Get Mystery Box with random crypto!

Kannada News Daily

टेलीग्राम चैनल का लोगो kannadanewsdaily — Kannada News Daily K
टेलीग्राम चैनल का लोगो kannadanewsdaily — Kannada News Daily
चैनल का पता: @kannadanewsdaily
श्रेणियाँ: समाचार
भाषा: हिंदी
ग्राहकों: 209

Ratings & Reviews

2.50

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

1

1 stars

0


नवीनतम संदेश 10

2021-06-24 16:18:10
ಅಂತಾರಾಜ್ಯ ಬಸ್ ಸೇವೆ ಆರಂಭಿಸಿದ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಬೆಂಗಳೂರು, ಜೂನ್ 24: ರಾಜ್ಯದ ವಿವಿಧೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತಾರಾಜ್ಯ ಬಸ್ ಸಂಚಾರ ಆರಂಭಿಸುತ್ತಿದೆ. ಬೆಂಗಳೂರು, ಶಿವಮೊಗ್ಗ, ಮಂಗಳೂರಿನಿಂದ ಮುಂಬೈ, ಪುಣೆ, ಮೀರಜ್, ಪಂಡರಾಪುರ, ತುಳಜೀಪುರಕ್ಕೆ ಜೂನ್ 25ರಿಂದ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಪ್ರಯಾಣಿಕರನ್ನು ಹೊತ್ತು ಸಾಗಲಿದೆ. ಅನ್‌ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ! ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತಾರಾಜ್ಯ ಸಾರಿಗೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.

View full article
46 views13:18
ओपन / कमेंट
2021-06-24 16:18:09
BIG BREAKING NEWS : ರಾಜ್ಯದಲ್ಲಿನ 'ಸಾರ್ವಜನಿಕ ಗ್ರಂಥಾಲಯ' ತೆರೆಯಲು 'ಸರ್ಕಾರ ಆದೇಶ'

ಬೆಂಗಳೂರು : ಕೊರೋನಾ ತಡೆಯ ಮಾರ್ಗಸೂಚಿ ಕ್ರಮಗಳಾದಂತ ಮಾಸ್ಕ್ ಧರಿಸೋದು, ಸ್ವಚ್ಛತೆ ಕಾಪಾಡೋದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು, ರಾಜ್ಯದಲ್ಲಿನ ಸಾರ್ವಜನಿಕ ಗ್ರಂಥಾಲಯಗಳನ್ನು, ತಾತ್ಕಾಲಿಕವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ತೆರೆಯುವಂತೆ ರಾಜ್ಯ ಸರ್ಕಾರ ಆದೇಶಿದೆ. KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದಿಂದ ಈ ಹೊರ ರಾಜ್ಯಗಳಿಗೂ ಸಾರಿಗೆ ಬಸ್ ಸಂಚಾರ ಆರಂಭ ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಸಾಮಾನ್ಯ) ಸರ್ಕಾರದ ಅಧೀನ ಕಾರ್ಯದರ್ಶಿ ಭಾಗ್ಯ ಬಿಎನ್ ಅವರು ನಡವಳಿ ಹೊರಡಿಸಿದ್ದು, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ, ನಗರ, ತಾಲೂಕು, ಶಾಖಾ, ಸೇವಾ, ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯಗಳ ಸೇವೆಯನ್ನು ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದ್ದು, ಈಗ ಸರ್ಕಾರ 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗಿದ್ದು, ಉಳಿದ 13 ಜಿಲ್ಲೆಗಳಲ್ಲಿ ದಿನಾಂಕ 22-06-2021 ರಿಂದ 05-07-2021ರವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

View full article
39 views13:18
ओपन / कमेंट
2021-06-24 16:18:06
BIG BREAKING: ರಾಜ್ಯದಲ್ಲಿಂದು ಕೊರೋನಾ ಮತ್ತಷ್ಟು ಇಳಿಕೆ -ಇಲ್ಲಿದೆ ಜಿಲ್ಲಾವಾರು ಸೋಂಕಿತರು, ಸಾವಿನ ಸಂಖ್ಯೆ..?

ಬೆಂಗಳೂರು: ರಾಜ್ಯದಲ್ಲಿ ಇಂದು 3979 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 28,23,444 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 138 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 34,425 ಸೋಂಕಿತರು ಮೃತಪಟ್ಟಿದ್ದಾರೆ. 9768 ಜನ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 26,78,473 ಜನ ಗುಣಮುಖರಾಗಿದ್ದಾರೆ. 1,10,523 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 2.46 ರಷ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 969 ಜನರಿಗೆ ಸೋಂಕು ತಗಲಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. 3176 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 67,036 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

View full article
36 views13:18
ओपन / कमेंट
2021-06-24 16:18:04
BIG BREAKING NEWS : ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಕೆ : ಇಂದು 3,979 ಜನರಿಗೆ ಕೋವಿಡ್ ದೃಢ, 138 ಜನರು ಸಾವು

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಅಬ್ಬರ ಇಳಿಕೆಯತ್ತ ಸಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,979 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 138 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದಿಂದ ಈ ಹೊರ ರಾಜ್ಯಗಳಿಗೂ ಸಾರಿಗೆ ಬಸ್ ಸಂಚಾರ ಆರಂಭ ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರದಲ್ಲಿ 969 ಜನರು ಸೇರಿದಂತೆ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 3,979 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 2823444ಕ್ಕೆ ಏರಿಕೆಯಾಗಿದೆ.

View full article
40 views13:18
ओपन / कमेंट
2021-06-24 13:18:10
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕೊಲೆ ಕೇಸ್​: ಕದಿರೇಶ್ ಸೋದರಿ ಮಾಲಾ ಮೇಲೆ ಪೊಲೀಸ್ ಕಣ್ಣು

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ ಸಂಬಂಧ ನಾದಿನಿ ಮಾಲಾ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ರೇಖಾರ ಪತಿ ಕದಿರೇಶ್​ರ ಸಹೋದರಿ ಮಾಲಾ ಮೇಲೆ ಹಲವು ಕೇಸ್​ಗಳಿವೆ. ಮುಂದಿನ‌ ಚುನಾವಣೆಯಲ್ಲಿ ತನ್ನ ಮಗಳನ್ನ ನಿಲ್ಲಿಸುವ ಪ್ಲ್ಯಾನ್ ಮಾಲಾಗೆ ಇತ್ತು. ಮಗಳನ್ನ ನಿಲ್ಲಿಸಲು ರೇಖಾ ಕದಿರೇಶ್ ಅಡ್ಡಗಾಲಾಗಿದ್ರು. ಅಲ್ಲದೆ ರೇಖಾಗೂ ಓರ್ವ ಮಗಳು, ಮಗನಿದ್ದಾನೆ. ಹೀಗಾಗಿ ಕೊಲೆ ಮಾಡಿದ್ರೆ ಸುಲಭವಾಗಿ ತನ್ನ ಮಗಳನ್ನು ಚುನಾವಣೆಗೆ ನಿಲ್ಲಿಸಬಹುದೆಂದು ಯೋಜನೆ ಇತ್ತು ಎಂಬ ಅನುಮಾನ ಮೂಡಿದೆ. ರೇಖಾರ ಸಹಚರ ಪೀಟರ್ ಜತೆ ಮಾಲಾ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಮಾಲಾಳನ್ನ ಕಾಟನ್​ಪೇಟೆ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ ರೇಖಾ ಪತಿ ಕದಿರೇಶ್​ನನ್ನು 3 ವರ್ಷದ ಹಿಂದೆ ಅವರ ಮನೆ ಬಳಿಯೇ ಹಾಡಹಗಲೇ ಶೋಭನ್ ಗ್ಯಾಂಗ್ ಕೊಲೆ ಮಾಡಿತ್ತು.

View full article
9 views10:18
ओपन / कमेंट
2021-06-24 10:18:09
ಬೆಂಗಳೂರು: ಎಲೆಕ್ಟ್ರಾನಿಕ್‌ಸಿಟಿ-ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು, ಜೂನ್ 24: ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿ-ಅತ್ತಿಬೆಲೆ ನಡುವಿನ ರಸ್ತೆ ಬಳಕೆ ಶುಲ್ಕವನ್ನು ಹೆಚ್ಚಿಸಲಾಗಿದೆ, ಈ ಪರಿಷ್ಕೃತ ದರವು ಜುಲೈ 1 ರಿಂದ ಜಾರಿಗೆ ಬರಲಿದೆ. ಟೋಲ್ ಇರುವ ಸುತ್ತಮುತ್ತಲೂ ಐಟಿ ಕಂಪನಿಗಳು, ಹಳವು ಕಾರ್ಖಾನೆಗಳು ಇವೆ, ಕೆಆರ್ ಮಾರುಕಟ್ಟೆಯನ್ನು ಸಿಂಗಸಂಧ್ರಕ್ಕೆ ಸ್ಥಳಾಂತರಿಸಲಾಗಿದೆ, ತರಕಾರಿ ವ್ಯಾಪಾರಿಗಳಿಗೆ ಟೋಲ್ ರಸ್ತೆಯನ್ನೇ ಬಳಸಿ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಟೋಲ್‌ಪ್ಲಾಜಾಗಳಲ್ಲಿ 100 ಮೀಟರ್‌ಗಿಂತ ಹೆಚ್ಚು ಸರತಿಯಿದ್ದರೆ ತೆರಿಗೆ ಪಾವತಿಸಬೇಕಿಲ್ಲ ಮಾಸಿಕ ಪಾಸ್ ದರವನ್ನು 45 ರೂ.

View full article
28 views07:18
ओपन / कमेंट
2021-06-24 10:18:07
ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಜೂನ್ 24ರ ಬೆಲೆ ತಿಳಿದುಕೊಳ್ಳಿ

ಸದ್ಯ ವಿಶ್ವದೆಲ್ಲೆಡೆ ಕ್ರಿಪ್ಟೋಕರೆನ್ಸಿಗಳ ಸದ್ದು ಜೋರಾಗಿದ್ದು, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನಿಷೇಧವಿದ್ದರೂ ಬೇಡಿಕೆ ಮಾತ್ರ ಸಂಪೂರ್ಣವಾಗಿ ತಗ್ಗಿಲ್ಲ, ಡಿಜಿಟಲ್ ಕರೆನ್ಸಿಗಳ ಕುರಿತು ಚರ್ಚೆ ಮುಂದುವರಿದಿದೆ. ಪ್ರಪಂಚದ ಅನೇಕ ದೇಶಗಳ ಸರ್ಕಾರಗಳ ಕಟ್ಟುನಿಟ್ಟಿನಿಂದಾಗಿ, ಬಿಟ್‌ಕಾಯಿನ್‌ನಿಂದ ಕೆಲವು ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಯುವಿಕೆಗೆ ಕಾರಣವಾಗಿದೆ. ಜೊತೆಗೆ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ.

View full article
27 views07:18
ओपन / कमेंट
2021-06-24 07:18:08
ಭೂಮಿ ಮೇಲಿನ ಪ್ರತಿ ರಸ್ತೆಯೂ 'ಚಿನ್ನ'ದ್ದೇ..! ಆದರೆ ಅದೊಂದು ಬಂಡೆ ಸಿಕ್ಕಬೇಕು ಅಷ್ಟೇ..!

ಭೂಮಿ ಮೇಲೆ ಇರುವ ಸಂಪತ್ತನ್ನು ಖಾಲಿ ಮಾಡಿದ್ದು ಆಯ್ತು ಈಗ ಬಾಹ್ಯಾಕಾಶದ ಮೇಲೂ ಮಾನವನ ಕಣ್ಣು ಬಿದ್ದಿದೆ. ಇಡೀ ಜಗತ್ತನ್ನೇ ಆಳಬೇಕು, ನಾವೇ ನಂ. 1 ಆಗಬೇಕು ಅಂತಾ ಪ್ರಪಂಚದ ಪ್ರತಿ ರಾಷ್ಟ್ರವೂ ಕನಸು ಕಾಣುತ್ತೆ. ಆದರೆ ಇದು ಅಷ್ಟು ಸುಲಭವಲ್ಲ, ಆದರೆ ಅದೊಂದು ಬಂಡೆ ಕಲ್ಲು ಸಿಕ್ಕರೆ ಸಾಕು ಇಡೀ ಜಗತ್ತನ್ನೇ ಆಳುವ ಶಕ್ತಿ ಬಂದುಬಿಡುತ್ತೆ. ಅರೆ ಯಾವುದಪ್ಪಾ ಬಂಡೆ ಕಲ್ಲು, ಆ ಬಂಡೆ ಕಲ್ಲಿನಲ್ಲಿ ಅಂತಹದ್ದು ಏನಿದೆ?

View full article
32 views04:18
ओपन / कमेंट
2021-06-24 07:18:07
ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿ

ಮೈಸೂರು, ಜೂನ್ 23: ತಮ್ಮ ಕಾರ್ಯವೈಖರಿ ಮೂಲಕ ಮೈಸೂರು ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇದೀಗ ಮಹಿಳಾ‌ ಐಪಿಎಸ್ ಅಧಿಕಾರಿ ಡಿ. ರೂಪಾ ಕಿಡಿಕಾರಿದ್ದಾರೆ. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿದ್ದ ರೋಹಿಣಿ ಸಿಂಧೂರಿ, ಮೈಸೂರು ಭಾಗದ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಐಎಎಸ್ ಅಧಿಕಾರಿಯ ಈ ನಡೆ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.‌ ಈ ನಡುವೆ ಈಜುಕೊಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ನೀಡಿದ್ದ ಪ್ರಾದೇಶಿಕ ಆಯುಕ್ತರು, ಪ್ರಮುಖ ನ್ಯೂನತೆಗಳು ಹಾಗೂ ಕಾನೂನು ನಿಯಮಗಳ ಉಲ್ಲಂಘನೆ ಆಗಿರುವುದಾಗಿ ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿರುವ ಐಪಿಎಸ್ ಅಧಿಕಾರಿ ಡಿ.‌ರೂಪಾ, "ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವನ್ನು ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು, ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ.

View full article
29 views04:18
ओपन / कमेंट
2021-06-24 07:18:05
ದೇಶದಲ್ಲಿ ಹೆಚ್ಚು ಬಿಸಿಲು ಹಾಗೂ ಹೆಚ್ಚು ತಂಪಾದ ಐದು ಪ್ರದೇಶಗಳಿವು...

ನವದೆಹಲಿ, ಜೂನ್ 23: ಒಳ್ಳೆ ಹವಾಮಾನಕ್ಕೆ ಭಾರತ ಹೆಸರುವಾಸಿ. ಇದೀಗ ಮುಂಗಾರು ಪ್ರವೇಶದ ನಂತರ ಬಿರುಸು ಮಳೆಯಾಗಿ ದೇಶದ ಕೆಲವು ಭಾಗಗಳಲ್ಲಿ ಬಿಸಿಲು ಕೂಡ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಸಾಮಾನ್ಯವಾಗಿ ಮಾರ್ಚ್‌ನಿಂದ ಬೇಸಿಗೆ ಆರಂಭವಾಗಿ ಸೆಪ್ಟೆಂಬರ್‌ವರೆಗೂ ಬಿಸಿಲು ಮುಂದುವರೆಯುತ್ತದೆ. ಈ ಸಮಯದಲ್ಲಿ ವಿದ್ಯುತ್ ಕಡಿತ, ನೀರಿನ ಅಭಾವದಿಂದ ಸೆಕೆ ಅನುಭವ ಇನ್ನಷ್ಟು ಹೆಚ್ಚಾಗಿಯೇ ಆಗುತ್ತದೆ. ಭಾರತೀಯ ಹವಾಮಾನ ಇಲಾಖೆ ಐದು ಅತಿ ಹೆಚ್ಚು ಉಷ್ಣಾಂಶ ದಾಖಲಾದ ಹಾಗೂ ಕನಿಷ್ಠ ಉಷ್ಣಾಂಶ ದಾಖಲಾದ ಪ್ರದೇಶಗಳನ್ನು ಪಟ್ಟಿ ಮಾಡಿದೆ. ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು; ಜಲಾಶಯಗಳ ನೀರಿನ ಮಟ್ಟ ಹೀಗಿದೆ... ರಾಜಸ್ಥಾನದ ಚುರು ನಗರದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ.

View full article
27 views04:18
ओपन / कमेंट