Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 37

2021-05-26 19:18:12
ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 530 ಮಂದಿ ಬಲಿ, 26811 ಹೊಸ ಕೇಸ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಇಂದು ಕಿಲ್ಲರ್ ಕೊರೋನಾ ಮರಣಮೃದಂಗ ಬಾರಿಸಿದೆ. ರಾಜ್ಯದಾದ್ಯಂತ ಕಳೆದ 24 ಗಂಟೆಯಲ್ಲಿ 530 ಪ್ರಾಣ ಕಳೆದುಕೊಂಡಿದ್ದಾರೆ, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 26811 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2499784ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 26929ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 6433 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 285 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1137929 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 12148 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

View full article
22 views16:18
ओपन / कमेंट
2021-05-26 19:18:09
ವೈರಿಗಳ ಸಮ್ಮಿಲನಕ್ಕೆ ಮುಹೂರ್ತ ಫಿಕ್ಸ್, ಅಮೆರಿಕ-ರಷ್ಯಾ ಮಾತುಕತೆಗೆ ಸಿದ್ಧತೆ!

ಅವನೊಬ್ಬ ಕೊಲೆಗಾರ, ಅವನೊಬ್ಬ ಮೋಸಗಾರ, ಅವನಿಂದ ನಮ್ಮ ದೇಶದ ಚುನಾವಣೆಯಲ್ಲಿ ಬೇರೆಯವರ ಹಸ್ತಕ್ಷೇಪ ಆಗಿತ್ತು. ಹೀಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಬೈಡನ್ ಮಾಡಿರುವ ಆರೋಪಗಳು ಒಂದೆರಡಲ್ಲ. ಅದರಲ್ಲೂ ಪುಟಿನ್ ಒಬ್ಬ ಕೊಲೆಗಾರ ಎಂದು ಬೈಡನ್ ಹೇಳಿದ್ದು ಅಮೆರಿಕ-ರಷ್ಯಾ ಸಂಬಂಧಕ್ಕೆ ಕೊಳ್ಳಿ ಇಟ್ಟಿತ್ತು. ಆದರೆ ಕಿಚ್ಚು ತಣ್ಣಗಾಗುವ ಸಮಯ ಬಂದಿದ್ದು, ಮುಂದಿನ ತಿಂಗಳು 16ಕ್ಕೆ ಅಂದರೆ ಜೂನ್‌ 16ರಂದು ಪುಟಿನ್ ಹಾಗೂ ಬೈಡನ್ ಭೇಟಿಯಾಗಲಿದ್ದಾರೆ. ಸ್ವಿಜರ್ಲ್ಯಾಂಡ್‌ನ ಜಿನೀವಾ ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ. ಜಿನೀವಾದಲ್ಲಿ ನಡೆಯಲಿರುವ ಶೃಂಗಸಭೆಯ ಹಿನ್ನೆಲೆಯಲ್ಲಿ ಪುಟಿನ್ ಮತ್ತು ಜೋ ಬೈಡನ್ ಅಲ್ಲಿಗೆ ತೆರಳಲಿದ್ದಾರೆ. ಇದೇ ವೇಳೆ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಲು ಒಪ್ಪಿದ್ದಾರೆಂದು ವೈಟ್‌ಹೌಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

View full article
17 views16:18
ओपन / कमेंट
2021-05-26 19:18:08
ಸತ್ತವರಿಗೂ ಸಿಗುತ್ತೆ ಸಂಬಳ, ಟಾಟಾ ಸಂಸ್ಥೆ ಮತ್ತೊಮ್ಮೆ ಮಾದರಿ

ಉದ್ಯೋಗಿಗಳಿಗೆ ಸಕಲ ಸೌಲಭ್ಯವನ್ನು ಒದಗಿಸುವ ಟಾಟಾ ಸಂಸ್ಥೆ, ನೌಕರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೆ. ಹೀಗಾಗಿಯೇ ಟಾಟಾ ಎಂದರೆ ಜಗತ್ತಿನಾದ್ಯಂತ ಹೆಸರುವಾಸಿ. ಅದ್ರಲ್ಲೂ ಕೊರೊನಾ ಕಂಟಕದ ಸಂದರ್ಭದಲ್ಲಿ ಟಾಟಾ ಸಂಸ್ಥೆ ಇಂತಹದ್ದೇ ಜನಮೆಚ್ಚುವ ನಿರ್ಧಾರ ಕೈಗೊಂಡಿದೆ. ಜೆಮ್​ಶೆಡ್​ಪುರದ ಉಕ್ಕು ಅಥವಾ ಸ್ಟೀಲ್​ ತಯಾರಿಕಾ ಘಟಕ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಟಾಟಾ ಸಂಸ್ಥೆಯ ಈ ಘಟಕದಲ್ಲಿ ಕಂಪನಿಯ ಯಾವುದೇ ಉದ್ಯೋಗಿ ಕೊರೊನಾ​ ಸೋಂಕಿಗೆ ಬಲಿಯಾದ್ರೆ ಮೃತಪಟ್ಟ ಉದ್ಯೋಗಿಗೆ ನೀಡುತ್ತಿದ್ದ ಸಂಬಳವನ್ನ ಅವರ ಕುಟುಂಬಕ್ಕೆ ನೀಡಲಿದೆ ಟಾಟಾ ಸಂಸ್ಥೆ. ಹೀಗೆ ನೌಕರ ಮೃತಪಟ್ಟರೂ ಆತನ ಸಂಬಳ ಆತನ ಕುಟುಂಬದ ಕೈಸೇರುವಂತೆ ಮಾಡಲು ಟಾಟಾ ಸ್ಟೀಲ್​ ಮಹತ್ವ ನಿರ್ಧಾರವನ್ನು ಕೈಗೊಂಡಿದೆ. ಮೃತಪಟ್ಟ ವ್ಯಕ್ತಿಗೆ 60 ವರ್ಷ ತುಂಬುವವರೆಗೂ ಈ ವೇತನ ಸಿಗಲಿದ್ದು, ಮೃತನ ವಯಸ್ಸು ಹುಟ್ಟಿದ ದಿನಾಂಕದ ಆಧಾರದಲ್ಲಿ 60ನ್ನು ದಾಟಿದ ನಂತರ ಆತನ ಕುಟುಂಬಕ್ಕೆ ನೀಡುತ್ತಿದ್ದ ಸಂಬಳ ನಿಲ್ಲಿಸಲಾಗುತ್ತದೆ.

View full article
20 views16:18
ओपन / कमेंट
2021-05-26 16:18:14
ದೇಶದಲ್ಲಿ 11,717 ಬ್ಲ್ಯಾಕ್ ಫಂಗಸ್ ಪ್ರಕರಣ: ಯಾವ ರಾಜ್ಯದಲ್ಲಿ ಎಷ್ಟು?

ದೇಶದಲ್ಲಿ 11,717 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಗುಜರಾತ್ ನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ. ಗುರುವಾರ ಟ್ವಿಟ್ ಮಾಡಿ ರಾಜ್ಯಾವಾರು ವಿವರ ನೀಡಿದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ, ಗುಜರಾತ್ ನಲ್ಲಿ 2859 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 2770 ಪ್ರಕರಣಗಳಿದ್ದು ಎರಡನೇ ಸ್ಥಾನದಲ್ಲಿವೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳಿದ್ದು, ಮೂರನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 998 ಪ್ರಕರಣಗಳು ದಾಖಲಾಗಿವೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ 30 ಸಾವಿರ ಅಂಫೋಟೆರಿಸಿಯನ್-ಬಿ ಔಷಧವನ್ನು ಅಗತ್ಯಗಳಿಗೆ ತಕ್ಕಂತೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
43 views13:18
ओपन / कमेंट
2021-05-26 16:18:12
ಕೋವಿಡ್ 19 ಚಿಕಿತ್ಸೆಗೂ ಉಪಯೋಗವಾಗುತ್ತದೆ 'ಬ್ರೈನ್ ಇ ಟ್ಯಾಟೂ ತಂತ್ರಜ್ಞಾನ'..!?

ಇತ್ತೀಚಿನ ದಿನಗಳಲ್ಲಿ ಜಗತ್ತು ಹೊಸ ತಂತ್ರಜ್ಞಾನಕ್ಕೆ ತರೆದುಕೊಳ್ಳುತ್ತಾ ಸಾಗುತ್ತಿದೆ. ಊಹೆಗೂ ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಮನುಷ್ಯನ ಮೆದುಳಿನ ಕಾರ್ಯವನ್ನು ಗ್ರಹಿಸುವಷ್ಟು ಮುಂದುವರಿದೆದೆ ಎನ್ನುವುದಕ್ಕೆ ಬ್ರೈನ್ ಸೈಂಟಿಫಿಕ್ ಇಂಕ್ ಸಂಸ್ಥೆ ತಯಾರಿಸಿದ 'ಬ್ರೈನ್ ಇ ಟ್ಯಾಟೂ'ವೇ ಸಾಕ್ಷಿ. ಬ್ರೈನ್ ಸೈಂಟಿಫಿಕ್ ಇಂಕ್ ಸಂಸ್ಥೆಯ ಸಹ ಸಂಸ್ಥಾಪಕನಾಗಿರುವ ಬೋರಿಸ್ ಗೋಲ್ಡ್ಟೈನ್ ಉತ್ತಮ ಹಚ್ಚೇವಾದಿಯು ಆಗಿದ್ದಾರೆ. ಇವರ ವಿಶೇಷತೆ ಅಂದರೆ ತಲೆಯ ಮೇಲೆ ಮಾತ್ರ ಟ್ಯಾಟೂ ಹಾಕುವುದು, ಅದು ನೀವೂ ಹಿಂದೆಂದ್ದು ಕಂಡಿರದ ಚಿತ್ರವಾಗಿರುತ್ತದೆ. ಒಂದು ಸ್ಟ್ಯಾಂಪ್ ಗಾತ್ರದ ಸಣ್ಣ ಟ್ಯಾಟೂ ಇದಾಗಿದ್ದು, ನೋಡುಗರಿಗೆ ತಲೆಬುರುಡೆಯಲ್ಲಿ ಯಾವುದೋ ಚಿಪ್ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತದೆ. ಇದನ್ನೂ ಓದಿ : ಆಂಬ್ಯುಲೆನ್ಸ್ ಧನ ದಾಹ : ಕಾರಿನಲ್ಲಿ ಮಗಳ ಶವ ಸಾಗಿಸಿದ ತಂದೆ ಈ ಟ್ಯಾಟೂ ವಂಡರ್ ಮೆಟೀರಿಯಲ್ ಗ್ರಾಫೀನ್‍ ನಿಂದ ಮಾಡಲಾದ ಶಾಯಿಯಿಂದ ಬರೆಯಲಾಗುತ್ತದೆ.

View full article
34 views13:18
ओपन / कमेंट
2021-05-26 16:18:10
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನ; ಗಣ್ಯರ ಸಂತಾಪ

ಬೆಂಗಳೂರು, ಮೇ 26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಎಚ್‌.ಎಸ್. ದೊರೆಸ್ವಾಮಿ ಅವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. 104 ವರ್ಷದ ದೊರೆಸ್ವಾಮಿ ಅವರು ಈಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. 12 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಅವರು ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ನಿಧನರಾಗಿರುವುದಾಗಿ ತಿಳಿದುಬಂದಿದೆ. ದೊರೆಸ್ವಾಮಿ ಅವರ ನಿಧನಕ್ಕೆ ಹಲವು ರಾಜಕೀಯ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ...

View full article
35 views13:18
ओपन / कमेंट
2021-05-26 13:18:11
ಉಳ್ಳಾಲ: 200 ಕೆಜಿ ಗಾಂಜಾದೊಂದಿಗೆ ನಾಲ್ವರು ಆರೋಪಿಗಳ ಬಂಧನ

ಮಂಗಳೂರು, ಮೇ 26: ಕೇರಳ ಹಾಗೂ ಕರ್ನಾಟಕ ವಿವಿಧ ಕಡೆ ಪೂರೈಸಲು ಸಾಗಿಸಲಾಗುತ್ತಿದ್ದ ಸುಮಾರು 200 ಕೆಜಿ ಗಾಂಜಾದೊಂದಿಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡಿನ ಮುಹಮ್ಮದ್ ಫಾರೂಕ್ (24), ಕುಶಾಲನಗರದ ಸಯ್ಯದ್ ಮುಹಮ್ಮದ್ (31), ಮಂಗಳೂರು ಮುಡಿಪುವಿನ ಮುಹಮ್ಮದ್ ಅನ್ಸಾರ್ (23), ಮಂಜೇಶ್ವರದ ಮೊಯ್ದಿನ್ ನವಾಝ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 2 ವಾಹನ, 3 ತಲವಾರು, 1 ಚಾಕು, 4 ಮೊಬೈಲ್, 1 ವೈಫೈ ಸೆಟ್‌ಗಳನ್ನು ಸ್ವಾಧೀನಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಮೂಡಬಿದ್ರೆ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದ ವೇಳೆ ಆರೋಪಿಗಳು ಸಾಕಷ್ಟು ಮಂದಿ ಕೇರಳದ ಕಾಸರಗೋಡು ಹಾಗೂ ಮಂಜೇಶ್ವರದವರೆಂದು ತನಿಖೆಯಿಂದ ತಿಳಿದು ಬಂದಿತ್ತು.

View full article
18 views10:18
ओपन / कमेंट
2021-05-26 13:18:10
ಮೂಡಬಿದರಿ : ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ

ಮೂಡಬಿದರಿ : ಮೂಡಬಿದರಿ ಠಾಣಾ ವ್ಯಪ್ತಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂಡಬಿದರಿ ಪಿಎಸ್ ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತರಾಗಿರುವ ಆರೋಪಿಗಳನ್ನು ಮಹಮ್ಮದ್ ಫರೂಕ್, ಸೈಯದ್ ಮಹಮ್ಮದ್, ಮಹಮ್ಮದ್ ಅನ್ಸಾರ್, ಮ್ಯೊದಿನ್ ನವಾಸ್ ಎಂದು ಗುರುತಿಸಲಾಪಗಿದೆ. ಉಳ್ಳಾಲ ಠಾಣೆಯ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅಲ್ಲದೆ ಆರೋಪಿಗಳಿಂದ ಗಾಂಜಾ, ತಲವಾರು, ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ.

View full article
16 views10:18
ओपन / कमेंट
2021-05-26 10:18:09
ಕರ್ನಾಟಕಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆಗೆ 2 ಕಂಪನಿಗಳ ಟೆಂಡರ್

ಬೆಂಗಳೂರು, ಮೇ 26; ರಷ್ಯಾದ ಕೋವಿಡ್ ಸೋಂಕಿನ ವಿರುದ್ಧದ ಸ್ಪುಟ್ನಿಕ್ ಲಸಿಕೆಯನ್ನು ಕರ್ನಾಟಕಕ್ಕೆ ಸರಬರಾಜು ಮಾಡಲು ಎರಡು ಕಂಪನಿಗಳು ಮುಂದೆ ಬಂದಿವೆ. ಸರ್ಕಾರ ಮೇ 14ರಂದು ಜಾಗತಿಕ ಟೆಂಡರ್ ಕರೆದಿತ್ತು. ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಕೊರತೆ ಉಂಟಾಗಿದೆ. ಸರ್ಕಾರ ಲಸಿಕೆ ಪೂರೈಕೆ ಮಾಡಲು ಜಾಗತಿಕ ಟೆಂಡರ್ ಕರೆಯುವುದಾಗಿ ಹೇಳಿತ್ತು. ಮೇ 14ರಂದು ಟೆಂಡರ್ ಕರೆದಿದ್ದು, ಮೇ 24ರ ಸಂಜೆ 5.30ರ ತನಕ ಟೆಂಡರ್ ಸಲ್ಲಿಕೆಗೆ ಅವಕಾಶವಿತ್ತು. ಧಾರವಾಡದ ಶಿಲ್ಪಾ ಮೆಡಿಕೇರ್‌ನಲ್ಲಿ ಉತ್ಪಾದನೆಯಾಗಲಿದೆ ಸ್ಪುಟ್ನಿಕ್ ವಿ ಲಸಿಕೆ ಮುಂಬೈ ಮೂಲದ ಬಲ್ಕ್ ಎಂಆರ್‌ಓ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಸ್ಪುಟ್ನಿಕ್-ವಿ ಮತ್ತು ಬೆಂಗಳೂರು ಮೂಲದ ತುಳಸಿ ಸಿಸ್ಟಮ್ಸ್‌ ಸ್ಪುಟ್ನಿಕ್ ಪ್ಲಸ್ ಒಂದು ಡೋಸ್ ಲಸಿಕೆ ಪೂರೈಕೆ ಮಾಡುವುದಾಗಿ ಟೆಂಡರ್ ಸಲ್ಲಿಕೆ ಮಾಡಿವೆ.

View full article
38 views07:18
ओपन / कमेंट
2021-05-26 10:18:06
ಲಾಕ್‌ಡೌನ್; ಜೂನ್ 1ರಿಂದ ಸಿಗಲಿದೆ ಕೆಲವು ವಿನಾಯಿತಿ?

ಬೆಂಗಳೂರು, ಮೇ 26; ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮೇ 10 ರಿಂದ 14ರ ತನಕ ಲಾಕ್‌ಡೌನ್ ಮಾಡಲಾಗಿತ್ತು. ಪುನಃ ಮೇ 24ರಿಂದ ಜೂನ್ 7ರ ತನಕ ಲಾಕ್‌ಡೌನ್ ಮುಂದುವರೆಯಲಿದೆ. ಜನತಾ ಕರ್ಫ್ಯೂ, ಲಾಕ್‌ಡೌನ್‌ಗಳಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಜೂನ್ 7ರ ತನಕ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೆಲವು ವಿನಾಯಿತಿಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ಚರ್ಚೆಗಳು ನಡೆದಿವೆ. ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ ರಾಜ್ಯದ ಅರ್ಥಿಕ ಪರಿಸ್ಥಿತಿ, ಉದ್ಯಮಗಳ ಪರಿಸ್ಥಿತಿಯನ್ನು ನೋಡಿಕೊಂಡು ಜೂನ್ 1ರಿಂದ ಕೆಲವು ವಿನಾಯಿತಿಗಳನ್ನು ನೀಡಲಾಗುತ್ತದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
31 views07:18
ओपन / कमेंट