Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 6

2021-06-28 19:18:06
ಜೆಪಿ ನಗರದಲ್ಲಿ ಎಥರ್ ಎನರ್ಜಿ ಇ ಸ್ಕೂಟರ್ ಟೆಸ್ಟ್ ರೈಡ್ ಮಾಡಿ!

ಬೆಂಗಳೂರು, ಜೂನ್ 28: ಭಾರತದ ಮೊದಲ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಎಥರ್ ಎನರ್ಜಿ ಬೆಂಗಳೂರಿನ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಎರಡನೆಯ ಎಕ್ಸ್‌ಪೀರಿಯೆನ್ಸ್‌ ಸೆಂಟರ್-ಎಥರ್ ಸ್ಪೇಸ್ ಅನ್ನು ಜೆಪಿ ನಗರದಲ್ಲಿ ಉದ್ಘಾಟಿಸಿದೆ. ಇದು ಎಥರ್ ಹಲವು ಎಕ್ಸ್‌ಪೀರಿಯೆನ್ಸ್ ಸೆಂಟರ್‌ಗಳನ್ನು ಕರ್ನಾಟಕದ ಮುಂಚೂಣಿಯ ಆಟೊ ರೀಟೇಲರ್ ಬಿಐಎ ವೆಂಚರ್ಸ್ ಸಹಯೋಗದಲ್ಲಿ ಪರಿಚಯಿಸಿದೆ. ಭಾರತದ ಅತ್ಯಂತ ತ್ವರಿತ ಹಾಗೂ ಸ್ಮಾರ್ಟ್ ಸ್ಕೂಟರ್ ಎಥರ್ 450ಎಕ್ಸ್, ಎಥರ್ 450 ಪ್ಲಸ್‍ನೊಂದಿಗೆ ಎಥರ್ ಸ್ಪೇಸ್‍ನಲ್ಲಿ ಟೆಸ್ಟ್ ರೈಡ್ ಮತ್ತು ಕೊಳ್ಳಲು ಲಭ್ಯ. ಎಥರ್ ಎನರ್ಜಿ ಜನವರಿ 2021ರಿಂದಲೂ ಸುಮಾರು 30 ಪಟ್ಟು ಬೇಡಿಕೆಯಲ್ಲಿ ಹೆಚ್ಚಳ ಕಂಡಿದ್ದು ತನ್ನ ಬಾಗಿಲುಗಳನ್ನು ಎರಡನೆಯ ಎಕ್ಸ್‌ಪೀರಿಯೆನ್ಸ್‌ ಸೆಂಟರ್ ತೆರೆಯುತ್ತಿದ್ದು ದಕ್ಷಿಣ ಬೆಂಗಳೂರಿನ ಗ್ರಾಹಕರು ಈಗ ಜೆ.ಪಿ.ನಗರದಿಂದ 40ಎಕ್ಸ್ ಟೆಸ್ಟ್ ರೈಡ್ ಮಾಡಬಹುದು.

View full article
51 views16:18
ओपन / कमेंट
2021-06-28 16:18:04
ಪ್ರೇಮಪಯಣ: ಅಕ್ರಮವಾಗಿ ಗಡಿ ದಾಟಿದ ಅಂತರದೇಶೀಯ ನವವಿವಾಹಿತರು!

ನಾಡಿಯ : ಪಶ್ಚಿಮ ಬಂಗಾಳದ ನಾಡಿಯ ಜಿಲ್ಲೆಯಲ್ಲಿ ಅಕ್ರಮವಾಗಿ ಭಾರತ-ಬಾಂಗ್ಲಾದೇಶ ಗಡಿ ದಾಟಿದ ಯುವಜೋಡಿಯನ್ನು ಗಡಿ ಭದ್ರತಾ ಪಡೆ(ಬಿಎಸ್​ಎಫ್​)ಯು ಬಂಧಿಸಿದೆ. ವಿಚಾರಣೆ ಮಾಡಿದಾಗ, ಆನ್​ಲೈನ್​ ಪರಿಚಯವಾಗಿ, ಪ್ರೇಮಾಂಕುರವಾಗಿ ಗಡಿಯ ಆಚೀಚೆ ಇದ್ದರೂ ಮದುವೆ ಆಗುವ ನಿರ್ಧಾರ ತೆಗೆದುಕೊಂಡ ನವವಿವಾಹಿತರು ಎಂದು ತಿಳಿದುಬಂದಿದೆ. ಜೂನ್ 26 ರಂದು, ಬೇಹುಗಾರರು ಗಡಿಯಲ್ಲಿ ಸಂಚಾರ ನಡೆಯುತ್ತಿರುವ ಬಗ್ಗೆ ಮಾಧುಪುರ್​ ಬಾರ್ಡರ್​ ಔಟ್​ಪೋಸ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್​ಎಫ್​ನ 82 ಬಟಾಲಿಯನ್​ ಟ್ರೂಪ್​ನ ಸಿಪಾಯಿಗಳಿಗೆ ಸುಳಿವು ನೀಡಿದರು. ಸಂಜೆ 4:15 ಕ್ಕೆ ಜೋಡಿಯೊಂದು ಗಡಿ ರಸ್ತೆಯಲ್ಲಿ ಕಾಣಿಸಿಕೊಂಡಿತು. ಗುರುತಿನ ಬಗ್ಗೆ ಕೇಳಿದಾಗ, ಯುವಕನು ಬಂಗಾಳದ ನಾಡಿಯ ಜಿಲ್ಲೆಯ ಬಲ್ಲವಪುರ ಗ್ರಾಮದ ನಿವಾಸಿ ಜೈಕಾಂತೋ ಚಂದ್ರ ರೈ(24) ಎಂದು ತಿಳಿದುಬಂತು.

View full article
60 views13:18
ओपन / कमेंट
2021-06-28 13:18:10
'ಕೃಷಿ ಉಳಿಸಿ- ಪ್ರಜಾಪ್ರಭುತ್ವ ರಕ್ಷಿಸಿ': ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟದಿಂದ ಧರಣಿ

ಮಂಗಳೂರು, ಜೂ. 28: ಕೇಂದ್ರ ಸರಕಾರವು ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಹಾಗೂ ರೈತರ ಬೇಡಿಕೆಗಳನ್ನು ಮುಂದಿಟ್ಟು ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಘೋಷಣೆಯೊಂದಿಗೆ ದ.ಕ. ಜಿಲ್ಲೆಯ ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟದಿಂದ ಇಂದು ಧರಣಿ ನಡೆಯಿತು. ನಗರದ ಹಂಪಕನಟ್ಟೆ ಬಳಿ ನಡೆದ ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತ ವಿರೋಧಿ ಮಾತ್ರವಲ್ಲ, ಜನರ ಆಹಾರದ ಸಾರ್ವಭೌಮತೆಯನ್ನು ಖಾಸಗಿ, ಕಾರ್ಪೊರೇಟ್ ಸಂಸ್ಥೆಗಳ ಕಾಲಿನಡಿಗಿರುವ ಕಾನೂನು ಎಂದು ಹೇಳಿದರು. ಕಳೆದ 7 ತಿಂಗಳಿನಿಂದ ರೈತರು ಈ ನಿಟ್ಟಿನಲ್ಲಿ ದೇಶಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಇದು ಕೇವಲ ರೈತರ ಚಳವಳಿ ಮಾತ್ರವಲ್ಲ, ಸರಕಾರದ ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ.

View full article
62 views10:18
ओपन / कमेंट
2021-06-28 10:18:09
ಗಂಡನಿಂದ ದೂರವಾಗಿ ರಸ್ತೆಬದಿ ಲಿಂಬೆ ಪಾನಕ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್

ತಿರುವನಂತಪುರ: ಆತ್ಮವಿಶ್ವಾಸ, ಅಚಲ ನಂಬಿಕೆ, ಇಚ್ಛಾಶಕ್ತಿ, ಕಠಿಣ ಪರಿಶ್ರಮವಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಕೇರಳದ ಈ ಯುವತಿಯೇ ಸಾಕ್ಷಿ. ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್. ಹೌದು, ಈಕೆಯ ಹೆಸರು ಅಯನಿ ಶಿವ. ಕೇರಳದ ವರ್ಕಲಾ ನಗರದ ನಿವಾಸಿ. 18 ವರ್ಷಕ್ಕೆ ಮದುವೆಯಾದ ಗಂಡನಿಂದ, ಮನೆಯವರಿಂದ ದೂರವಾಗಿ, ಹೊಟ್ಟೆ ಪಾಡಿಗಾಗಿ ವರ್ಕಲಾದಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದ ಆಯನಿ, ಇದೀಗ ವರ್ಕಲಾ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್! ಸದ್ಯ 31 ವರ್ಷದ ಆಯನಿ, ಕಾಂಜಿರಾಮ್ಕುಲಂ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಓದುವ ಸಮಯದಲ್ಲಿ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದರು.

View full article
73 views07:18
ओपन / कमेंट
2021-06-28 07:18:11
ಸಖತ್ ಸುದ್ದಿ: ಕರ್ನಾಟಕದಲ್ಲಿ ಕಡಿಮೆ ಆಯ್ತಾ ಕೊರೊನಾವೈರಸ್?

ಬೆಂಗಳೂರು, ಮೇ 27: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಶೇಕಡಾವಾರು ಪ್ರಮಾಣ 2.18ರಷ್ಟಿದ್ದು, ಸಾವಿನ ಪ್ರಮಾಣ ಶೇ.2.46ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 89 ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದು, ಈವರೆಗೂ 34,743 ಮಂದಿ ಮಹಾಮಾರಿಯಿಂದ ಮೃತಪಟ್ಟಿದ್ದಾರೆ. ಒಂದು ದಿನದಲ್ಲಿ 3604 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 7699 ಸೋಂಕಿತರು ಗುಣಮುಖರಾಗಿದ್ದಾರೆ. ವಿಶೇಷ ವರದಿ: ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ MIS-C, A-NEC ಸೋಂಕು ಪತ್ತೆ ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,34,630ಕ್ಕೆ ಏರಿಕೆಯಾಗಿದೆ.

View full article
78 views04:18
ओपन / कमेंट
2021-06-28 07:18:09
6 ಕೋಟಿ ರೂ. ತನ್ನದೇ ಬಂಗಲೆಯನ್ನು ಸುಟ್ಟುಹಾಕಿದ ಭೂಪ: ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ

ಬ್ರಿಟನ್‌: ಬ್ರಿಟನ್‌ ವ್ಯಕ್ತಿಯೊಬ್ಬ ತನ್ನ ಐಷಾರಾಮಿ ಬಂಗಲೆಯನ್ನು ಸುಟ್ಟು ಬೂದಿ ಮಾಡಿದ್ದಾನೆ. 550 ಸಾವಿರ ಪೌಂಡ್‌ ಅಂದರೆ ಸುಮಾರು ಆರು ಕೋಟಿ ರೂಪಾಯಿ ಮೌಲ್ಯದ ಈ ಬಂಗಲೆಯನ್ನು ಆತ ಸುಟ್ಟಿರುವುದಕ್ಕೆ ವಿಚಿತ್ರ ಕಾರಣವೂ ಇದೆ. ಜಾನ್ ಮ್ಯಾಕ್‌ಕೊರ‍್ರಿ ಎಂಬ 75 ವರ್ಷ ವಯಸ್ಸಿನ ಈ ಭೂಪ ಹೀಗೆ ಮಾಡಲು ಕಾರಣ, ಈತನ ಪತ್ನಿ! ಕೆನ್‌ಫಾರ್ಡ್‌ ನಿವಾಸಿಯಾಗಿರುವ ಈತನಿಗೂ ಪತ್ನಿಗೂ ವಿರಸ ಉಂಟಾಗಿದೆ. ಈ ಇಳಿ ವಯಸ್ಸಿನಲ್ಲಿ ದಂಪತಿ ನಡುವೆ ಏನೋ ಜಗಳವಾಗಿ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಇದೇ ಕೋಪಕ್ಕೆ ಈತ ಬಂಗಲೆಯನ್ನೇ ಸುಟ್ಟುಹಾಕಿದ್ದಾನೆ. ಅಷ್ಟಕ್ಕೂ ಪತ್ನಿ ಬಿಟ್ಟುಹೋದ ಸಿಟ್ಟಿಗೆ ಮಾತ್ರ ಹೀಗೆ ಮಾಡಿದ್ದಲ್ಲ. ಆಕೆ ಬಿಟ್ಟು ಹೋದ ಮೇಲೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಈ ಬಂಗಲೆಯಲ್ಲಿ ಅವಳಿಗೂ ಪಾಲು ಕೊಡಬೇಕಾಗುತ್ತದೆ ಎಂದು ಸುಟ್ಟು ಭಸ್ಮಮಾಡಿದ್ದಾನೆ.

View full article
65 views04:18
ओपन / कमेंट
2021-06-28 07:18:07
ಲಾಕ್‌ಡೌನ್; ಮುಜರಾಯಿ ಇಲಾಖೆಗೆ 105 ಕೋಟಿ ನಷ್ಟ

ಮಂಗಳೂರು, ಜೂನ್ 27; ಕೋವಿಡ್ ಹರಡುವಿಕೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತು. ಇದು ಜನ ಸಾಮಾನ್ಯರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು. ಆರ್ಥಿಕವಾಗಿ ಜೀವನವನ್ನೇ ಕುಗ್ಗಿಸುವಂತೆ ಮಾಡಿತು. ಈ ಲಾಕ್‌ಡೌನ್ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲ ದೇವರನ್ನು ಬಿಟ್ಟಿಲ್ಲ ಅನ್ನೋದು ಗಮನಾರ್ಹ ವಾಗಿದೆ‌‌. ಲಾಕ್‌ಡೌನ್‌ನಿಂದ ರಾಜ್ಯದ ದೇವಾಲಯಗಳ ಹುಂಡಿಗಳೆಲ್ಲಾ ಖಾಲಿ-ಖಾಲಿಯಾಗಿದ್ದು, ಸುಮಾರು 105 ಕೋಟಿಗಿಂತ ಹೆಚ್ಚು ನಷ್ಟ ಮುಜರಾಯಿ ಇಲಾಖೆಗೆ ಆಗಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ರಾಜ್ಯದಲ್ಲಿ ಸುಮಾರು 34 ಸಾವಿರ ದೇವಾಲಯಗಳಿದ್ದು, 144 ದೇವಸ್ಥಾನಗಳು‌ 'ಎ' ವರ್ಗಕ್ಕೆ ಸೇರಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
57 views04:18
ओपन / कमेंट
2021-06-28 07:18:04
ಗಮನಿಸಿ.! 500 ರೂ. ನೋಟಿನಲ್ಲಿ ಹಸಿರು ಪಟ್ಟಿ ಗಾಂಧಿ ಚಿತ್ರದ ಬಳಿ ಇದ್ರೆ ನಕಲಿ ನೋಟು ವದಂತಿ ಬಗ್ಗೆ ಸ್ಪಷ್ಟನೆ

ನವದೆಹಲಿ: ಗಾಂಧಿ ಫೋಟೋ ಬಳಿ ಹಸಿರುಗೆರೆ ಇರುವ 500 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಅಸಲಿಯತ್ತು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದ್ದು ಈ ಕುರಿತಾಗಿ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸ್ಪಷ್ಟನೆ ನೀಡಿದೆ. ಚಲಾವಣೆಯಲ್ಲಿರುವ 500 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಹಸಿರು ಪಟ್ಟಿ ಆರ್ಬಿಐ ಗವರ್ನರ್ ಸಹಿ ಬಳಿ ಇಲ್ಲದೆ ಮಹಾತ್ಮಗಾಂಧಿ ಫೋಟೋ ಬಳಿ ಇದ್ದರೆ ಅದು ನಕಲಿ ನೋಟು ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

View full article
55 views04:18
ओपन / कमेंट
2021-06-27 19:18:12
ಕೋವಿಡ್19: ಜೂನ್ 27ರಂದು ಜಾಗತಿಕವಾಗಿ ಎಷ್ಟು ಮಂದಿ ಚೇತರಿಕೆ

ಬೆಂಗಳೂರು, ಜೂನ್ 27: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 181,653,524ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 166,166,471 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 170,101,479ಪ್ರಕರಣಗಳು ಮುಕ್ತಾಯಗೊಂಡಿವೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 49,851 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 30,254,091ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 396,113ಕ್ಕೆ ಏರಿಕೆಯಾಗಿದೆ, 29,270,118ಮಂದಿ ಚೇತರಿಕೆ ಹೊಂದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ. ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಜೂನ್ 27 ರಂತೆ) ಇಲ್ಲಿದೆ.

View full article
22 views16:18
ओपन / कमेंट
2021-06-27 19:18:10
ಗೊಂದಲಕ್ಕೆ ತೆರೆ: ಪುದುಚೇರಿ ಸಚಿವ ಸಂಪುಟಕ್ಕೆ ಸೇರಿದ ಐವರು ಸಚಿವರು!

ಪುದುಚೇರಿ, ಜೂನ್ 27: ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ನೇತೃತ್ವದ ಪಕ್ಷಕ್ಕೆ ಗದ್ದುಗೆ ಒಲಿದಿದೆ. ಆದರೆ ಸರ್ಕಾರ ರಚನೆ ಬಳಿಕ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಂಪುಟ ಸರ್ಕಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವವರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಎನ್ ರಂಗಸ್ವಾಮಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಇಬ್ಬರು ಬಿಜೆಪಿ ಶಾಸಕರು ಸೇರಿದಂತೆ ಐವರಿಗೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾನುವಾರ ರಾಜ ನಿವಾಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ತಮಿಲಿಸಾಯಿ ಸೌಂದರಾಜನ್ ನೂತನ ಸಚಿವರಾದ ಎ ನಮಸ್ಸಿವಾಯಂ, ಕೆ. ಲಕ್ಷ್ಮಿ ನಾರಾಯಣನ್, ಸಿ ದೇಜುಕುಮಾರ್, ಚಂದಿರ ಪ್ರಿಯಾಂಗ್ ಮತ್ತು ಎಕೆ ಸಾಯಿ ಜೆ ಸರವಣ ಕುಮಾರ್ ರಿಗೆ ಪ್ರಮಾಣವಚನ ಬೋಧಿಸಿದರು.

View full article
15 views16:18
ओपन / कमेंट