Get Mystery Box with random crypto!

ಕರ್ನಾಟಕಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆಗೆ 2 ಕಂಪನಿಗಳ ಟೆಂಡರ್ ಬೆಂಗಳ | Kannada News Daily

ಕರ್ನಾಟಕಕ್ಕೆ ಸ್ಪುಟ್ನಿಕ್ ಲಸಿಕೆ ಪೂರೈಕೆಗೆ 2 ಕಂಪನಿಗಳ ಟೆಂಡರ್

ಬೆಂಗಳೂರು, ಮೇ 26; ರಷ್ಯಾದ ಕೋವಿಡ್ ಸೋಂಕಿನ ವಿರುದ್ಧದ ಸ್ಪುಟ್ನಿಕ್ ಲಸಿಕೆಯನ್ನು ಕರ್ನಾಟಕಕ್ಕೆ ಸರಬರಾಜು ಮಾಡಲು ಎರಡು ಕಂಪನಿಗಳು ಮುಂದೆ ಬಂದಿವೆ. ಸರ್ಕಾರ ಮೇ 14ರಂದು ಜಾಗತಿಕ ಟೆಂಡರ್ ಕರೆದಿತ್ತು. ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಕೊರತೆ ಉಂಟಾಗಿದೆ. ಸರ್ಕಾರ ಲಸಿಕೆ ಪೂರೈಕೆ ಮಾಡಲು ಜಾಗತಿಕ ಟೆಂಡರ್ ಕರೆಯುವುದಾಗಿ ಹೇಳಿತ್ತು. ಮೇ 14ರಂದು ಟೆಂಡರ್ ಕರೆದಿದ್ದು, ಮೇ 24ರ ಸಂಜೆ 5.30ರ ತನಕ ಟೆಂಡರ್ ಸಲ್ಲಿಕೆಗೆ ಅವಕಾಶವಿತ್ತು. ಧಾರವಾಡದ ಶಿಲ್ಪಾ ಮೆಡಿಕೇರ್‌ನಲ್ಲಿ ಉತ್ಪಾದನೆಯಾಗಲಿದೆ ಸ್ಪುಟ್ನಿಕ್ ವಿ ಲಸಿಕೆ ಮುಂಬೈ ಮೂಲದ ಬಲ್ಕ್ ಎಂಆರ್‌ಓ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಸ್ಪುಟ್ನಿಕ್-ವಿ ಮತ್ತು ಬೆಂಗಳೂರು ಮೂಲದ ತುಳಸಿ ಸಿಸ್ಟಮ್ಸ್‌ ಸ್ಪುಟ್ನಿಕ್ ಪ್ಲಸ್ ಒಂದು ಡೋಸ್ ಲಸಿಕೆ ಪೂರೈಕೆ ಮಾಡುವುದಾಗಿ ಟೆಂಡರ್ ಸಲ್ಲಿಕೆ ಮಾಡಿವೆ.

View full article