದಿನೇ ತೈಲ ದರಗಳು ಗಗನಕ್ಕೇರುತ್ತಿದ್ದು, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಶನಿವಾರ (ಮೇ 29) ಪೆಟ್ರೋಲ್, ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ. ಈ ಮೂಲಕ ಮುಂಬೈ, ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂಪಾಯಿ ಗಡಿದಾಟಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ತೈಲ ದರ ಏರಿಕೆ ವಾಹನಸವಾರರ ಚಿಂತೆಗೆ ಕಾರಣವಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆ ಏರಿಕೆಗೊಂಡು 93.94 ರೂಪಾಯಿ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 28 ಪೈಸೆ ಹೆಚ್ಚಾಗಿ 84.61 ರೂಪಾಯಿಗೆ ಮುಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
55 views04:18
ओपन / कमेंट
2021-05-29 07:18:09
ಇಟ್ಟಿಗೆ ಗೂಡಿನಲ್ಲಿ ಇಟ್ಟಿಗೆ ಹೊರುತ್ತಿದ್ದ ಅಂತಾರಾಷ್ಟ್ರೀಯ ಫುಟ್ ಬಾಲ್ ಆಟಗಾರ್ತಿ

ಭಾರತದಲ್ಲಿ ಅನೇಕ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಿದರೂ ಕ್ರಿಕೆಟ್ ಆಟಗಾರರಂತೆ ಮಿಂಚುವುದು ಕಡಿಮೆ. ಎಷ್ಟು ದೊಡ್ಡ ಸಾಧನೆ ಮಾಡಿದರೂ ಬಹಳಷ್ಟು ಸಲ ಜನರ ಮನ್ನಣೆ ಸಿಗುವುದಿಲ್ಲ. ಕ್ರಿಕೆಟ್ ನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿದರೂ ಸಿಗುವ ಮರ್ಯಾದೆ ಬೇರೆ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆಗೆ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಇಂತಹ ದೊಡ್ಡ ಸಾಧನೆ ಮಾಡಿದ ಆಟಗಾರರು ಕೆಲವೊಮ್ಮೆ ಹೊಟ್ಟೆ ಪಾಡಿಗಾಗಿ ಕಷ್ಟ ಪಡುವುದೂ ಇದೆ. ಫುಟ್ ಬಾಲ್ ಕ್ರೀಡೆಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ, ಲಿಯೋನೆಲ್ ಮೆಸ್ಸಿಗೆ ಸಾಕಷ್ಟು ಅಭಿಮಾನಿಗಳು ಭಾರತದಲ್ಲಿದ್ದಾರೆ. ಆದರೆ ಹೆಚ್ಚಿನವರಿಗೆ ಸುನೀಲ್ ಚೆತ್ರಿ ಬಿಟ್ಟರೆ ಬೇರೆ ಭಾರತೀಯ ಫುಟ್ ಬಾಲ್ ಆಟಗಾರನ ಹೆಸರೂ ಗೊತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಹಿಳಾ ಫುಟ್ ಬಾಲ್ ಭಾರತದಲ್ಲಿನ್ನೂ ಪ್ರಸಿದ್ದಿಯ ಮಟ್ಟದಲ್ಲಿ ತುಂಬಾ ಕೆಳ ಸ್ಥರದಲ್ಲಿದೆ ಎನ್ನಬಹುದು.

View full article
51 views04:18
ओपन / कमेंट
2021-05-29 07:18:04
ಚಿನ್ನದ ಬೆಲೆ ಮತ್ತಷ್ಟು ಕುಸಿತ: 10 ಗ್ರಾಂ ಎಷ್ಟು ರೂಪಾಯಿ ಇಳಿಕೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಎರಡನೇ ದಿನ ಇಳಿಕೆಗೊಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 46,700 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,700 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 600 ರೂಪಾಯಿ ಏರಿಕೆಗೊಂಡು 72,000 ರೂಪಾಯಿ ದಾಖಲಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ. ರಾಜ್ಯದ ಪ್ರಮುಖ ನಗರಗಳು ನಗರ: ಬೆಂಗಳೂರು 22ಕ್ಯಾರೆಟ್ ಚಿನ್ನ ರೂ.

View full article
46 views04:18
ओपन / कमेंट
2021-05-29 07:18:03
ಪ್ರಧಾನಿಯನ್ನೇ 30 ನಿಮಿಷ ಕಾಯಿಸಿ ದುರಹಂಕಾರ ತೋರಿದ ಮಮತಾ ಬ್ಯಾನರ್ಜಿ

ನವದೆಹಲಿ, ಮೇ 29:ಯಾಸ್ ಚಂಡಮಾರುತದಿಂದ ಹಾನಿಗೊಳಗಾಗಿರುವ ಪಶ್ಚಿಮ ಬಂಗಾಳದ ಪ್ರದೇಶಗಳ ಪರಿಸ್ಥಿತಿ ಪರಿಶೀಲಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು 30 ನಿಮಿಷಗಳ ಕಾಲ ಕಾಯುವಂತೆ ಮಾಡಿ ಮಮತಾ ಬ್ಯಾನರ್ಜಿ ದುರಹಂಕಾರ ಪ್ರದರ್ಶಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಾಂಕರ್ ಅವರನ್ನು ಅರ್ಧ ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡುಮಾರುತದಿಂದ ಆದ ಹಾನಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಮೋದಿ ಬಂಗಾಳದ ಕಲಾಯಿಕುಂಡ್ ವಾಯುನೆಲೆಗೆ ಬಂದಾಗ, ಮಮತಾ ಬ್ಯಾನರ್ಜಿ ಕಾಯಿಸಿರುವುದಾಗಿ ಹೇಳಲಾಗಿದೆ. ಬ್ಯಾನರ್ಜಿ ತನ್ನ ಸಭೆಯ ಬಗ್ಗೆ ಕೇಂದ್ರಕ್ಕೆ ತಿಳಿಸಿದ್ದರು.ಆದರೆ, ಅವರನ್ನು ವಾಯುನೆಲೆಯಲ್ಲಿ ಪ್ರಧಾನಿಯವರಿಗಾಗಿ ಕಾಯುವಂತೆ ಮಾಡಲಾಗಿತ್ತು.

View full article
46 views04:18
ओपन / कमेंट
2021-05-29 04:18:11
ಲೋಕಲ್ ಸರ್ಕಲ್ಸ್ ಸಮೀಕ್ಷೆ ವರದಿ: ಮೋದಿ ಸರ್ಕಾರದ ಜನಪ್ರಿಯತೆ ಕುಸಿತ

'ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರ್ಕಾರದ ಜನಪ್ರಿಯತೆ ಕುಗ್ಗಿದೆ. 2020ಕ್ಕೆ ಹೋಲಿಸಿದರೆ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯಲ್ಲಿ 11 ಶೇಕಡಾವಾರು ಅಂಶಗಳಷ್ಟು ಇಳಿಕೆಯಾಗಿದೆ. ಕೋವಿಡ್‌ನ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾದದ್ದೇ ಜನಪ್ರಿಯತೆ ಇಳಿಕೆಗೆ ಕಾರಣ' ಎಂದು ಲೋಕಲ್ ಸರ್ಕಲ್ಸ್‌ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. 70 ಸಾವಿರ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. 1.69 ಲಕ್ಷ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇವುಗಳ ಆಧಾರದ ಮೇಲೆ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ * ಕೋವಿಡ್‌ ಮೊದಲ ಅಲೆಯನ್ನು ಸರ್ಕಾರ ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಶೇ 66ರಷ್ಟು ಜನರು ಹೇಳಿದ್ದಾರೆ * ಕೋವಿಡ್‌ ಲಸಿಕೆ ಕಾರ್ಯಕ್ರಮವನ್ನು ಸರ್ಕಾರವು ಉತ್ತಮವಾಗಿ ನಿರ್ವಹಣೆ ಮಾಡಿದೆ ಎಂದು ಶೇ 55ರಷ್ಟು ಜನರು ಹೇಳಿದ್ದಾರೆ * ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶೇ 61ರಷ್ಟು ಜನರು ಹೇಳಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
59 views01:18
ओपन / कमेंट