ಒಂದೇ ವ್ಯಕ್ತಿ 2 ಪ್ರತ್ಯೇಕ ಕೊರೊನಾ ಲಸಿಕೆ ಪಡೆದರೆ ಆಗುವ ಪರಿಣಾಮವೇನು? ನವದೆಹಲಿ, ಮೇ 29: ಉತ್ತರ ಪ್ರದೇಶದಲ್ಲಿ ಹಳ್ಳಿಯೊಂದಲ್ಲಿ ಬಹುತೇಕ ಮಂದಿಗೆ ಎರಡು ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ನೀಡಿರುವ ವಿಚಾರ ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೋವಿಡ್ ವಿರುದ್ಧ ಹೋರಾಟದ ವಿರುದ್ಧ ಸದ್ಯ ದೇಶದಲ್ಲಿ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಅವು ಒಂದು ಕೋವಿಶೀಲ್ಡ್ ಮತ್ತೊಂದು ಕೋವಾಕ್ಸಿನ್. ಎರಡು ಡೋಸ್ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಈ ನಡುವೆ ಬಹುತೇಕರಿಗೆ ಇರುವ ಅನುಮಾನ ಎಂದರೆ ಮೊದಲ ಡೋಸ್ನಲ್ಲಿ ಒಂದು ಲಸಿಕೆ ಮತ್ತೊಂದು ಡೋಸ್ನಲ್ಲಿ ಬೇರೆ ಕಂಪನಿಯ ಲಸಿಕೆ ಪಡೆಯಬಹುದೇ ಎಂಬುದು. ಒಂದೇ ವ್ಯಕ್ತಿಗೆ 2 ಬಗೆಯ ಲಸಿಕೆ ಇದೇನಿದು ಯುಪಿ ಸರ್ಕಾರದ ಎಡವಟ್ಟು? ಲಸಿಕೆ ಕೊರತೆ ಇರುವ ಹಿನ್ನಲೆ ಅನೇಕರು ಕೂಡ ಈ ರೀತಿ ಎರಡು ವಿಭಿನ್ನ ಲಸಿಕೆ ಪ್ರಯೋಗ ನಡೆಸುವ ಕುರಿತು ಚಿಂತನೆ ನಡೆಸಿದ್ದರು.ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್‌ಡೇಟ್ಸ್ ಓದಿ
View full article