Get Mystery Box with random crypto!

ಮೈಸೂರು- ಕುಶಾಲನಗರ ರೈಲ್ವೇ ಮಾರ್ಗದ ಫೈನಲ್‌ ಲೊಕೇಶನ್‌ ಸರ್ವೆಗೆ ಮರು ಟೆಂ | Kannada News Daily

ಮೈಸೂರು- ಕುಶಾಲನಗರ ರೈಲ್ವೇ ಮಾರ್ಗದ ಫೈನಲ್‌ ಲೊಕೇಶನ್‌ ಸರ್ವೆಗೆ ಮರು ಟೆಂಡರ್

ಮೈಸೂರು, ಮೇ 24: ಕರ್ನಾಟಕ ರಾಜ್ಯದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಪ್ರವಾಸಿ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸಲು ದಶಕಗಳಿಂದಲೇ ಪ್ರಯತ್ನ ನಡೆಯುತ್ತಿದೆ. ಆದರೆ ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ಮುಂದಕ್ಕೆ ಹೋಗುತ್ತಲೇ ಇದೆ. ಮೈಸೂರಿನಿಂದ ಬೆಳಗೊಳದ ಮಾರ್ಗವಾಗಿ ಕುಶಾಲನಗರ ಪಕ್ಕದ ಕೊಪ್ಪದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಲು ಸರ್ವೆ ನಡೆಸಿದ್ದ ರೈಲ್ವೇ ಅಧಿಕಾರಿಗಳು ಈ ಯೋಜನೆ ಆದಾಯದ ದೃಷ್ಟಿಯಿಂದ ಕಾರ್ಯಸಾಧುವಲ್ಲ ಎಂದು ತಳ್ಳಿ ಹಾಕಿದ್ದರು. ಸಾಕಷ್ಟು ಒತ್ತಡ, ಪ್ರಭಾವದ ನಂತರ ಕೇಂದ್ರ ಸರ್ಕಾರವು ಈ ಯೋಜನೆಗೆ 2019ನೇ ಇಸವಿಯಲ್ಲಿ ಒಪ್ಪಿಗೆ ನೀಡಿದೆ. ಅಂತಿಮ ಹಂತವಾಗಿ ಅಂತಿಮ ಸ್ಥಳ ಸಮೀಕ್ಷೆ ಒಟ್ಟು 1,885 ಕೋಟಿ ರೂಪಾಯಿಗಳ ವೆಚ್ಚದ ಮೈಸೂರಿನಿಂದ ಕುಶಾಲನಗರದವರೆಗಿನ 87 ಕಿಲೋಮೀಟರ್‌ ಉದ್ದದ ಈ ರೈಲು ಮಾರ್ಗಕ್ಕೆ ರೈಲ್ವೇ ಸಚಿವಾಲಯ ಮಂಜೂರಾತಿಯನ್ನೂ ನೀಡಿದೆ.

View full article