Get Mystery Box with random crypto!

ವೈರಿಗಳ ಸಮ್ಮಿಲನಕ್ಕೆ ಮುಹೂರ್ತ ಫಿಕ್ಸ್, ಅಮೆರಿಕ-ರಷ್ಯಾ ಮಾತುಕತೆಗೆ ಸಿದ್ | Kannada News Daily

ವೈರಿಗಳ ಸಮ್ಮಿಲನಕ್ಕೆ ಮುಹೂರ್ತ ಫಿಕ್ಸ್, ಅಮೆರಿಕ-ರಷ್ಯಾ ಮಾತುಕತೆಗೆ ಸಿದ್ಧತೆ!

ಅವನೊಬ್ಬ ಕೊಲೆಗಾರ, ಅವನೊಬ್ಬ ಮೋಸಗಾರ, ಅವನಿಂದ ನಮ್ಮ ದೇಶದ ಚುನಾವಣೆಯಲ್ಲಿ ಬೇರೆಯವರ ಹಸ್ತಕ್ಷೇಪ ಆಗಿತ್ತು. ಹೀಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಬೈಡನ್ ಮಾಡಿರುವ ಆರೋಪಗಳು ಒಂದೆರಡಲ್ಲ. ಅದರಲ್ಲೂ ಪುಟಿನ್ ಒಬ್ಬ ಕೊಲೆಗಾರ ಎಂದು ಬೈಡನ್ ಹೇಳಿದ್ದು ಅಮೆರಿಕ-ರಷ್ಯಾ ಸಂಬಂಧಕ್ಕೆ ಕೊಳ್ಳಿ ಇಟ್ಟಿತ್ತು. ಆದರೆ ಕಿಚ್ಚು ತಣ್ಣಗಾಗುವ ಸಮಯ ಬಂದಿದ್ದು, ಮುಂದಿನ ತಿಂಗಳು 16ಕ್ಕೆ ಅಂದರೆ ಜೂನ್‌ 16ರಂದು ಪುಟಿನ್ ಹಾಗೂ ಬೈಡನ್ ಭೇಟಿಯಾಗಲಿದ್ದಾರೆ. ಸ್ವಿಜರ್ಲ್ಯಾಂಡ್‌ನ ಜಿನೀವಾ ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ. ಜಿನೀವಾದಲ್ಲಿ ನಡೆಯಲಿರುವ ಶೃಂಗಸಭೆಯ ಹಿನ್ನೆಲೆಯಲ್ಲಿ ಪುಟಿನ್ ಮತ್ತು ಜೋ ಬೈಡನ್ ಅಲ್ಲಿಗೆ ತೆರಳಲಿದ್ದಾರೆ. ಇದೇ ವೇಳೆ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಲು ಒಪ್ಪಿದ್ದಾರೆಂದು ವೈಟ್‌ಹೌಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

View full article