Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 4

2021-07-01 22:18:10
ಚಾಮರಾಜನಗರ ರೈಲ್ವೇ ಸಂಪರ್ಕ ಯೋಜನೆಗೆ ಭರ್ತಿ ನೂರು ವರ್ಷ

ಚಾಮರಾಜನಗರ, ಜುಲೈ 1: ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಚಾಮರಾಜನಗರ ಜಿಲ್ಲೆಯ ರೈಲ್ವೇ ಸಂಪರ್ಕ ಯೋಜನೆಗೆ ಜುಲೈ 1ರಂದು ಶತಮಾನೋತ್ಸವದ ಸಂಭ್ರಮ. ರಾಜ್ಯದ ದಕ್ಷಿಣದ ಗಡಿ ಜಿಲ್ಲಾ ಕೇಂದ್ರವಾದ ಚಾಮರಾಜನಗರವನ್ನು ಸಂಪರ್ಕಿಸುವ ರೈಲು ಮಾರ್ಗ ಯೋಜನೆಯನ್ನು ಇಂದಿಗೆ ಸರಿಯಾಗಿ 100 ವರ್ಷದ ಹಿಂದೆ (1921ರ ಜುಲೈ 1ರಂದು) ಹಾಕಿಕೊಳ್ಳಲಾಗಿತ್ತು. ನಂಜನಗೂಡಿನಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ವಿಸ್ತರಣೆ ಯೋಜನೆ ಹಾಕಿಕೊಂಡ ಐದು ವರ್ಷದ ನಂತರ 1926ರ ಆಗಸ್ಟ್‌ 27ರಂದು ಮೊದಲ ಉಗಿಬಂಡಿ ನಗರಕ್ಕೆ ಬಂದು ಇತಿಹಾಸ ದಾಖಲಿಸಿದೆ. ಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ ಜಿಲ್ಲೆಯ ರೈಲ್ವೇ ಇತಿಹಾಸವನ್ನು ಅತ್ಯಂತ ಚೆನ್ನಾಗಿ ಬಲ್ಲ ಹಿರಿಯ ನಾಗರಿಕ ಪಿ.ಸಿ.

View full article
41 views19:18
ओपन / कमेंट
2021-07-01 22:18:04
BIG NEWS: ಕೋಮಾದಲ್ಲಿ ನಟ ಸಂಚಾರಿ ವಿಜಯ್‌: ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಬೆಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ಸಂಚಾರಿ ವಿಜಯ್‌ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಆಸ್ಪತ್ರೆ ವೈದ್ಯ ಆರುಣ್‌ ಎಲ್‌ ನಾಯ್ಕ್‌ ಅವರು ಮಾಧ್ಯಮಗ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸದ್ಯ ಅವರನ್ನು ಫುಲ್ ಲೈಫ್ ಸಪೋರ್ಟ್‍ನೊಂದಿಗೆ ನ್ಯೂರೋ ಐಸಿಯುನಲ್ಲಿ ವಿಶೇಶ ಹಾರೈಕೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಅಂತ ಹೇಳಿದ್ದಾರೆ. ಶನಿವಾರ ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತ ಸಂಭವಿಸಿ ನಟ ವಿಜಯ್‌ ಅವರ ಬಲಗಾಲಿಗೆ ಹಾಗೂ ಮೆದುಳಿಗೆ ಗಂಭೀರವಾದ ಗಾಯವಾಗಿತ್ತು, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ, ಅವರಿಗೆ ಅಂದೇ ರಾತ್ರಿ ಆಸ್ಪತ್ರೆಯ ವೈದ್ಯರು ಮೆದುಳುಶಸ್ತ್ರ ಚಿಕಿತ್ಸೆ ನೇರವೇರಿಸಿದ್ದರು.ಸದ್ಯ ಐಸಿಯುನಲ್ಲಿರುವ ವಿಜಯ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

View full article
45 views19:18
ओपन / कमेंट
2021-07-01 16:18:11
ಬ್ಯಾಂಕ್ ಗ್ರಾಹಕರೇ ಓದಿ: ಜುಲೈ 1ರಿಂದ ಆಗುತ್ತಿರುವ ಬದಲಾವಣೆ ಬಗ್ಗೆ ತಿಳಿಯಿರಿ

ನವದೆಹಲಿ, ಜುಲೈ 01: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಬೆಲೆ ಏರಿಕೆ ಬಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದರ ಮಧ್ಯೆ ದೇಶದ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ತಮ್ಮ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿವೆ. ಜುಲೈ 1ರಿಂದ ಯಾವ ಬ್ಯಾಂಕಿನಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಗ್ರಾಹಕರು ಇಲ್ಲಿ ಓದಿ ತಿಳಿದುಕೊಳ್ಳಿ. ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸಿಂಡಿಕೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸೇರಿದಂತೆ ಹಲವು ಬ್ಯಾಂಕುಗಳು ಹೊಸ ನಿಯಮಗಳನ್ನು ಜುಲೈ 1ರಿಂದ ಜಾರಿಗೊಳಿಸಿವೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
65 views13:18
ओपन / कमेंट
2021-07-01 16:18:05
ನಂಜನಗೂಡಿನ ಬೈಪಾಸ್ ರಸ್ತೆಯಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದೆ

ಮೈಸೂರು, ಜುಲೈ 1: ಇದುವರೆಗೆ ಬೀದಿನಾಯಿ, ಬೀದಿ ದನಗಳಿಂದ ತೊಂದರೆ ಅನುಭವಿಸುತ್ತಿದ್ದ ನಂಜನಗೂಡು ಜನ ಇದೀಗ ಹಂದಿಗಳ ಕಾಟದಿಂದ ಒದ್ದಾಡುವಂತಾಗಿದೆ. ಎಲ್ಲೆಂದರಲ್ಲಿ ಅಡ್ಡಾಡುವ ಹಂದಿಗಳಿಂದ ತಪ್ಪಿಸಿಕೊಂಡು ಸಂಚರಿಸುವುದೇ ವಾಹನ ಸವಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಈಗಾಗಲೇ ನಂಜನಗೂಡು ಪಟ್ಟಣದ ಜನ ಬೀದಿ ನಾಯಿ, ಬೀದಿ ದನ, ಕುದುರೆಗಳ ಕಾಟದಿಂದ ಕಂಗಾಲಾಗಿದ್ದಾರೆ. ಈ ಹಿಂದೆ ಕುದುರೆಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿವೆ. ಇದೆಲ್ಲವೂ ಹಸಿರಾಗಿರುವಾಗಲೇ ಹಂದಿಗಳ ಕಾಟ ಆರಂಭವಾಗಿದೆ. ಹಂದಿಗಳನ್ನು ಸಾಕುವವರು ಅವುಗಳನ್ನು ಬೀದಿಗೆ ಬಿಡುತ್ತಿರುವುದರಿಂದ ಅವು ರಾಜಾರೋಷವಾಗಿ ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು, ಅವುಗಳಿಂದ ತಪ್ಪಿಸಿಕೊಂಡು ಸಂಚರಿಸುವುದೇ ಒಂದು ರೀತಿಯ ಸರ್ಕಸ್ ಎಂದರೆ ತಪ್ಪಾಗಲಾರದು. ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಗಳಿಗೆ ಸೀಟು ಮೀಸಲು ಬೈಪಾಸ್ ರಸ್ತೆಯಲ್ಲಿ ಹಂದಿಗಳ ಕಾಟ ಇನ್ನು ನಂಜನಗೂಡು ಹಾಗೂ ಚಾಮರಾಜನಗರ ಬೈಪಾಸ್ ರಸ್ತೆಯು ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ.

View full article
65 views13:18
ओपन / कमेंट
2021-07-01 13:18:08
ಅನಾಥಳಾದ ಬಾಲಕಿಗೆ ನೆರವಾದ ಹೊನ್ನಾಳಿ ಶಾಸಕ ರೇಣುಕಾಚಾರ್ಯ

ದಾವಣಗೆರೆ, ಜುಲೈ 01; ಕೋವಿಡ್ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮಾಡುತ್ತಿರುವ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ತಂದೆ-ತಾಯಿ ಕಳೆದುಕೊಂಡು ಅನಾಥವಾಗಿದ್ದ ಬಾಲಕಿಗೆ ಶಾಸಕರು ನೆರವಾಗಿದ್ದಾರೆ. ಹೊನ್ನಾಳಿ ತಾಲೂಕಿನ ದೊಡ್ಡೇರಹಳ್ಳಿ ಗ್ರಾಮದ ಯುಕ್ತಿ ಎಂಬ ಬಾಲಕಿ ತಂದೆ-ತಾಯಿ ಕಳೆದುಕೊಂಡಿದ್ದು, ಶಾಸಕ ಎಂ. ಪಿ. ರೇಣುಕಾಚಾರ್ಯ ಬಾಲಕಿಗೆ ಸಹಾಯ ಮಾಡಿದ್ದಾರೆ. 25 ಸಾವಿರ ರೂಪಾಯಿ ಸಹಾಯ ಮಾಡಿದ್ದು, ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆಯನ್ನು ಸಹ ನೀಡಿದ್ದಾರೆ. ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ರೇಣುಕಾಚಾರ್ಯ ವಿರುದ್ಧ ದೂರು ನಿತ್ಯಾನಂದ ಹಾಗೂ ರಾಧಾ ದಂಪತಿಯ ಪುತ್ರಿ ಯುಕ್ತಿ ಈಗ ಅನಾಥಳಾಗಿದ್ದಾಳೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
62 views10:18
ओपन / कमेंट
2021-07-01 10:18:07
ಕೊರೊನಾ ಲಾಕ್‌ಡೌನ್ ಹೊಡೆತಕ್ಕೆ ಬೆಂಗಳೂರಿನಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿ

ಬೆಂಗಳೂರು, ಜು. 01: ಹೇಳಿದ ಅಡುಗೆ ಬೇಗ ಮಾಡಿಕೊಡಲಿಲ್ಲ ಎಂದು ಹೆಂಡ್ತಿ ಮೇಲೆ ಹಲ್ಲೆ. ಲಾಕ್ ಡೌನ್ ಸಮಯದಲ್ಲಿ ಮಗನನ್ನು ಮನೆಗೆ ಕಳಿಸುವಂತೆ ಪತ್ನಿ ಮೇಲೆ ಗರಂ. ಪತ್ನಿಯ ಶೀಲ ಶಂಕಿಸಿ ಕುಡಿದ ಅಮಲಿನಲ್ಲಿ ಹಲ್ಲೆ. ಹೀಗೆ ಒಂದೆರಡಲ್ಲ ಸಮಸ್ಯೆ. ದಿನಕ್ಕೆ 20 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಗಂಡಂದಿರ ಕಿರುಕುಳ ತಾಳಲಾರದೇ ವನಿತಾ ಸಹಾಯವಾಣಿ ಮೊರೆ ಹೋಗುತ್ತಿದ್ದಾರೆ. ಹೌದು, ಕೋವಿಡ್ 19 ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಮಾತ್ರ ಒಳಗಾಗಿಲ್ಲ, ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ಗಂಡಂದಿರ ಕಿರುಕುಳ ತಾಳಲಾರದೇ 200 ಕ್ಕೂ ಹೆಚ್ಚು ಮಹಿಳೆಯರು ರಕ್ಷಣೆ ಕೋರಿ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ. ನಿರುದ್ಯೋಗ, ಬಡತನ, ರೋಗದ ಭಯ ಮತ್ತು ಲಾಕ್ಡೌನು ಎನ್ನುವ ಮದ್ದು... ಕೊರೊನಾ ಕಾಲದಲ್ಲಿ ಕೆಲಸ ಕಳೆದುಕೊಂಡಿರುವ ಬಹುತೇಕರು ಒತ್ತಡಕ್ಕೆ ಸಿಲುಕಿದ್ದಾರೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
65 views07:18
ओपन / कमेंट
2021-06-30 22:18:07
ಭೂಮಿ ನುಂಗಲು ಬಂದರಾ ರಾಕ್ಷಸರು..? ವಿಜ್ಞಾನಿಗಳು ಹೇಳಿದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ..!

ಭೂಮಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಒಂದು ಕಡೆ ಭೂಮಿ ಮೇಲೆ ಪ್ರಕೃತಿ ವಿಕೋಪ ಎದುರಾದರೆ, ಮತ್ತೊಂದು ಕಡೆ ಹೊರಗಿನಿಂದ ಕೂಡ ಭೂಮಿಗೆ ಸಾಕಷ್ಟು ಆಪತ್ತು ಎದುರಾಗುತ್ತಿದೆ. ಇದರಲ್ಲಿ ಆಕಾಶ ಕಾಯಗಳ ಅಪಾಯ ದೊಡ್ಡದು. ಕ್ಷುದ್ರಗ್ರಹ, ಧೂಮಕೇತು ಭೂಮಿಯನ್ನ ಕಾಡಿದ್ದವು. ಆದರೆ ಈಗ ಹೊಸ ಆತಂಕ ಶುರುವಾಗಿದ್ದು, ಭೂಮಿ ಮೇಲೆ ವಿಚಿತ್ರ ಸಿಗ್ನಲ್ ಕಂಡುಹಿಡಿದಿದ್ದಾರೆ ವಿಜ್ಞಾನಿಗಳು. ಅಂದಹಾಗೆ ಜಗತ್ತಿನ ಶ್ರೇಷ್ಠ ವಿಜ್ಞಾನಿ 'ಅಲ್ಬರ್ಟ್ ಐನ್‌ಸ್ಟೈನ್' ಸೂತ್ರದ ಆಧಾರದಲ್ಲಿ ಸ್ಥಾಪಿಸಿದ್ದ 'ಕಪ್ಪು ಕುಳಿ' ಆಲೆಗಳನ್ನು ಕಂಡು ಹಿಡಿಯುವ ಮಾಪಕ ವಿಚಿತ್ರವಾದ ಸಿಗ್ನಲ್‌ಗಳನ್ನ ಪತ್ತೆ ಮಾಡಿದೆ. ಇದನ್ನ ವಿಜ್ಞಾನಿಗಳು ಪರಿಶೀಲಿಸಿದ ಬಳಿಕ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಈ ಸಿಗ್ನಲ್ ಕಪ್ಪು ಕುಳಿಗಳಿಂದ ಬಂದಿದೆ ಎಂದು ತಿಳಿಸಿದ್ದಾರೆ.

View full article
71 views19:18
ओपन / कमेंट
2021-06-30 19:18:06
ಅಮೆರಿಕಾ ಮೂಲದ ಮಡರ್ನಾ ಲಸಿಕೆ ಹಾಕಿಸಿಕೊಂಡರೆ ಯುವಕರಿಗೆ ಏನಾಗುತ್ತೆ?

ಬೆಂಗಳೂರು ಜೂನ್. 30: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಭಾರತದಲ್ಲಿ 'ಮಾಡೆರ್ನಾ' ಲಸಿಕೆ ಬಳಕೆಗೆ ಅವಕಾಶ ನೀಡಿದೆ. ಮಾಡರ್ನಾ ಲಸಿಕೆ ಭಾರತದಲ್ಲಿ ಸಿಗುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಿಂತಲೂ ಸುರಕ್ಷಿತವೇ ? ಮಡರ್ನಾ ಲಸಿಕೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಮೆರಿಕಾ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಹತ್ವದ ಸಂಗತಿಯನ್ನು ಬಹಿರಂಗ ಪಡಿಸಿದೆ. ಬ್ರೆಜಿಲ್ ಜೊತೆಗಿನ ಕೊವ್ಯಾಕ್ಸಿನ್ ಒಪ್ಪಂದ ರದ್ದು: ಭಾರತ್ ಬಯೋಟೆಕ್ ಹೇಳಿದ್ದೇನು? ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಅಮೆರಿಕದಲ್ಲಿ ಫೈಜರ್ ಮತ್ತು ಮಾಡರ್ನಾ ಲಸಿಕೆ ಬಳಸಲಾಗುತ್ತಿದೆ.ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
62 views16:18
ओपन / कमेंट
2021-06-30 16:18:11
ಜು.8 ರಂದು ಬಿಎಎಸ್‌ವೈ ಭವಿಷ್ಯ ನಿರ್ಧಾರ ಪ್ರಕಟಿಸಲಿರುವ ವಿಶೇಷ ನ್ಯಾಯಾಲಯ

ಬೆಂಗಳೂರು, ಜೂ. 11: ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬೆಳವಣಿಗೆ ನಡುವೆ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಪ್ರಕರಣದ ತೀರ್ಪು ಶೀಘ್ರದಲ್ಲಿಯೇ ಹೊರ ಬೀಳಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸುಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರಿನ ತೀರ್ಪು ಜುಲೈ 08 ರಂದು ಹೊರ ಬೀಳಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ಅಭಿಯೋಜನಾ ಮಂಜೂರಾತಿ ನೀಡಲು ರಾಜ್ಯಪಾಲ ವಜುಬಾಯಿ ವಾಲಾ ನಿರಾಕರಣೆ ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಡಿಯೂರಪ್ಪ ಬದಲಾವಣೆ ನಡುವೆ ದೂರು: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಚಟುವಟಿಕೆ ಹಲವು ತಿಂಗಳಿನಿಂದಲೂ ಗರಿಗೆದರಿವೆ.

View full article
73 views13:18
ओपन / कमेंट
2021-06-30 07:18:11
ಕುಟುಂಬ ಸಮೇತ ಅಂಜನಾದ್ರಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ಸಚಿವ ಯೋಗೇಶ್ಚರ್

ಕೊಪ್ಪಳ: ವಿಶ್ವ ಪ್ರಸಿದ್ದ ಆನೆಗೊಂದಿಯ ಅಂಜನಾದ್ರಿ ಬೆಟ್ಟಕ್ಕೆ ಇಂದು ಬೆಳ್ಳಂಬೆಳಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ ನೀಡಿ ಆಂಜನೇಯ ದೇವರ ದರ್ಶನ ಪಡೆದರು. ಉತ್ತರ ಕರ್ನಾಟಕದ ಪ್ರವಾಸ ಹಮ್ಮಿಕೊಂಡಿರುವ ಸಚಿವ ಯೋಗೇಶ್ವರ್ ಅವರು ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಕುಟುಂಬ ಸಮೇತ ಅಂಜಿನಾದ್ರಿ ಬೆಟ್ಟ ಹತ್ತಿ ಆಂಜನೇಯನಿಗೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು. ಅಂಜನಾದ್ರಿ ಬೆಟ್ಟವನ್ನು ವಿಶ್ವ ಮಟ್ಟದಲ್ಲಿ ಪ್ರವಾಸೋದ್ಯಮವನ್ನಾಗಿ ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆ ರೂಪಿಸಲಾಗಿದ್ದು ಇದರ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಕೊಪ್ಪಳ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಇವರೊಟ್ಟಿಗೆ ಬಿಜೆಪಿ ನಾಯಕಿ ಹಾಗೂ ಖ್ಯಾತ ನಟಿ ಶೃತಿ ಅವರು ಆಗಮಿಸಿ ಅಂಜನಾದ್ರಿ ದೇವರ ದರ್ಶನ ಪಡೆದರು. ಕೇರಳದಲ್ಲಿ ಸಿನಿ ಥಿಯೇಟರ್‌ಗಳತ್ತ ಜನರ ಸೆಳೆಯಲು ಹೊಸ ತಂತ್ರ

View full article
18 views04:18
ओपन / कमेंट