Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 9

2021-06-25 10:18:06
ಬಂಟ್ವಾಳ: ಶ್ರೀಗಂಧ ಮರ ಕಡಿದು ಮಾರಾಟ ಹಾಗೂ 'ಉಡ' ಭಕ್ಷಣೆಗೆ ಯತ್ನ: ಆರೋಪಿಗಳ ಬಂಧನ

ಬಂಟ್ವಾಳ: ರಕ್ಷಿತಾ ಅರಣ್ಯವೊಂದರಿಂದ ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಳವು ಮಾಡಿ ಕಡಿದು ಬಳಿಕ ಮಾರಾಟ ಮಾಡಲು ಯತ್ನಿಸಿದ ವೇಳೆ ಮಿಂಚಿನ ಕಾರ್ಯಚರಣೆ ನಡೆಸಿದ ಬಂಟ್ಚಾಳ ವಲಯ ಆರಣ್ಯಾಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾತೂರು ನಿವಾಸಿ ಇಬ್ರಾಹಿಂ, ಹಾಗೂ ಇರಾ ಗ್ರಾಮದ ಮೊಯಿದ್ದೀನ್ ಬಂಧಿತ ಆರೋಪಿಗಳು‌. ಕಾರ್ಯಚರಣೆ ವೇಳೆ ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ಎಂಬ ಇಬ್ಬರು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿಲಾಗಿದೆ. ಬಂಟ್ವಾಳ ತಾಲೂಕಿನ ವೀರಕಂಬ ರಕ್ಷಿತಾ ಅರಣ್ಯದಿಂದ ಆರೋಪಿಗಳು ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಟ ಮಾಡಲು ತಯಾರಿ ನಡೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

View full article
25 views07:18
ओपन / कमेंट
2021-06-25 07:18:11
ಅಮೆರಿಕದಲ್ಲಿ ಭೀಕರ ಬರಗಾಲ! ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ!

ಪ್ರಕೃತಿಯ ಮೇಲೆ ದೌರ್ಜನ್ಯ ಎಸಗಿದ್ದರ ಫಲವನ್ನು ಮನುಷ್ಯ ನಿಧಾನವಾಗಿ ಅನುಭವಿಸುತ್ತಿದ್ದಾನೆ. ಅದರಲ್ಲೂ ಅಮೆರಿಕ ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಹೋಗಿದೆ. ಇನ್ನು ಈಗ ತಾನೆ ಕೊರೊನಾ ಕೊಟ್ಟಿರುವ ಏಟಿನಿಂದ ಹೊರಬರುತ್ತಿರುವ ಅಮೆರಿಕನ್ನರಿಗೆ, ಮಳೆಯಾಗದ ಪರಿಣಾಮ ಭೀಕರ ಬರಗಾಲ ಮತ್ತೊಂದು ಶಾಕ್ ನೀಡಿದೆ. ಕೊಲೊರಾಡೋ ನದಿಗೆ ಅಡ್ಡಲಾಗಿ ನೆವಾಡಾ ಮತ್ತು ಅರಿಜೋನ ಗಡಿಯಲ್ಲಿ ನಿರ್ಮಿಸಿರುವ ಹೂವರ್ ಡ್ಯಾಂನ ನೀರಿನ ಮಟ್ಟ ಭಾರಿ ಕುಸಿತ ಕಂಡಿದೆ.

View full article
38 views04:18
ओपन / कमेंट
2021-06-25 07:18:09
ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಕುರಿತು ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ!

ಬೆಂಗಳೂರು, ಜೂ. 24: ಕೊರೊನಾ ವೈರಸ್ ಮಹಾಮಾರಿ ಕಳೆದ ಒಂದೂವರೆ ವರ್ಷಗಳಿಂದ ಇಡೀ ವಿದ್ಯಾರ್ಥಿ ಸಮೂಹದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವಂತೂ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಕೊರೊನಾ ವೈರಸ್ ರೂಪಾಂತರಿ ತಳಿ ವರ್ಷದಿಂದ ವರ್ಷಕ್ಕೆ ಹೊಸ ಸಮಸ್ಯೆಗಳನ್ನು ತಂದಿಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ವೈರಸ್ ಪ್ರಭಾವ ಸಾಕಷ್ಟಾಗುತ್ತಿದೆ. ವಿದ್ಯಾರ್ಥಿಗಳ ಜೀವಕ್ಕೆ ಮಹತ್ವ ಕೊಟ್ಟು ಅವರ ಜೀವನ ರೂಪಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಹಾಗಂತ ಎಲ್ಲರಿಗೂ ಲಸಿಕೆ ಹಾಕಿಸಿ ನೇರ ತರಗತಿಗಳನ್ನು ಆರಂಭಿಸುವುದು ಕೂಡ ಸಾಧ್ಯವಿಲ್ಲ. ಹೀಗಾಗಿ ಯಾವ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಬೇಕು? ಯಾರಿಗೆ ಹಾಕಬಾರದು ಎಂಬುದರ ಬಗ್ಗೆ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

View full article
35 views04:18
ओपन / कमेंट
2021-06-25 07:18:07
ಕೊರೊನಾವೈರಸ್ ಭಯದಿಂದ ಮನೆಯಲ್ಲಿ ಇದ್ದುಕೊಂಡೇ ಪ್ರಾಣ ಬಿಟ್ಟವರು 910 ಮಂದಿ!

ಬೆಂಗಳೂರು, ಮೇ 24: ಕೊರೊನಾವೈರಸ್ ಸೋಂಕಿನ ಲಕ್ಷಣಗಳೇ ಇಲ್ಲ. ಮನೆಯಲ್ಲಿ ಇದ್ದುಕೊಂಡೇ ನಾವು ಗುಣಮುಖರಾಗುತ್ತೇವೆ. ಕೊವಿಡ್-19 ಸೋಂಕಿನ ಸೌಮ್ಯ ಲಕ್ಷಣಗಳಿವೆ. ಗೃಹ ದಿಗ್ಬಂಧನದಲ್ಲಿ ಇದ್ದವರಿಗೆ ಸಾವಿನ ಅಪಾಯವಿಲ್ಲ ಎಂದು ನೆಚ್ಚಿಕೊಳ್ಳುವಂತಿಲ್ಲ. ಬೆಂಗಳೂರಿನಲ್ಲಿ ಹೋಮ್ ಐಸೋಲೇಟ್ ಆಗಿದ್ದ 910 ಕೊವಿಡ್-19 ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಕಳೆದ ಮಾರ್ಚ್ 1 ರಿಂದ ಜೂನ್ 15ರವರೆಗೂ ಎಷ್ಟು ಜನರು ಗೃಹ ದಿಗ್ಬಂಧನದಲ್ಲಿ ಇದ್ದರು, ಈ ಪೈಕಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಅಂಕಿ-ಅಂಶಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲೆಕ್ಕ ಪರಿಶೋಧನಾ ಸಮಿತಿಯು ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 4,436 ಹೊಸ ಪ್ರಕರಣ ದಾಖಲು ಕಳೆದ 46 ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೋಮ್ ಐಸೋಲೇಟ್ ಆಗಿದ್ದ 910 ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ.

View full article
28 views04:18
ओपन / कमेंट
2021-06-25 07:18:04
ರಾಜ್ಯ ಸರ್ಕಾರದಿಂದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಶಾಲೆಗಳಲ್ಲಿ ಜೂನ್-ಜುಲೈ ತಿಂಗಳು ಕೆನೆಭರಿತ ಹಾಲಿನ ಪುಡಿ ವಿತರಣೆಗೆ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, 2021-22 ನೇ ಸಾಲಿನಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್ ಮತ್ತು ಜುಲೈ ತಿಂಗಳ ಪ್ರತಿ ವಿದ್ಯಾರ್ಥಿಗೆ ಅರ್ಧ ಕೆಜಿಯಂತೆ ಕೆನೆಭರಿತ ಹಾಲಿನ ಪುಡಿ ವಿತರಣೆ ಮಾಡುವಂತೆ ಸೂಚಿಸಿದೆ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆ : ಸಚಿವ ಡಾ.ಕೆ. ಸುಧಾಕರ್ ರಾಜ್ಯ ಸರ್ಕಾರವು ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರಾಥಮಿಕ ಶಿಕ್ಷಣ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮದಡಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್ ಮತ್ತು ಜುಲೈ 2021 ರ ಮಾಹೆಗಳಿಗೆ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳ ಅರ್ಧ ಕೆಜಿಯಂತೆ ಹಾಲಿನ ಪುಡಿಯ ಪ್ಯಾಕೆಟ್ ಗಳನ್ನು ಕರ್ನಾಟಕ ಸರ್ಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಂಸ್ಥೆಯಿಂದ ಖರೀದಿಸಿ ವಿತರಣೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.

View full article
28 views04:18
ओपन / कमेंट
2021-06-25 04:18:07
ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ರೈಲು​ ಪ್ರಯಾಣಕ್ಕೆ ಕ್ಷಣಗಣನೆ..! ಇನ್ನು ಯಾವ್ಯಾವ ರಾಷ್ಟ್ರಪತಿಗಳು ಈ‌ ವಿಶೇಷ ರೈಲನ್ನ ಏರಿದ್ದಾರೆ ಗೊತ್ತಾ.?

ರಾಷ್ಟ್ರಪತಿಗಳ 2 ಕೋಚ್​​ ವಿಶೇಷ ರೈಲು ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ಹಳಿಗಳ ಮೇಲೆ ಉರುಳಲು ಸಜ್ಜಾಗಿದೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಈ ವಿಶೇಷ ರೈಲಿನಲ್ಲಿ ದೆಹಲಿಯ ಸಫ್ದರ್​​ಗಂಜ್​​ ನಿಲ್ದಾಣದಿಂದ ತಮ್ಮ ತವರು ಕಾನ್ಪುರಕ್ಕೆ ಜೂನ್​​ 25ರ ಇಂದು ಪ್ರಯಾಣಿಸಲಿದ್ದಾರೆ.ರಾಷ್ಟ್ರಪತಿ ಆದ ಬಳಿಕ ರಾಮನಾಥ್​ ಕೋವಿಂದ್​ ಇದೇ ಮೊದಲ ಬಾರಿಗೆ ತವರಿಗೆ ಭೇಟಿ ನೀಡುತ್ತಿದ್ದಾರೆ. ಈ ರೈಲು ಮಾರ್ಗ ಮಧ್ಯದಲ್ಲಿ ಝಿಂಝಕ್​ ಹಾಗೂ ರುರಾದಲ್ಲಿ ನಿಲ್ಲಲಿದೆ. ಇಲ್ಲಿ ಕೋವಿಂದ್​ ತಮ್ಮ ಪರಿಚಯಸ್ಥರನ್ನ ಭೇಟಿಯಾಗಲಿದ್ದಾರೆ. ಅಂದಹಾಗೆ ರಾಷ್ಟ್ರಪತಿ ಈ ರೀತಿ ಪ್ರೆಸಿಡೆನ್ಶಿಯಲ್​ ಸಲೂನ್​ ಏರುತ್ತಿರೋದು ಇದೇ ಮೊದಲನೇಲ್ಲ. ಈ ರಾಷ್ಟ್ರಪತಿ ಸಲೂನ್​ನ್ನು ಕೊನೆಯ ಬಾರಿಗೆ ಡಾ. ಎಪಿಜೆ ಅಬ್ದುಲ್​ ಕಲಾಂ 2004ರಲ್ಲಿ ಏರಿದ್ದರು. ಸೆಪ್ಟೆಂಬರ್​ 29 - 1952 ರಲ್ಲಿ ಡಾ.

View full article
46 views01:18
ओपन / कमेंट
2021-06-24 19:18:13
ಪರಿಸರ ಮಾಲಿನ್ಯದಿಂದ ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಪ್ರಮಾಣ ಕುಸಿತ!

ಹಾರ್ಮೋನ್‌ಗಳ ಪ್ರಭಾವದಿಂದ ಮುಗ್ಧತೆ ಕಡಿಮೆಯಾಗಿ ಕಾಮದ ಆಸೆಗಳು ಹೆಚ್ಚಾಗುತ್ತವೆ, ಅನೇಕ ತಪ್ಪುಗಳು ನಡೆಯುತ್ತವೆ. ಟೆಸ್ಟಾಸ್ಟೆರಾನ್ ಎಂಬ ರಾಜ ಮನಸ್ಸೆಂಬ ರಾಜ್ಯವನ್ನು ತನ್ನ ಹತೋಟಿಗೆ ತೆಗೆದುಕೊಂಡು ಮೋಹವೆಂಬ ಮಾಯೆಯ ಶಕ್ತಿಯಿಂದ ಆಳಲು ಆರಂಭಿಸುತ್ತಾನೆ. ಇದನ್ನೇ ವಯಸ್ಸಿನ ಪ್ರಭಾವ ಮೋಹ ಎಂದು ಕರೆಯುತ್ತೇವೆ. ಪ್ರತಿನಿತ್ಯ ಎರಡು ವೃಷಣಗಳಲ್ಲಿ ನೂರಾರು ಕೋಟಿ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ.

View full article
50 views16:18
ओपन / कमेंट
2021-06-24 19:18:12
ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿ

ಕಾರವಾರ, ಜೂನ್ 24: ಸೀಬರ್ಡ್ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಿ, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲು ಶಿಪ್‌ಯಾರ್ಡ್ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ವಿನಂತಿಸಿದ್ದಾರೆ. ತಮ್ಮ ಕ್ಷೇತ್ರದ ಕಾರವಾರ ಹಾಗೂ ಅಂಕೋಲಾ ಈ ಎರಡೂ ತಾಲೂಕಿನ 4604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತವಾಗಿವೆ. ಈ ಕುಟುಂಬಗಳು ನಿರಾಶ್ರಿತವಾಗಿ 3 ದಶಕಗಳಾದರೂ ಸಮಾಜದಲ್ಲಿ ಗೌರವಯುತ ಬದುಕು ಕಂಡುಕೊಳ್ಳುವಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಸದ್ಯ ಕೇವಲ 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಕಾರವಾರ: ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೌಕಾನೆಲೆ ನಿರಾಶ್ರಿತರು ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಮನೆ, ಭೂಮಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ.

View full article
46 views16:18
ओपन / कमेंट
2021-06-24 19:18:10
ಶಿಕ್ಷಕರಿಗೆ ಬಿಗ್ ಶಾಕ್ : 'ಕಾನೂನು ಬಾಹಿರವಾಗಿ ನಿಯೋಜನೆ'ಗೊಂಡ ಶಿಕ್ಷಕರು ಕೂಡಲೇ ಮೂಲ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿ - 'ಶಿಕ್ಷಣ ಇಲಾಖೆ' ಆದೇಶ

ಬೆಂಗಳೂರು : ಕಾನೂನು ಬಾಹಿರವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನಿಯೋಜಿತ ಶಿಕ್ಷಕರು, ಕೂಡಲೇ ಮೂಲ ಶಾಲೆಗಳಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಆದೇಶಿದೆ. Big Breaking News : ಟ್ವಿಟ್ಟರ್ ಎಂಡಿ ಮನೀಶ್ ಮಹೇಶ್ವರಿ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿ ಹೈಕೋರ್ಟ್ ಸೂಚನೆ ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ(ಆಡಳಿತ)ರಾದಂತ ಡಾ.ರೂಪಶ್ರೀ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಉಪ ನಿರ್ದೇಶಕರುಗಳಿಗೆ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶರುಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸದೇ, ನಿಯಮಬಾಹಿರವಾಗಿ ಶಿಕ್ಷಕರನ್ನು ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ನಿಯೋಜನೆ ಮಾಡಿರುವುದು ಕಂಡು ಬಂದಿದೆ.

View full article
38 views16:18
ओपन / कमेंट
2021-06-24 16:18:14
ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಹೇಗೆ?

ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುವ ಭೀತಿ ನಡುವೆ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ. ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ಹೈಕೋರ್ಟಿನಲ್ಲಿ ವಿಚಾರಣೆಯನ್ನು ವಾಟ್ಸಾಪ್ ಎದುರಿಸುತ್ತಿದೆ. ಟೆಲಿಗ್ರಾಮ್ ಹಾಗೂ ಸಿಗ್ನಲ್ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ಗಳಿಗೆ ಪರಿಸ್ಥಿತಿಯ ಲಾಭ ದೊಡ್ಡ ಮಟ್ಟದಲ್ಲೇ ಆಗುತ್ತಿದೆ.

View full article
48 views13:18
ओपन / कमेंट