Get Mystery Box with random crypto!

ದೇಶದಲ್ಲಿ 11,717 ಬ್ಲ್ಯಾಕ್ ಫಂಗಸ್ ಪ್ರಕರಣ: ಯಾವ ರಾಜ್ಯದಲ್ಲಿ ಎಷ್ಟು? | Kannada News Daily

ದೇಶದಲ್ಲಿ 11,717 ಬ್ಲ್ಯಾಕ್ ಫಂಗಸ್ ಪ್ರಕರಣ: ಯಾವ ರಾಜ್ಯದಲ್ಲಿ ಎಷ್ಟು?

ದೇಶದಲ್ಲಿ 11,717 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಗುಜರಾತ್ ನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ. ಗುರುವಾರ ಟ್ವಿಟ್ ಮಾಡಿ ರಾಜ್ಯಾವಾರು ವಿವರ ನೀಡಿದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ, ಗುಜರಾತ್ ನಲ್ಲಿ 2859 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 2770 ಪ್ರಕರಣಗಳಿದ್ದು ಎರಡನೇ ಸ್ಥಾನದಲ್ಲಿವೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳಿದ್ದು, ಮೂರನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 998 ಪ್ರಕರಣಗಳು ದಾಖಲಾಗಿವೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ 30 ಸಾವಿರ ಅಂಫೋಟೆರಿಸಿಯನ್-ಬಿ ಔಷಧವನ್ನು ಅಗತ್ಯಗಳಿಗೆ ತಕ್ಕಂತೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article